ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಆವೃತ್ತಿ

ಜನಪ್ರಿಯ ಮಾರುತಿ ಸುಜುಕಿ ಕಂಪನಿಯು 2020ರ ಆಟೋ ಎಕ್ಸ್ ಪೋದಲ್ಲಿ ತನ್ನ ಹೊಸ ಸ್ವಿಫ್ಟ್ ಹೈಬ್ರಿಡ್ ಮಾದರಿಯನ್ನು ಅನಾವರಣಗೊಳಿಸಿದೆ. ಇದು ಅಂತರರಾಷ್ಟ್ರೀಯ ಸ್ಪೆಕ್ ಸ್ವಿಫ್ಟ್ ಆರ್‍ಎಸ್‍‍ಗಿಂತ ಸ್ವಲ್ಪ ಭಿನ್ನವಾಗಿದೆ. ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಆವೃತ್ತಿ

ಸ್ವಿಫ್ಟ್ ಹೈಬ್ರಿಡ್ ಕಾರು ಜಪಾನ್‍‍ನಲ್ಲಿ ಈಗಾಗಲೇ ಮಾರಾಟದಲ್ಲಿದೆ. ಅಲ್ಲದೆ ಈ ಕಾರು ಎಸ್‍‍ಜಿ ಮತ್ತು ಎಸ್‍ಎಲ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಎಸ್‍ಹೆಚ್‍‍ವಿಎಸ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನಕ್ಕಿಂತ ಭಿನ್ನವಾಗಿ, ಈ ಮಾದರಿಯು ಫ್ಯೂರ್ ಹೈಬ್ರಿಡ್ ಆಗಿದ್ದು, ಪೆಟ್ರೋಲ್ ಎಂಜಿನ್‍‍ಗೆ ಸಹಾಯ ಮಾಡುವ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಈ ಕಾರು 3840 ಎಂಎಂ ಉದ್ದ, 1695 ಎಂಎಂ ಅಗಲ ಮತ್ತು 1500 ಎಂಎಂ ಎತ್ತರವನ್ನು ಹೊಂದಿದೆ. ಇನ್ನೂ ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಆವೃತ್ತಿಯು 2450 ಎಂಎಂ ವ್ಹೀಲ್‍ಬೇಸ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಆವೃತ್ತಿ

ಈ ಹೊಸ ಕಾರು 1.2 ಲೀಟರ್ ಪೆಟ್ರೋಲ್, 4 ಸಿಲಿಂಡರ್ ಡ್ಯುಯಲ್‍‍ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 10 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಜನರೇಟ್‍‍ರ್‍‍ನೊಂದಿಗೆ ಮುಂಭಾಗದ ಟಯರ್‍‍ಗಳಿಗೆ ಮಾತ್ರ ಪವರ್ ಅನ್ನು ರವಾನಿಸುತ್ತದೆ. ಗ್ಯಾಸೋಲಿನ್ ಯುನಿಟ್ 89ಬಿ‍‍ಹೆಚ್‍ಪಿ ಪವರ್ ಮತ್ತು 118 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೈಬ್ರಿಡ್ ಎಂಜಿನ್‍‍ನೊಂದಿಗೆ 5 ಸ್ಪೀಡ್ ಎಎಂಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಕಾರು 32 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಆವೃತ್ತಿ

ಮಾರುತಿ ಸ್ವಿಫ್ಟ್ ಹೈಬ್ರಿಡ್‍‍ನಲ್ಲಿ ಸಾಮಾನ್ಯ ಮಾದರಿಗಿಂತ ಕೆಲವು ನವೀಕರಣಗಳನ್ನು ಮಾಡಲಾಗಿದೆ. ಹ್ರೈಬ್ರಿಡ್ ಆವೃತ್ತಿಯು ಕಡಿಮೆ ವೇಗದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಮೋಡ್‍‍ನಲ್ಲಿ ಚಲಾಯಿಸಬಹುದಾಗಿದೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ನಲ್ಲಿ ಹೈಬ್ರಿಡ್ ಬ್ಯಾಡ್ಜ್ ಹೊರತುಪಡಿಸಿದರೆ ಸಾಮಾನ್ಯ ಮಾದರಿಗೆ ಹೋಲುತ್ತದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಆವೃತ್ತಿ

ಈ ಕಾರು ಡ್ಯುಯಲ್ ಕ್ಯಾಮೆರಾ ಬ್ರೇಕ್ ಸಪೋರ್ಟ್ ಮತ್ತು ಪ್ಯಾಡಲ್ ಶಿಫ್ಟರ್ ನಂತಹ ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ 1.2 ಲೀಟರ್ ಕೆ ಸೀರಿಸ್ ಪೆಟ್ರೋಲ್ ಮತ್ತು 1.3 ಲೀಟರ್ ಎಂಜೆಡಿ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಆವೃತ್ತಿ

ಇನ್ನೂ ಮಾರುತಿ ಸುಜುಕಿಯು ಸ್ವಿಫ್ಟ್ ಹೈಬ್ರಿಡ್‍‍ಗಾಗಿ ಗ್ರಾಹಕರ ಪ್ರತಿಕ್ರಿಯೆಯನ್ನು ಗಮನಿಸಿ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದರೆ ಈ ಕಾರನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಸ್ವಿಫ್ಟ್ ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸುವಾಗ ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಅಭಿವೃದ್ದಿಪಡಿಸುತ್ತಾರೆ.

More from DriveSpark

Article Published On: Wednesday, February 5, 2020, 10:31 [IST]
English summary
Maruti Suzuki Swift Hybrid revealed at Auto Expo 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+