ಐಷಾರಾಮಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍ಲಿಫ್ಟ್ ಕಾರಿನ ಟೀಸರ್ ಚಿತ್ರ ಬಿಡುಗಡೆ
ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ 2020ರ ಇ-ಕ್ಲಾಸ್ ಫೇಸ್‍ಲಿಫ್ಟ್ ಕಾರನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. 2020ರ ಇ-ಕ್ಲಾಸ್ ಫೇಸ್‍ಲಿಫ್ಟ್ ಹೊಸ ಪ್ಲಗ್-ಇನ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ.

2020ರ ಬೆಂಝ್ ಇ-ಕ್ಲಾಸ್ ಕಾರಿನ ಟೀಸರ್ ಚಿತ್ರವು ಬಿಡುಗಡೆಗೊಳಿಸಿದೆ. ಇದರಿಂದ ಹಲವು ಪ್ರಮುಖ ಮಾಹಿತಿಗಳು ಬಹಿರಂಗವಾಗಿದೆ. ಅದರ ಪ್ರಕಾರ ಹೊಸ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರು ಶಾರ್ಪ್ ಹೆಡ್‍ಲ್ಯಾಂಪ್‍ಗಳು ಮತ್ತು ಎಲ್‍ಇಡಿ ಡಿಆರ್‍ಎಲ್‍ಗಳನ್ನು ಹೊಂದಿವೆ. ಈ ಕಾರಿನ ಸೈಡ್ ಪ್ರೊಫೈಲ್ ಒಂದೇ ರೀತಿಯಲ್ಲಿ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಕಾರು ಹಿಂಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮತ್ತು ಮರು ವಿನ್ಯಾಸಗೊಳಿಸಿದ ಎಲ್‍ಇಡಿ ಟೇಲ್ ಲ್ಯಾಂಪ್‍ಗಳನ್ನು ಒಳಗೊಂಡಿರುತ್ತದೆ. ಇದು ಇತರ ಬೆಂಝ್ ಕಾರುಗಳ ಟೇಲ್‍ಲ್ಯಾಂಪ್‍ಗಳಿಗಿಂತ ನಯವಾಗಿದೆ.

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಇ-ಕ್ಲಾಸ್ ಫೇಸ್‍ಲಿಫ್ಟ್ ಕಾರಿನ ಇಂಟಿರಿಯರ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ಇದು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿರುವ ಇ-ಕ್ಲಾಸ್ ಮಾದರಿಯಲ್ಲ್ ಟ್ವಿನ್ ಡಿಸ್‍ಪ್ಲೇಯನ್ನು ಹೊಂದಿರಬಹುದು.

ಮರ್ಸಿಡಿಸ್ ತಮ್ಮ ಎಂಬಿಯುಎಕ್ಸ್ ತಂತ್ರಜ್ಞಾನವನ್ನು ಹೊಸ ಇ-ಕ್ಲಾಸ್ ಕಾರಿನಲ್ಲಿ ಅಳವಡಿಸಬಹುದು. ಇದರೊಂದಿಗೆ ಕಾರಿನ ಇಂಟಿರಿಯರ್‍ನಲ್ಲಿ ಆ್ಯಪಲ್ ಕಾರ್‍ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಜೊತೆಯಲ್ಲಿ ಕಾರಿನ ಇತರ ಪೀಚರ್‍ಗಳು ಕ್ಲೈಮೆಂಟ್ ಕಂಟ್ರೋಲ್, ವೆಂಟಿಲೆಟಡ್, ಹಿಟಡ್ ಸೀಟ್ ಮತ್ತು ಏರ್ ಸಸ್ಪೆಂಷನ್‍ಗಳಾಗಿದೆ.

ಈ ಕಾರಿನಲ್ಲಿ ಸುರಕ್ಷತೆಗಾಗಿ ಎಂಟು ಏರ್‍ಬ್ಯಾಗಗಳು, ಇಬಿಡಿಯೊಂದಿಗೆ ಎಬಿಎಸ್, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‍ಗಳು, 360 ಡಿಗ್ರಿ ಕ್ಯಾಮೆರಾ ಮತ್ತು ಇತರ ಸುರಕ್ಷತಾ ಫೀಚರ್‍ಗಳನ್ನು ಹೊಂದಿರುತ್ತದೆ.

ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍ಲಿಫ್ಟ್ ಮಾದರಿಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಇದೀಗ ಹೊಸ ಇ-ಕ್ಲಾಸ್ ಫೇಸ್‍ಲಿಫ್ಟ್ ಕಾರಿಗೆ ಹ್ರೈಬ್ರಿಡ್ ಎಂಜಿನ್‍ನೊಂಡಿಗೆ ಬಿಡುಗಡೆಯಾಗಲಿದೆ.

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೆಂಝ್ ಇ-ಕ್ಲಾಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.59.08 ಲಕ್ಷದಿಂದ ರೂ.1.5 ಕೋಟಿಗಳಾಗಿದೆ. ಮರ್ಸಿಡಿಸ್ ಬೆಂಝ್ ಕಂಪನಿಯ ಸರಣಿಯಲ್ಲಿ ಜನಪ್ರಿಯ ಕಾರುಗಳಲ್ಲಿ ಇದು ಕೂಡ ಒಂದಾಗಿದೆ.

ಹೊಸ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍ಲಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೂಂ ಪ್ರಕಾರ ರೂ.66 ಲಕ್ಷದಿಂದ ರೂ.1.8 ಕೋಟಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍ಲಿಫ್ಟ್ ಕಾರು ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








