2020ರ ಮೊದಲ ಜಿ‍ಎಲ್‍ಇ ಎಸ್‍‍ಯುವಿಯನ್ನು ವಿತರಿಸಿದ ಮರ್ಸಿಡಿಸ್ ಬೆಂಝ್

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಹೊಸ ಜಿಎಲ್‍ಇ ಎಸ್‍ಯುವಿಯನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. 2020ರ ಬೆಂಝ್ ಜಿಎಲ್ಇ ಎಸ್‍ಯುವಿಯ ವಿತರಣೆಯು ಪ್ರಾರಂಭವಾಗಿದೆ.

2020ರ ಮೊದಲ ಜಿ‍ಎಲ್‍ಇ ಎಸ್‍‍ಯುವಿಯನ್ನು ವಿತರಿಸಿದ ಮರ್ಸಿಡಿಸ್ ಬೆಂಝ್

ದೇಶದಲ್ಲೇ ಮೊದಲ 2020ರ ಜಿ‍‍ಎಲ್‍ಇ ಎಸ್‍‍ಯುವಿಯನ್ನು ಕೇರಳದ ಕೊಚ್ಚಿ ಮೂಲದ ರಾಜಶ್ರೀ ಮೋಟಾರ್ಸ್ ರಾಯ್ ಕುರಿಕ್ ಎಂಬವರಿಗೆ ವಿತರಣೆಯನ್ನು ಮಾಡಿದೆ. 2020ರ ಬೆಂಝ್ ಜಿಎಲ್ಇ ಎಸ್‍‍ಯುವಿಯು ಎರಡು ವೆರಿಯೆಂಟ್‍‍ನಲ್ಲಿ ಲಭ್ಯವಿದೆ. ಇದರಲ್ಲಿ ಬೇಸ್ ಡಿ ರೂಪಾಂತರದ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.73.70 ಲಕ್ಷಗಳಾಗಿದೆ. ಇನ್ನೂ ಟಾಪ್-ಸ್ಪೆಕ್ ಜಿಎಲ್ಇ 400ಡಿ ಎಲ್‍‍ಡಬ್ಲ್ಯುಬಿ (ಹಿಪ್-ಹಾಪ್ ಎಡಿಷನ್) ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.25 ಕೋಟಿಗಳಾಗಿದೆ.

2020ರ ಮೊದಲ ಜಿ‍ಎಲ್‍ಇ ಎಸ್‍‍ಯುವಿಯನ್ನು ವಿತರಿಸಿದ ಮರ್ಸಿಡಿಸ್ ಬೆಂಝ್

ಜಿ‍ಎಲ್‍ಇ ಎಸ್‍‍ಯುವಿ ಈ ಮೊದಲು ಮರ್ಸಿಡಿಸ್ ಕಂಪನಿಯ ಎಂ‍ಎಲ್ ಕ್ಲಾಸ್ ಸರಣಿಯಲ್ಲಿತ್ತು. 2020ರ ಬೆಂಝ್ ಜಿಎಲ್ಇ ಮರ್ಸಿಡಿಸ್ ಕಂಪನಿಯ ಎಂಟ್ರಿ ಲೆವೆಲ್ ಎಸ್‍‍ಯುವಿಯಾಗಿದೆ.

2020ರ ಮೊದಲ ಜಿ‍ಎಲ್‍ಇ ಎಸ್‍‍ಯುವಿಯನ್ನು ವಿತರಿಸಿದ ಮರ್ಸಿಡಿಸ್ ಬೆಂಝ್

ಹೊಸ ಬೆಂಝ್ ಜಿಎಲ್ಇ ಎಸ್‍‍ಯು‍ವಿಯು ಆಕರ್ಷಕ ಲುಕ್ ಹೊಂದಿದ್ದು, ಮೊದಲ ತಲೆಮಾರಿನ ಜಿಎಲ್ಇ ಎಸ್‍‍ಯು‍ವಿಯ ಶೈಲಿಯಲ್ಲಿ ಮುಂದುವರೆದಿದೆ. ಈ ಎಸ್‍‍ಯುವಿಯು ಹೆಚ್ಚಿನ ಕ್ಯಾಬಿನ್ ಸ್ಪೇಸ್ ಅನ್ನು ಹೊಂದಿದೆ. ಬಿಡುಗಡೆಯಾಗಿರುವ ಬೆಂಝ್ ಕಾರು ಬಿ‍ಎಸ್6 ಎಂಜಿನ್ ಹೊಂದಿದೆ.

2020ರ ಮೊದಲ ಜಿ‍ಎಲ್‍ಇ ಎಸ್‍‍ಯುವಿಯನ್ನು ವಿತರಿಸಿದ ಮರ್ಸಿಡಿಸ್ ಬೆಂಝ್

ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಜಿ‍‍ಎಲ್‍ಇಗೆ ಹೋಲಿಸಿದರೆ, ಹೊಸ ಜಿ‍ಎಲ್‍ಇ ಎಸ್‍‍ಯುವಿಯು ಉದ್ದವಾದ ವ್ಹೀಲ್ ಬೇಸ್‍ ಹೊಂದಿರಲಿದೆ. ಇದರಿಂದಾಗಿ ಹೊಸ ಜಿ‍ಎಲ್‍‍ಇ 69 ಎಂಎಂಗೂ ಅಧಿಕವಾದ ಲೆಗ್‍‍ರೂಂ ಹೊಂದಿದೆ.

2020ರ ಮೊದಲ ಜಿ‍ಎಲ್‍ಇ ಎಸ್‍‍ಯುವಿಯನ್ನು ವಿತರಿಸಿದ ಮರ್ಸಿಡಿಸ್ ಬೆಂಝ್

ಮಾರುಕಟ್ಟೆಯಲ್ಲಿರುವ ಜಿ‍ಎಲ್‍ಇ ಎಸ್‍‍ಯುವಿಗೆ ಹೋಲಿಸಿದರೆ ಹೆಚ್ಚು ಸುಧಾರಿತವಾದ ಸಸ್ಪೆಂಷನ್ ಸೆಟ್‍ಅಪ್ ಹೊಂದಿದೆ. ಹೊಸ ಮರ್ಸಿಡಿಸ್ ಜಿ‍ಎಲ್‍ಇ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳಿಗಾಗಿ ಪ್ರತ್ಯೇಕವಾದ 12.3 ಇಂಚಿನ ಸ್ಕ್ರೀನ್‍‍ಗಳನ್ನು ಹೊಂದಿದೆ.

2020ರ ಮೊದಲ ಜಿ‍ಎಲ್‍ಇ ಎಸ್‍‍ಯುವಿಯನ್ನು ವಿತರಿಸಿದ ಮರ್ಸಿಡಿಸ್ ಬೆಂಝ್

ಹೊಸ ಎಸ್‍ಯುವಿಯ ಕ್ಯಾಬಿನ್‍‍‍ಗೆ ಪ್ರೀಮಿಯಂ ಅನುಭವವನ್ನು ನೀಡುವುದಕ್ಕಾಗಿ ಇಂಟಿರಿಯರ್‍‍ನಲ್ಲಿ ಕ್ಲೈಮೆಟ್ ಕಂಟ್ರೋಲ್ ಯುನಿಟ್, ಮರುವಿನ್ಯಾಸಗೊಳಿಸಲಾದ ಏರ್ ಕಂಡೀಷನಿಂಗ್ ವೆಂಟ್‍‍ಗಳಿವೆ.

2020ರ ಮೊದಲ ಜಿ‍ಎಲ್‍ಇ ಎಸ್‍‍ಯುವಿಯನ್ನು ವಿತರಿಸಿದ ಮರ್ಸಿಡಿಸ್ ಬೆಂಝ್

2020ರ ಬೆಂಝ್ ಜಿಎಲ್ಇ 300 ಡಿ ರೂಪಾಂರವು 1.9 ಲೀಟರ್, ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 245 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

2020ರ ಮೊದಲ ಜಿ‍ಎಲ್‍ಇ ಎಸ್‍‍ಯುವಿಯನ್ನು ವಿತರಿಸಿದ ಮರ್ಸಿಡಿಸ್ ಬೆಂಝ್

ಹೊಸ ಜಿಎಲ್ಇ ಎಸ್‍‍ಯು‍ವಿಯ 400 ಡಿ ರೂಪಾಂತರವು 2.9 ಲೀಟರ್ ಇನ್‍-ಲೈನ್ ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 330 ಬಿ‍ಹೆಚ್‍ಪಿ ಪವರ್ ಮತ್ತು 700 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಮಾದರಿಯ ಎಂಜಿನ್‍ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

2020ರ ಮೊದಲ ಜಿ‍ಎಲ್‍ಇ ಎಸ್‍‍ಯುವಿಯನ್ನು ವಿತರಿಸಿದ ಮರ್ಸಿಡಿಸ್ ಬೆಂಝ್

ಹೊಸ ಬೆಂಝ್ ಜಿಎ‍ಲ್ಇ ಎಸ್‍‍ಯು‍ವಿಯು ಆಕರ್ಷಕ ಲುಕ್ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಹೊ‍ಸ ಜಿಎಲ್ಇ ದೇಶಿಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್ 5, ಲ್ಯಾಂಡ್ ರೋವರ್ ಡಿಸ್ಕವರಿ, ಆಡಿ ಕ್ಯೂ 7 ಮತ್ತು ವೋಲ್ವೋ ಎಕ್ಸ್‌ಸಿ 90 ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, February 11, 2020, 19:41 [IST]
English summary
mercedes benz-gle 300d lwb first delivery in india details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+