ಐಷಾರಾಮಿ ಕಾರು ವಿಭಾಗದಲ್ಲಿ ಮುಂದುವರೆದ ಮರ್ಸಿಡಿಸ್ ಬೆಂಝ್ ಕಾರುಗಳ ಪಾರುಪತ್ಯ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ತನ್ನ ಪಾರುಪತ್ಯ ಮುಂದುವರಿಸಿದೆ. ಐಷಾರಾಮಿ ಕಾರುಗಳ ಸೆಗ್‍ಮೆಂಟ್‍‍ನಲ್ಲಿ ಸತತ ಐದನೇ ವರ್ಷವೂ ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಮಾರಾಟದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಐಷಾರಾಮಿ ಕಾರು ವಿಭಾಗದಲ್ಲಿ ಮುಂದುವರೆದ ಮರ್ಸಿಡಿಸ್ ಬೆಂಝ್ ಕಾರುಗಳ ಪಾರುಪತ್ಯ

ಕಳೆದ ವರ್ಷ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡ ಹಿನ್ನಲೆಯಲ್ಲಿ ಹಲವಾರು ಜನಪ್ರಿಯ ಕಂಪನಿಗಳ ಕಾರು ಮಾರಾಟದಲ್ಲಿ ಇಳಿಕೆಯಾಗಿತ್ತು. ಆದರೆ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಕಂಪನಿಯ ಸರಣಿಯಲ್ಲಿರುವ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷ ಬೆಂಝ್ ಕಾರುಗಳು ಉತ್ತಮವಾಗಿ ಮಾರಾಟವಾಗಿವೆ. ಇದರಿಂದ ಕೇವಲ ಒಂದು ವರ್ಷದ ಮರ್ಸಿಡಿಸ್ ಬೆಂಝ್ ಕಾರುಗಳ ಮಾರಾಟದಲ್ಲಿ ಶೇ.3.3 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಐಷಾರಾಮಿ ಕಾರು ವಿಭಾಗದಲ್ಲಿ ಮುಂದುವರೆದ ಮರ್ಸಿಡಿಸ್ ಬೆಂಝ್ ಕಾರುಗಳ ಪಾರುಪತ್ಯ

ಮರ್ಸಿಡಿಸ್ ಕಂಪನಿಯ ಮಾರಾಟದಲ್ಲಿ ಶೇ.15.41 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದಲ್ಲಿ ಮರ್ಸಿಡಿಸ್ ಬೆಂಝ್ ಕಾರುಗಳ ಒಟ್ಟು 13,786 ಯುನಿಟ್‍‍ಗಳಷ್ಟು ಮಾರಾಟವಾಗಿವೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವ ವೇಳೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗಿರುವುದರಿಂದ ಬೆಂಝ್ ಕಾರುಗಳ ಜನಪ್ರಿಯತೆಯನ್ನು ಮತ್ತಷ್ತು ಹೆಚ್ಚಿದೆ ಎಂದು ಹೇಳಬಹುದು.

ಐಷಾರಾಮಿ ಕಾರು ವಿಭಾಗದಲ್ಲಿ ಮುಂದುವರೆದ ಮರ್ಸಿಡಿಸ್ ಬೆಂಝ್ ಕಾರುಗಳ ಪಾರುಪತ್ಯ

ಮರ್ಸಿಡಿಸ್ ಕಂಪನಿಯು ತನ್ನ ಸರಣಿಯಲ್ಲಿರುವ ಹೊಸ 3 ಕಾರುಗಳನ್ನು ಕಳೆದ ವರ್ಷದ ಅಕ್ಟೋಬರ್‍‍‍ನಿಂದ ಡಿಸೆಂಬರ್ ಅವಧಿಯಲ್ಲಿ ಬಿಡುಗಡೆಗೊಳಿಸಿತ್ತು. ಕಳೆದ ವರ್ಷ ಬಿಡುಗಡೆಗೊಂಡ ಬೆಂಝ್ ಕಾರುಗಳು ಜಿ 350 ಡಿ, ವಿ-ಕ್ಲಾಸ್ ಮತ್ತು ಜಿಎಲ್‍ಸಿ ಕಾರುಗಳಾಗಿವೆ. ಇತ್ತೀಚಿಗೆ ಹಬ್ಬಗಳ ಸೀಸನ್‍‍ನಲ್ಲಿ ಮರ್ಸಿಡಿಸ್ ಬೆಂಝ್ ಕಾರುಗಳು ಉತ್ತಮವಾಗಿ ಮಾರಾಟವಾಗಿತ್ತು.

ಐಷಾರಾಮಿ ಕಾರು ವಿಭಾಗದಲ್ಲಿ ಮುಂದುವರೆದ ಮರ್ಸಿಡಿಸ್ ಬೆಂಝ್ ಕಾರುಗಳ ಪಾರುಪತ್ಯ

ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್ ಶ್ವೆಂಕ್ ಅವರು ಮಾತನಾಡಿ, 2019ರ ಮರ್ಸಿಡಿಸ್ ಬೆಂಝ್ ಕಾರುಗಳ ಮಾರಾಟದ ಬಗ್ಗೆ ನಾವು ತೃಪ್ತಿ ಹೊಂದಿದ್ದೇವೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡ ಸಂದರ್ಭದಲ್ಲೂ ಬೆಂಝ್ ಕಾರುಗಳು ಉತ್ತಮವಾಗಿ ಮಾರಾಟವಾಗಿವೆ ಎಂದರು.

ಐಷಾರಾಮಿ ಕಾರು ವಿಭಾಗದಲ್ಲಿ ಮುಂದುವರೆದ ಮರ್ಸಿಡಿಸ್ ಬೆಂಝ್ ಕಾರುಗಳ ಪಾರುಪತ್ಯ

ಮರ್ಸಿಡಿಸ್ ಬೆಂಝ್ ಕಾರುಗಳ ಮಾರಾಟವನ್ನು ಉಳಿದ ಐಷಾರಾಮಿ ಕಾರುಗಳ ಮಾರಾಟಕ್ಕೆ ಹೋಲಿಸಿದರೆ ಇದು ದೊಡ್ಡ ಸಾಧನೆಯಾಗಿದೆ. ಕಳೆದ ವರ್ಷ ಹೊಸ ಜನಪ್ರಿಯ ಕಾರುಗಳನ್ನು ಬಿಡುಗಡೆಗೊಳಿಸಲಾಗಿದೆ. ಕಳೆದ ವರ್ಷದ ಮರ್ಸಿಡಿಸ್ ಬೆಂಝ್ ಕಂಪನಿಗೆ ಮಹತ್ವದ ವರ್ಷವಾಗಿತ್ತು ಎಂದು ಹೇಳಿದರು.

ಐಷಾರಾಮಿ ಕಾರು ವಿಭಾಗದಲ್ಲಿ ಮುಂದುವರೆದ ಮರ್ಸಿಡಿಸ್ ಬೆಂಝ್ ಕಾರುಗಳ ಪಾರುಪತ್ಯ

ಮರ್ಸಿಡಿಸ್ ತನ್ನ ಹೊಸ ಬೆಂಝ್ ಜಿಎಲ್‍ಇ ಕಾರನ್ನು ಜನವರಿ 28ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. 2020ರ ಬೆಂಝ್ ಜಿಎಲ್ಇ, ಮರ್ಸಿಡಿಸ್ ಕಂಪನಿಯ ಎಂಟ್ರಿ ಲೆವೆಲ್ ಕಾರು ಆಗಿದೆ.

ಐಷಾರಾಮಿ ಕಾರು ವಿಭಾಗದಲ್ಲಿ ಮುಂದುವರೆದ ಮರ್ಸಿಡಿಸ್ ಬೆಂಝ್ ಕಾರುಗಳ ಪಾರುಪತ್ಯ

ಜಿ‍ಎಲ್‍ಇ ಎಸ್‍‍ಯುವಿ ಈ ಮೊದಲು ಮರ್ಸಿಡಿಸ್ ಕಂಪನಿಯ ಎಂ‍ಎಲ್ ಕ್ಲಾಸ್ ಸರಣಿಯಲ್ಲಿತ್ತು. ಹೊಸ ಬೆಂಝ್ ಜಿಎಲ್ಇ ಎಸ್‍‍ಯು‍ವಿಯು ಆಕರ್ಷಕ ಲುಕ್ ಹೊಂದಿದ್ದು, ಮೊದಲ ತಲೆಮಾರಿನ ಜಿಎಲ್ಇ ಎಸ್‍‍ಯು‍ವಿಯ ಶೈಲಿಯಲ್ಲಿ ಮುಂದುವರೆದಿದೆ. ಈ ಎಸ್‍‍ಯುವಿಯು ಹೆಚ್ಚಿನ ಕ್ಯಾಬಿನ್ ಸ್ಪೇಸ್ ಅನ್ನು ಹೊಂದಿದೆ. ಬಿಡುಗಡೆಯಾಗಲಿರುವ ಬೆಂಝ್ ಕಾರು ಬಿ‍ಎಸ್6 ಎಂಜಿನ್ ಹೊಂದಿರಲಿದೆ.

ಐಷಾರಾಮಿ ಕಾರು ವಿಭಾಗದಲ್ಲಿ ಮುಂದುವರೆದ ಮರ್ಸಿಡಿಸ್ ಬೆಂಝ್ ಕಾರುಗಳ ಪಾರುಪತ್ಯ

ಉಳಿದಂತೆ ಲಾಂಗ್ ವ್ಹೀಲ್‌ಬೇಸ್ ಇ-ಕ್ಲಾಸ್ ಸೆಡಾನ್ ತನ್ನ ಮಾರಾಟದ ಯಶಸ್ಸನ್ನು ಮುಂದುವರೆಸಿದೆ ಮತ್ತು ಇದು 2019 ರಲ್ಲಿ ಬ್ರ್ಯಾಂಡ್‌ಗೆ ಹೆಚ್ಚು ಮಾರಾಟವಾದ ಏಕೈಕ ಮಾದರಿಯಾಗಿದೆ. ಮರ್ಸಿಡಿಸ್ ಕಂಪನಿಯು ಮುಂದಿನ ದಿನಗಳಲ್ಲಿ ಜಿಎಲ್‌ಎ, ಜಿಎಲ್‌ಸಿ, ಜಿಎಲ್‌ಇ ಮತ್ತು ಜಿಎಲ್‌ಎಸ್ ಅನ್ನು ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.

More from DriveSpark

Article Published On: Sunday, January 12, 2020, 13:00 [IST]
English summary
Mercedes-Benz Emerges As Market Leader In Luxury Segment: Registers 13,786 Units Sold In 2019. Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+