ಆಟೋ ಎಕ್ಸ್‌ಪೋ 2020: ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಮರ್ಸಿಡಿಸ್ ಬೆಂಝ್ ಕಂಪನಿಯು ಹಲವಾರು ಕಾರುಗಳನ್ನು ವಿ ಕ್ಲಾಸ್ ಮಾದರಿಯಲ್ಲಿ ಮಾರಾಟ ಮಾಡುತ್ತದೆ. ಈ ಕಾರುಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರಾಟ ಮಾಡಲಾಗುತ್ತದೆ. ವಿ ಕ್ಲಾಸ್ ಕಾರು ಭಾರತದ ದುಬಾರಿ ಬೆಲೆಯ ಲಗ್ಷುರಿ ಎಂಪಿವಿಯಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಮರ್ಸಿಡಿಸ್ ಬೆಂಝ್ ಕಂಪನಿಯು ಮಾರ್ಕೊ ಪೊಲೊ ಕ್ಯಾಂಪರ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಕಾರ್ ಅನ್ನು ಫೆಬ್ರವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಾಗುವುದು.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಮರ್ಸಿಡಿಸ್ ಬೆಂಝ್ ಕಂಪನಿಯು ಈ ಕಾರ್ ಅನ್ನು ಮೊಬೈಲ್ ಮಿನಿ ಹೋಂ ಎಂದು ಕರೆಯುತ್ತದೆ. ಇದರಿಂದಾಗಿ ಕಂಪನಿಯು ಈ ಕಾರಿನಲ್ಲಿ ಮನೆಯಲ್ಲಿರುವಂತಹ ಸೌಕರ್ಯಗಳನ್ನು ನೀಡುವುದು ತಿಳಿದು ಬರುತ್ತದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಈ ಕಾರಿನ ಹಿಂಭಾಗದಲ್ಲಿರುವ ಸೀಟ್ ಅನ್ನು ಬೆಡ್‍‍ನಂತೆ ಮಡಚಬಹುದಾಗಿದೆ. ಈ ಕಾರಿನ ಮುಂಭಾಗದಲ್ಲಿರುವ ಸೀಟುಗಳನ್ನು ಹಿಂದಕ್ಕೆ ಎಳೆಯಬಹುದು. ಈ ಕಾರು ಚಿಕ್ಕ ಗಾತ್ರದ ಕಿಚನ್, ಫೋಲ್ಡಿಂಗ್ ಟೇಬಲ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಸಾಮಗ್ರಿಗಳನ್ನು ತುಂಬಿಡಲು ಈ ಕಾರಿನಲ್ಲಿ ಚಿಕ್ಕ ವಾರ್ಡ್‍‍ರೋಬ್ ಸಹ ನೀಡಲಾಗಿದೆ. ಇದರ ಜೊತೆಗೆ ಮರ್ಸಿಡಿಸ್ ಬೆಂಝ್ ಕಂಪನಿಯು ಈ ಕಾರಿನಲ್ಲಿ ಹಲವಾರು ಹೆಚ್ಚುವರಿ ಆಕ್ಸೆಸರೀಸ್‍‍ಗಳನ್ನು ಸಹ ನೀಡಲಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಈ ಕಾರ್ ಅನ್ನು ವಿಶ್ರಾಂತಿ ಪಡೆಯುವ ಉದ್ದೇಶಕ್ಕಾಗಿಯೂ ಅಭಿವೃದ್ಧಿಪಡಿಸಲಾಗಿದ್ದು, ದೂರ ಸಂಚಾರ ಮಾಡುವವರು ಹಾಗೂ ಸಾಹಸ ಪ್ರಿಯರು ಈ ಕಾರ್ ಅನ್ನು ಬಳಸಿ ತಮ್ಮ ರಾತ್ರಿ ವೇಳೆಯನ್ನು ಈ ಕಾರಿನಲ್ಲಿಯೇ ಕಳೆಯಬಹುದಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಈ ಕಾರಿನಲ್ಲಿ ವಿ ಕ್ಲಾಸ್ ಕಾರಿನಲ್ಲಿರುವಂತಹ 2.0 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 161 ಬಿ‍‍ಹೆಚ್‍‍‍ಪಿ ಪವರ್ ಹಾಗೂ 380 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 9 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಟೊಯೊಟಾ ಕಂಪನಿಯು ತನ್ನ ವೆಲ್‍‍ಫೈರ್ ಲಗ್ಷುರಿ ಎಂಪಿವಿಯನ್ನು ಬಿಡುಗಡೆಗೊಳಿಸಿದ ನಂತರ ಮರ್ಸಿಡಿಸ್ ಬೆಂಝ್ ತನ್ನ ವಿ-ಕ್ಲಾಸ್ ಸರಣಿಯಲ್ಲಿರುವ ಎಲ್ಲಾ ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಗಲಿದೆ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿರುವ ಲಗ್ಷುರಿ ಕ್ಯಾಂಪರ್, ಕಾರು ಪ್ರಿಯರ ನಿರೀಕ್ಷೆಯನ್ನು ಪೂರ್ತಿಗೊಳಿಸುವ ಸಾಧ್ಯತೆಗಳಿವೆ. ಈ ಕಾರಿನ ಜೊತೆಗೆ ಮರ್ಸಿಡಿಸ್ ಬೆಂಝ್ ಆಟೋ ಎಕ್ಸ್ ಪೋದಲ್ಲಿ ಇನ್ನೂ ಹಲವಾರು ಕಾರುಗಳನ್ನು ಬಿಡುಗಡೆಗೊಳಿಸಲಿದೆ.

More from DriveSpark

Article Published On: Tuesday, January 28, 2020, 10:50 [IST]
English summary
Mercedes Benz V Class Marco Polo Camper launch date details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+