ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಿದ ಮೇಕ್ ಮೈ ಟ್ರಿಪ್

ಖ್ಯಾತ ಕಂಪನಿಯಾದ ಮೇಕ್ ಮೈ ಟ್ರಿಪ್, ಕ್ಯಾಬ್ ಸೇವಾ ಪೂರೈಕೆದಾರ ಕಂಪನಿ ಮೇರು ಜೊತೆ ಕೈಜೋಡಿಸಿದೆ. ಈ ಸಹಭಾಗಿತ್ವದಲ್ಲಿ ಎರಡೂ ಕಂಪನಿಗಳು ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಂಪೂರ್ಣವಾಗಿ ಸ್ವಚ್ವಗೊಳಿಸಿದ ಕ್ಯಾಬ್‌ಗಳನ್ನು ನೀಡಲಿವೆ. ಈ ಮೂಲಕ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದು ಕಂಪನಿ ಹೇಳಿದೆ.

ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಿದ ಮೇಕ್ ಮೈ ಟ್ರಿಪ್

ಪ್ರಯಾಣದ ಸಮಯದಲ್ಲಿ ಚಾಲಕ ಹಾಗೂ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು ಎಂದು ಎರಡೂ ಕಂಪನಿಗಳು ಹೇಳಿವೆ. ಇದರ ಜೊತೆಗೆ ಕಾರಿನಲ್ಲಿರುವಎಲ್ಲಾ ಟಚ್ ಪಾಯಿಂಟ್‌ಗಳಲ್ಲಿಯೂ ಸ್ವಚ್ವತೆಯನ್ನು ಕಾಪಾಡಿಕೊಳ್ಳಲಾಗುವುದು ಎಂದು ಮೇಕ್ ಮೈ ಟ್ರಿಪ್ ಹೇಳಿದೆ.

ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಿದ ಮೇಕ್ ಮೈ ಟ್ರಿಪ್

ಓಝೋನ್ ಸ್ಯಾನಿಟೈಜೆಷನ್ ಸೇರಿದಂತೆ ಹಲವಾರು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಕಂಪನಿ ಹೇಳಿದೆ. ಓಝೋನ್ ಸ್ಯಾನಿಟೈಜೆಷನ್, ಕರೋನಾ ವೈರಸ್ ಸೇರಿದಂತೆ ಯಾವುದೇ ಇತರ ಬ್ಯಾಕ್ಟೀರಿಯಾಗಳು ಕ್ಯಾಬ್ ಒಳಗೆ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಿದ ಮೇಕ್ ಮೈ ಟ್ರಿಪ್

ಕ್ಯಾಬ್‌ನ ಹೊರಭಾಗದಲ್ಲಿ ಐಸೊಪ್ರೊಪಿಲ್ ಆಲ್ಕೋಹಾಲ್ (ಐಪಿಎ) ಸ್ಯಾನಿಟೈಜೆಷನ್ ಬಳಸಲಾಗುತ್ತದೆ. ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾದ ಸ್ಯಾನಿಟೈಜೆಷನ್ ಹಬ್‌ನಲ್ಲಿ ಚಾಲಕರ ಟೆಂಪರೇಚರ್ ಅನ್ನು ನಿರಂತರವಾಗಿ ಪರಿಕ್ಷೀಸಲಾಗುವುದು.

ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಿದ ಮೇಕ್ ಮೈ ಟ್ರಿಪ್

ಕ್ಯಾಬ್‌ನೊಳಗಿರುವ ಕ್ರಮಗಳಲ್ಲಿ ಪ್ರಯಾಣಿಕರು ಹಾಗೂ ಚಾಲಕರ ನಡುವೆ ತಡೆಗೋಡೆ ಹಾಗೂ ಕ್ಯಾಬ್‌ನಲ್ಲಿ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳು ಸೇರಿರುತ್ತವೆ ಎಂದು ಹೇಳಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಿದ ಮೇಕ್ ಮೈ ಟ್ರಿಪ್

ಈ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡಿರುವ ಗ್ರೌಂಡ್ ಟ್ರಾನ್ಸ್‌ಪೋರ್ಟ್ ಆಫ್ ಮೇಕ್ ಮೈ ಟ್ರಿಪ್‌ನ ಮುಖ್ಯ ವ್ಯವಹಾರ ಅಧಿಕಾರಿ ಪರಿಕ್ಷಿತ್ ಚೌಧರಿರವರು ಈ ಸಹಭಾಗಿತ್ವದಲ್ಲಿ ನಾವು ನಮ್ಮ ಗ್ರಾಹಕರಿಗೆ ಸುರಕ್ಷತೆಯನ್ನು ನೀಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಿದ ಮೇಕ್ ಮೈ ಟ್ರಿಪ್

ವಿಮಾನಗಳ ಮೂಲಕ ಬರುವ ನಮ್ಮ ಗ್ರಾಹಕರ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ. ಈ ಗ್ರಾಹಕರು ವಿಮಾನ ನಿಲ್ದಾಣದಲ್ಲಿ ಪ್ರೀ ಬುಕ್ಕಿಂಗ್ ಮೂಲಕ ಕ್ಯಾಬ್‌ಗಳನ್ನು ಬುಕ್ಕಿಂಗ್ ಮಾಡಬಹುದು. ಪ್ರಯಾಣದ ವೇಳೆಯಲ್ಲಿ ಪ್ರಯಾಣಿಕರು ಹಾಗೂ ಚಾಲಕರಿಬ್ಬರಿಗೂ ಸುರಕ್ಷತಾ ಕ್ರಮಗಳನ್ನು ನಿಗದಿಪಡಿಸಲಾಗಿದೆ.

Most Read Articles

Kannada
English summary
Meru cabs introduce Sanitised Taxi Services in partnership with MakeMyTrip. Read in Kannada.
Story first published: Thursday, June 11, 2020, 19:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X