ಹೊಸ ಮೊಬಿಲಿಟಿ ಬಿಸಿನೆಸ್ ಆ್ಯಪ್ ಬಿಡುಗಡೆಗೊಳಿಸಿದ ಮೆರು

ಭಾರತದಲ್ಲಿ ಕ್ಯಾಬ್ ಸೇವೆ ನೀಡುವ ಕಂಪನಿಗಳಲ್ಲಿ ಒಂದಾದ ಮೆರು ಮೊಬಿಲಿಟಿ ಟೆಕ್ ಪ್ರೈವೇಟ್ ಲಿಮಿಟೆಡ್, ಆಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಫೋನ್ ಗಳಿಗಾಗಿ ಮೆರುಬಿಜ್ ಮೊಬಿಲಿಟಿ ಬಿಸಿನೆಸ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ಈ ಆ್ಯಪ್ ನಲ್ಲಿ ಬಳಕೆದಾರರಿಗೆ ಅಡಚಣೆಯಿಲ್ಲದ ಸೇವೆಯನ್ನು ನೀಡಲು ಮೆರು ಸ್ವಿಚ್ ಫೀಚರ್ ಅಳವಡಿಸಲಾಗಿದೆ.

ಹೊಸ ಮೊಬಿಲಿಟಿ ಬಿಸಿನೆಸ್ ಆ್ಯಪ್ ಬಿಡುಗಡೆಗೊಳಿಸಿದ ಮೆರು

ಇದರಿಂದಾಗಿ ಬಳಕೆದಾರರು ಸ್ಲೈಡ್ ಬಟನ್ ಬಳಸಿ ತಮ್ಮ ವೈಯಕ್ತಿಕ ಸವಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಹೊಸ ಬಿಸಿನೆಸ್ ಮೊಬಿಲಿಟಿ ಆ್ಯಪ್ ವೈಯಕ್ತಿಕ ಹಾಗೂ ಸಾಂಸ್ಥಿಕ ಬಳಕೆಗಾಗಿ ಹೊಸ ಉತ್ಪನ್ನ ಹಾಗೂ ಸೇವೆಗಳನ್ನು ಲಭ್ಯವಾಗುವಂತೆ ಮಾಡುತ್ತದೆ. ಬೇಕಾದ ಸಮಯಕ್ಕೆ ಕ್ಯಾಬ್ ಬುಕ್ ಮಾಡಲು ಈ ಆ್ಯಪ್ ಬಳಸಬಹುದು. ಈ ಆ್ಯಪ್ ನಲ್ಲಿ ನಗರದ ಒಳಗೆ ಅಥವಾ ಹೊರಗೆ ಕ್ಯಾಬ್‌ಗಳ ಲಭ್ಯತೆಯನ್ನು ಪರಿಶೀಲಿಸಬಹುದು.

ಹೊಸ ಮೊಬಿಲಿಟಿ ಬಿಸಿನೆಸ್ ಆ್ಯಪ್ ಬಿಡುಗಡೆಗೊಳಿಸಿದ ಮೆರು

ಮೆರು ತನ್ನ ಕಾರ್ಪೊರೇಟ್ ಟ್ರಾವೆಲ್ ಸೊಲ್ಯೂಷನ್ಸ್- ಮೆರುಬಿಜ್ ಅನ್ನು ಈ ಹೊಸ ಆ್ಯಪ್ ಗೆ ಸಂಯೋಜಿಸಿದೆ. ವ್ಯಾಪಾರಕ್ಕಾಗಿ ಎಲ್ಲಾ ರೀತಿಯ ಕ್ಯಾಬ್‌ಗಳು ಇಲ್ಲಿ ಲಭ್ಯವಿರಲಿವೆ. ಈ ಆ್ಯಪ್ ಸಹಾಯದಿಂದ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಕ್ಯಾಬ್‌ಗಳನ್ನು ಬುಕ್ ಮಾಡಬಹುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಹೊಸ ಮೊಬಿಲಿಟಿ ಬಿಸಿನೆಸ್ ಆ್ಯಪ್ ಬಿಡುಗಡೆಗೊಳಿಸಿದ ಮೆರು

ಮೆರು ಬ್ಯುಸಿನೆಸ್ ಕ್ಯಾಬ್ ಉದ್ಯೋಗಿಗಳಿಗೆ ಪಿಕ್ ಅಪ್, ಡ್ರಾಪ್ ಸೌಲಭ್ಯವನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಒದಗಿಸುತ್ತದೆ. ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಒಂದೇ ಒಂದು ಕ್ಲಿಕ್‌ನಲ್ಲಿ ಕ್ಯಾಬ್‌ಗಳನ್ನು ಬುಕ್ ಮಾಡಬಹುದು.

ಹೊಸ ಮೊಬಿಲಿಟಿ ಬಿಸಿನೆಸ್ ಆ್ಯಪ್ ಬಿಡುಗಡೆಗೊಳಿಸಿದ ಮೆರು

ಈ ಆ್ಯಪ್ ನಲ್ಲಿ ಏರ್ ಪೋರ್ಟ್ ಟ್ರಾನ್ಸ್ ಫರ್, ಕಾರು ಬಾಡಿಗೆ, ಹೊರಗಿನ ಪ್ರಯಾಣ ಹಾಗೂ ಸಿಬ್ಬಂದಿ ಸಾರಿಗೆ ವ್ಯವಸ್ಥೆಗಳನ್ನು ನೀಡಲಾಗುವುದು. ಮೆರು ಕಂಪನಿಯು ತನ್ನ ಎವಿಗೊದ 300 ಹೊಸ ಎಲೆಕ್ಟ್ರಿಕ್ ಕ್ಯಾಬ್‌ಗಳನ್ನು ದೆಹಲಿ ಹಾಗೂ ಮುಂಬೈನಲ್ಲಿ ಬಿಡುಗಡೆಗೊಳಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಹೊಸ ಮೊಬಿಲಿಟಿ ಬಿಸಿನೆಸ್ ಆ್ಯಪ್ ಬಿಡುಗಡೆಗೊಳಿಸಿದ ಮೆರು

ನಗರ ಹಾಗೂ ಹೊರ ವಲಯದ ಬುಕಿಂಗ್‌ಗಳಿಗಾಗಿ ಮೆರು ಎವಿಗೊ, ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್ ಕ್ಯಾಬ್ ಸರ್ವಿಸ್ ಗ್ಲೈಡ್‌ನೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಮೆರು ತನ್ನ ಎಲೆಕ್ಟ್ರಿಕ್ ಕ್ಯಾಬ್‌ನಲ್ಲಿ ಐದು ರೀತಿಯ ರೈಡ್ ಗಳನ್ನು ನೀಡುತ್ತದೆ. ಕ್ಯಾಬ್ ಬುಕ್ ಮಾಡುವಾಗ ಗ್ರಾಹಕರು ಈ ರೈಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೊಸ ಮೊಬಿಲಿಟಿ ಬಿಸಿನೆಸ್ ಆ್ಯಪ್ ಬಿಡುಗಡೆಗೊಳಿಸಿದ ಮೆರು

ಎಲೆಕ್ಟ್ರಿಕ್ ಕ್ಯಾಬ್ ನಿರ್ಮಿಸಲು ಕಂಪನಿಯು ಕಳೆದ ಆರು ತಿಂಗಳಲ್ಲಿ 10 ಮಿಲಿಯನ್ ಡಾಲರ್ ಖರ್ಚು ಮಾಡಿದೆ. ಮೆರು ಬಿಸಿನೆಸ್ ಮೊಬಿಲಿಟಿ ಆ್ಯಪ್ ನಲ್ಲಿ 30 ನಿಮಿಷದಿಂದ 35 ದಿನಗಳವರೆಗೆ ಅಡ್ವಾನ್ಸ್ ಬುಕ್ಕಿಂಗ್ ಮಾಡಬಹುದು.

Most Read Articles

Kannada
English summary
Meru launches new business mobility app Merubiz. Read in Kannada.
Story first published: Friday, August 21, 2020, 18:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X