ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ

ಎಂಜಿ ಮೋಟಾರ್ ಕಂಪನಿಯು ತನ್ನ ನಾಲ್ಕನೇ ಕಾರು ಮಾದರಿಯಾಗಿ ಗ್ಲೊಸ್ಟರ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಹೊಸ ಕಾರು ಇದೇ ತಿಂಗಳು 8ಕ್ಕೆ ಅಧಿಕೃತವಾಗಿ ಬಿಡುಗಡೆಯಾಗುವ ಮಾಹಿತಿ ಲಭ್ಯವಾಗಿದೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ

ಐಷಾರಾಮಿ ಫೀಚರ್ಸ್‌ನೊಂದಿಗೆ ಹಲವಾರು ಹೊಸ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿರುವ ಗ್ಲೊಸ್ಟರ್ ಕಾರು ಸ್ಮಾರ್ಟ್ ಮತ್ತು ಸೂಪರ್ ವೆರಿಯೆಂಟ್‌ನೊಂದಿಗೆ 6 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರವಿದ್ದು, ಪ್ರೀಮಿಯಂ ಎಸ್‌ಯುವಿ ಕಾರು ಮಾದರಿಯಾಗಿರುವ ಗ್ಲೊಸ್ಟರ್ ಮಾದರಿಯು ಲೆವಲ್ 1 ಅಟೊನೊಮಸ್ ಸಿಸ್ಟಂ ಸೇರಿದಂತೆ ಹತ್ತಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿಯುತ್ತಿದೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ

ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ಎನ್ನಿಸಲಿರುವ ಗ್ಲೊಸ್ಟರ್ ಕಾರು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ

ಗ್ಲೊಸ್ಟರ್ ಕಾರಿನಲ್ಲಿ ಅಡ್ವಾನ್ಸ್ ಡ್ರೈವರ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಪಾರ್ಕ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೈನ್ ಡಿಪಾರ್ಚರ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಫಾರ್ವಡ್ ಕುಲಿಷನ್ ವಾರ್ನಿಂಗ್ ಸೌಲಭ್ಯಗಳಿವೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ

ಜೊತೆಗೆ ಆಲ್ ಟೆರೆನ್ ಸಿಸ್ಟಂ, ಫೋರ್ ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿದ್ದು, ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾಗಿ ಸ್ಯಾಂಡ್, ಮಡ್, ರಾಕ್, ಸ್ನೋ, ಇಕೋ, ಸ್ಪೋರ್ಟ್ ಮತ್ತು ನಾರ್ಮಲ್ ಡ್ರೈವಿಂಗ್ ಮೋಡ್‌ಗಳನ್ನು ಪಡೆದಿದೆ.

ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಎಲ್‌ಇಡಿ ಲೈಟಿಂಗ್ಸ್, ಪನೊರಮಿಕ್ ಸನ್‌ರೂಫ್, 19-ಇಂಚಿನ ಅಲಾಯ್ ವೀಲ್ಹ್, 12.3-ಇಂಚಿನ ಟಚ್ ಸ್ಕ್ರೀನ್ ಇನ್ಟೋಟೈನ್‌ಮೆಂಟ್, ಮುಂಭಾಗದಲ್ಲಿ ಮತ್ತು ಮಧ್ಯದ ಸಾಲಿನ ಆಸನಗಳಲ್ಲಿ ವೆಂಟಿಲೆಟರ್ ಆಸನೊಂದಿಗೆ ಹಿಟಿಂಗ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ಆ್ಯಂಬಿಯೆಂಟ್ ಲೈಟಿಂಗ್, ಪ್ರೀಮಿಯಂ ಲೆದರ್ ಸೀಟುಗಳು, 8-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಟೀರಿಂಗ್ ಮೌಟೆಂಡ್ ಕಂಟ್ರೋಲ್ಸ್ ಸೇರಿ ಹಲವಾರು ಫೀಚರ್ಸ್‌ಗಳಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ

ಎಂಜಿ ಮೋಟಾರ್ ಕಂಪನಿಯು ಗ್ಲೊಸ್ಟರ್ ಎಸ್‌ಯುವಿಯಲ್ಲಿ 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, 4x4 ಮಾದರಿಯಲ್ಲಿ ಟ್ವಿನ್ ಟರ್ಬೋ ಮತ್ತು 4x2 ಮಾದರಿಯಲ್ಲಿ ಸಿಂಗಲ್ ಟರ್ಬೋ ಎಂಜಿನ್ ನೀಡಲಾಗಿದೆ. ಹೊಸ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಬಿಡುಗಡೆ ಮಾಡುತ್ತಿಲ್ಲ,

ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಪ್ರೇರಣೆ ಹೊಂದಿದ್ದು, ಟ್ವಿನ್ ಟರ್ಬೋ ಮಾದರಿಯು 218-ಬಿಹೆಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಸಿಂಗಲ್ ಟರ್ಬೋ ಮಾದರಿಯು 160-ಬಿಎಚ್‌ಪಿ, 375-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರು ಖರೀದಿಗೆ ಈಗಾಗಲೇ ರೂ.1 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಸಲ್ಲಿಸಬಹುದಾಗಿದ್ದು, ಹೊಸ ಕಾರು ಪ್ರೀಮಿಯಂ ಫೀಚರ್ಸ್ ಮತ್ತು ಎಂಜಿನ್ ಸೌಲಭ್ಯಕ್ಕೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 35 ಲಕ್ಷದಿಂದ ರೂ.40 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Article Published On: Tuesday, October 6, 2020, 16:52 [IST]
English summary
MG Gloster India Launch Date. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+