ವಿಶೇಷ ಆಸನ ಸೌಲಭ್ಯದೊಂದಿಗೆ ಬಿಡುಗಡೆಯಾಗಲಿದೆ ಎಂಜಿ ಹೆಕ್ಟರ್ ಪ್ಲಸ್
ಎಂಜಿ ಮೋಟಾರ್ ಕಂಪನಿಯು ಇದೇ ತಿಂಗಳು ತನ್ನ ಬಹುನೀರಿಕ್ಷಿತ ಹೆಕ್ಟರ್ ಪ್ಲಸ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನಲ್ಲಿ ಕ್ಯಾಪ್ಟನ್ ಸೀಟ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿರಲಿದೆ.

ಹೊಸ ಹೆಕ್ಟರ್ ಪ್ಲಸ್ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಒಂದೊಂದೆ ಟೀಸರ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರು ಎಂಜಿ ಮೋಟಾರ್ ಕಂಪನಿಯು ವಿಶೇಷ ಆಸನ ಸೌಲಭ್ಯಗಳೊಂದಿಗೆ ಹೊಸ ಎಸ್‌ಯುವಿ ಬಿಡುಗಡೆ ಮಾಡುವುದಾಗಿ ಸುಳಿವು ನೀಡಿದ್ದು, ಕಾರಿನ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಸಾಕಷ್ಟು ಸ್ಥಳಾವಕಾಶದೊಂದಿಗೆ ಜೋಡಣೆ ಹೊಂದಿದೆ. ಹೊಸ ಕಾರಿನ ಸೀಟುಗಳು ಐಷಾರಾಮಿ ಕಾರಿನ ಮಾದಿರ ವಿನ್ಯಾಸ ಪಡೆದುಕೊಂಡಿದ್ದು, ಹೋಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್ ರೆಸ್ಟ್‌ನೊಂದಿಗೆ ಸೆಂಟರ್ ಆರ್ಮ್ ರೆಸ್ಟ್ ಕೂಡಾ ಲಭ್ಯವಿರವಿದೆ.

ಹೊಸ ಹೆಕ್ಟರ್ ಪ್ಲಸ್ ಕಾರು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, 7 ಸೀಟರ್ ಮಾದರಿಯು ಆರಂಭಿಕವಾಗಿ ಮತ್ತು 6 ಸೀಟರ್ ಮಾದರಿಯು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಅಥವಾ 7 ಸೀಟರ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರಲಿದ್ದು, 6 ಸೀಟರ್ ಮಾದರಿಯು 2+2+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 7 ಸೀಟರ್ ಮಾದರಿಯು 2+2+3 ಆಸನ ಮಾದರಿ ಹೊಂದಿರಲಿದೆ.

5 ಸೀಟರ್ ಹೆಕ್ಟರ್ ಕಾರಿನ ಉತ್ಪಾದನಾ ಪ್ಲಾಟ್‌ಫಾರ್ಮ್ ಅಡಿಯಲ್ಲೇ ಹೊಸ ಆವೃತ್ತಿಯನ್ನು ಪರಿಚಯಿಸುತ್ತಿರುವ ಎಂಜಿ ಕಂಪನಿಯು ಹೆಕ್ಟರ್ ಪ್ಲಸ್ ಮೂಲಕ 7 ಸೀಟರ್ ಎಸ್‌ಯುವಿ ಖರೀದಿದಾರರನ್ನು ಸೆಳೆಯಲು ಮುಂದಾಗಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಇದು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

ಎಂಜಿನ್ ಸಾಮರ್ಥ್ಯ
ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಹೆಕ್ಟರ್ ಕಾರು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 7 ಸೀಟರ್ ಹೆಕ್ಟರ್ ಪ್ಲಸ್ ಕಾರು ಕೂಡಾ ಸಾಮಾನ್ಯ ಕಾರಿನಂತೆಯೇ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಈ ಮೂಲಕ ಮತ್ತಷ್ಟು ಎಸ್‌ಯುವಿ ಕಾರು ಖರೀದಿದಾರರನ್ನು ಸೆಳೆಯಲಿರುವ ಎಂಜಿ ಮೋಟಾರ್ ಕಂಪನಿಯು ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್ ಎಸ್‌ಯುವಿ ಜೊತೆಗೆ ಟೊಯೊಟಾ ಇನೋವಾ ಕ್ರಿಸ್ಟಾ ಆವೃತ್ತಿಗೂ ಪೈಪೋಟಿ ನೀಡಲಿದ್ದು, ಸಾಮಾನ್ಯ ಹೆಕ್ಟರ್ ಕಾರಿಗಿಂತಲೂ ತುಸು ದುಬಾರಿಯಾಗಿರಲಿದೆ.

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಸೌಲಭ್ಯಗಳಿದ್ದು, ಹೊಸ ಮಾದರಿಯ ಹೆಡ್‌ಲ್ಯಾಂಪ್, ಹೊಲೊಜೆನ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ವಿನ್ಯಾಸದ ರಿಯರ್ ಟೈಲ್ ಲೈಟ್, ಸ್ಕೀಡ್ ಪ್ಲೇಟ್, ಟೈಲ್‌ಗೆಟ್ ತೆರೆಯಲು ಲೆಗ್ ಸ್ಪೈಫ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯಗಳನ್ನು ಜೋಡಿಸಲಾಗಿದೆ.
MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಸದ್ಯ ಸಾಮಾನ್ಯ ಹೆಕ್ಟರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.74 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.44 ಲಕ್ಷ ಬೆಲೆ ಹೊಂದಿದ್ದು, ಹೊಸ ಹೆಕ್ಟರ್ ಪ್ಲಸ್ ಮಾದರಿಯು ಸಾಮಾನ್ಯ ಕಾರಿಗಿಂತಲೂ ರೂ. 1.50 ಲಕ್ಷದಿಂದ ರೂ.2 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಿರಲಿದೆ.


Click it and Unblock the Notifications