ಜುಲೈ 1ಕ್ಕೆ ಬಿಡುಗಡೆಯಾಗಲಿದೆ ಇನೋವಾ ಕ್ರಿಸ್ಟಾ ಪ್ರತಿಸ್ಪರ್ಧಿ ಹೆಕ್ಟರ್ ಪ್ಲಸ್ 7 ಸೀಟರ್ ಎಸ್‌ಯುವಿ

ಹೆಕ್ಟರ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಯ ನಂತರ ಮೂರನೇ ಕಾರು ಮಾದರಿಯಾಗಿ ಹೆಕ್ಟರ್ ಪ್ಲಸ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಾರನ್ನು ಮುಂದಿನ ತಿಂಗಳು ಜುಲೈ 1ರಂದು ಬಿಡುಗಡೆ ಮಾಡುವುದಾಗಿ ಅಧಿಕೃತ ಮಾಹಿತಿ ನೀಡಿದೆ.

ಜುಲೈ 1ಕ್ಕೆ ಬಿಡುಗಡೆಯಾಗಲಿದೆ ಹೆಕ್ಟರ್ ಪ್ಲಸ್ 7 ಸೀಟರ್ ಎಸ್‌ಯುವಿ

5 ಸೀಟರ್ ಮಾದಿರಿಯಾದ ಹೆಕ್ಟರ್ ಕಾರು ಮಾದರಿಗಿಂತಲೂ ವಿಭಿನ್ನ ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಂಡಿರುವ 7 ಸೀಟರ್ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದ್ದು, ಹೊಸ ಕಾರು ಎಂಪಿವಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟೊಯೊಟೊ ಇನೋವಾ ಕ್ರಿಸ್ಟಾ ಕಾರಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಜುಲೈ 1ಕ್ಕೆ ಬಿಡುಗಡೆಯಾಗಲಿದೆ ಹೆಕ್ಟರ್ ಪ್ಲಸ್ 7 ಸೀಟರ್ ಎಸ್‌ಯುವಿ

ಹೊಸ ಹೆಕ್ಟರ್ ಪ್ಲಸ್ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಅಥವಾ 7 ಸೀಟರ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರಲಿದ್ದು, 6 ಸೀಟರ್ ಮಾದರಿಯು 2+2+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 7 ಸೀಟರ್ ಮಾದರಿಯು 2+2+3 ಆಸನ ಮಾದರಿ ಹೊಂದಿರಲಿದೆ.

ಜುಲೈ 1ಕ್ಕೆ ಬಿಡುಗಡೆಯಾಗಲಿದೆ ಹೆಕ್ಟರ್ ಪ್ಲಸ್ 7 ಸೀಟರ್ ಎಸ್‌ಯುವಿ

5 ಸೀಟರ್ ಹೆಕ್ಟರ್ ಕಾರಿನ ಉತ್ಪಾದನಾ ಪ್ಲಾಟ್‌ಫಾರ್ಮ್ ಅಡಿಯಲ್ಲೇ ಹೊಸ ಆವೃತ್ತಿಯನ್ನು ಪರಿಚಯಿಸುತ್ತಿರುವ ಎಂಜಿ ಕಂಪನಿಯು ಹೆಕ್ಟರ್ ಪ್ಲಸ್ ಮೂಲಕ 7 ಸೀಟರ್ ಎಸ್‌ಯುವಿ ಖರೀದಿದಾರರನ್ನು ಸೆಳೆಯಲು ಮುಂದಾಗಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಇದು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

ಜುಲೈ 1ಕ್ಕೆ ಬಿಡುಗಡೆಯಾಗಲಿದೆ ಹೆಕ್ಟರ್ ಪ್ಲಸ್ 7 ಸೀಟರ್ ಎಸ್‌ಯುವಿ

ಎಂಜಿನ್ ಸಾಮರ್ಥ್ಯ

ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಹೆಕ್ಟರ್ ಕಾರು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 7 ಸೀಟರ್ ಹೆಕ್ಟರ್ ಪ್ಲಸ್ ಕಾರು ಕೂಡಾ ಸಾಮಾನ್ಯ ಕಾರಿನಂತೆಯೇ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಜುಲೈ 1ಕ್ಕೆ ಬಿಡುಗಡೆಯಾಗಲಿದೆ ಹೆಕ್ಟರ್ ಪ್ಲಸ್ 7 ಸೀಟರ್ ಎಸ್‌ಯುವಿ

ಈ ಮೂಲಕ ಮತ್ತಷ್ಟು ಎಸ್‌ಯುವಿ ಕಾರು ಖರೀದಿದಾರರನ್ನು ಸೆಳೆಯಲಿರುವ ಎಂಜಿ ಮೋಟಾರ್ ಕಂಪನಿಯು ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್ ಎಸ್‌ಯುವಿ ಜೊತೆಗೆ ಟೊಯೊಟಾ ಇನೋವಾ ಕ್ರಿಸ್ಟಾ ಆವೃತ್ತಿಗೂ ಪೈಪೋಟಿ ನೀಡಲಿದ್ದು, ಸಾಮಾನ್ಯ ಹೆಕ್ಟರ್ ಕಾರಿಗಿಂತಲೂ ತುಸು ದುಬಾರಿಯಾಗಿರಲಿದೆ.

ಜುಲೈ 1ಕ್ಕೆ ಬಿಡುಗಡೆಯಾಗಲಿದೆ ಹೆಕ್ಟರ್ ಪ್ಲಸ್ 7 ಸೀಟರ್ ಎಸ್‌ಯುವಿ

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಸೌಲಭ್ಯಗಳಿದ್ದು, ಹೊಸ ಮಾದರಿಯ ಹೆಡ್‌ಲ್ಯಾಂಪ್, ಹೊಲೊಜೆನ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ವಿನ್ಯಾಸದ ರಿಯರ್ ಟೈಲ್ ಲೈಟ್, ಸ್ಕೀಡ್ ಪ್ಲೇಟ್, ಟೈಲ್‌ಗೆಟ್ ತೆರೆಯಲು ಲೆಗ್ ಸ್ಪೈಫ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯಗಳನ್ನು ಜೋಡಿಸಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಜುಲೈ 1ಕ್ಕೆ ಬಿಡುಗಡೆಯಾಗಲಿದೆ ಹೆಕ್ಟರ್ ಪ್ಲಸ್ 7 ಸೀಟರ್ ಎಸ್‌ಯುವಿ

ಸದ್ಯ ಸಾಮಾನ್ಯ ಹೆಕ್ಟರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.74 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.44 ಲಕ್ಷ ಬೆಲೆ ಹೊಂದಿದ್ದು, ಹೊಸ ಹೆಕ್ಟರ್ ಪ್ಲಸ್ ಮಾದರಿಯು ಸಾಮಾನ್ಯ ಕಾರಿಗಿಂತಲೂ ರೂ. 1.50 ಲಕ್ಷದಿಂದ ರೂ.2 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಿರಲಿದೆ.

Article Published On: Monday, June 22, 2020, 11:25 [IST]
English summary
MG Hector Plus India Launch Date Confirmed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+