ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಹೆಕ್ಟರ್ ಪ್ಲಸ್ ಬಹಿರಂಗಗೊಳಿಸಿದ ಎಂಜಿ ಮೋಟಾರ್

ಮುಂದಿನ ತಿಂಗಳು ಜುಲೈ 1ರಂದು ಬಿಡುಗಡೆಯಾಗಲಿರುವ ಹೊಚ್ಚ ಹೊಸ ಹೆಕ್ಟರ್ 7 ಸೀಟರ್ ಎಸ್‌ಯುವಿ ಮಾದರಿಯ ಮಾಹಿತಿಯನ್ನು ಎಂಜಿ ಮೋಟಾರ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಸಿದ್ದು, ಶೀಘ್ರದಲ್ಲೇ ಹೊಸ ಕಾರು ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಹೇಳಿಕೊಂಡಿದೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಹೆಕ್ಟರ್ ಪ್ಲಸ್ ಬಹಿರಂಗಗೊಳಿಸಿದ ಎಂಜಿ ಮೋಟಾರ್

ಮಾಹಿತಿಗಳ ಪ್ರಕಾರ, ಹೆಕ್ಟರ್ ಪ್ಲಸ್ ಕಾರನ್ನು ಜುಲೈ 1ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಗುಜರಾತ್‌ನಲ್ಲಿ ಹೊಲಾಲ್ ಕಾರು ಉತ್ಪಾದನಾ ಘಟಕದಲ್ಲಿ ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಯನ್ನು ಈಗಾಗಲೇ ಅಧಿಕಗೊಳಿಸಿದೆ. ಹೊಸ ಕಾರು ಬಿಡುಗಡೆಯ ನಂತರ ಮಧ್ಯಂತರದಲ್ಲಿ ಕೆಲವು ರಾಜ್ಯಗಳು ಮತ್ತೆ ಲಾಕ್‌ಡೌನ್ ವಿಧಿಸಬಹುದಾದ ಸಾಧ್ಯತೆಗಳಿದ್ದು, ಈ ಹಿನ್ನಲೆಯಲ್ಲಿ ಸ್ಟಾಕ್ ಪ್ರಮಾಣದ ಮೇಲೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಹೆಕ್ಟರ್ ಪ್ಲಸ್ ಬಹಿರಂಗಪಡಿಸಿದ ಎಂಜಿ ಮೋಟಾರ್

ಇನ್ನು ಹೊಸ ಹೆಕ್ಟರ್ ಪ್ಲಸ್ ಕಾರು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, 7 ಸೀಟರ್ ಮಾದರಿಯು ಆರಂಭಿಕವಾಗಿ ಮತ್ತು 6 ಸೀಟರ್ ಮಾದರಿಯು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಹೆಕ್ಟರ್ ಪ್ಲಸ್ ಬಹಿರಂಗಪಡಿಸಿದ ಎಂಜಿ ಮೋಟಾರ್

ಹೆಕ್ಟರ್ ಪ್ಲಸ್ ಕಾರು ಸಾಮಾನ್ಯ ಹೆಕ್ಟರ್ ಕಾರಿನಲ್ಲಿರುವಂತೆ ಸೂಪರ್, ಸ್ಮಾರ್ಟ್ ಮತ್ತು ಶಾರ್ಪ್ ಎನ್ನುವ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎಂಪಿವಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟೊಯೊಟೊ ಇನೋವಾ ಕ್ರಿಸ್ಟಾ ಕಾರಿಗೆ ಇದು ಭರ್ಜರಿ ಪೈಪೋಟಿ ನೀಡಲಿದೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಹೆಕ್ಟರ್ ಪ್ಲಸ್ ಬಹಿರಂಗಪಡಿಸಿದ ಎಂಜಿ ಮೋಟಾರ್

ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಅಥವಾ 7 ಸೀಟರ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರಲಿದ್ದು, 6 ಸೀಟರ್ ಮಾದರಿಯು 2+2+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 7 ಸೀಟರ್ ಮಾದರಿಯು 2+2+3 ಆಸನ ಮಾದರಿ ಹೊಂದಿರಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಹೆಕ್ಟರ್ ಪ್ಲಸ್ ಬಹಿರಂಗಪಡಿಸಿದ ಎಂಜಿ ಮೋಟಾರ್

5 ಸೀಟರ್ ಹೆಕ್ಟರ್ ಕಾರಿನ ಉತ್ಪಾದನಾ ಪ್ಲಾಟ್‌ಫಾರ್ಮ್ ಅಡಿಯಲ್ಲೇ ಹೊಸ ಆವೃತ್ತಿಯನ್ನು ಪರಿಚಯಿಸುತ್ತಿರುವ ಎಂಜಿ ಕಂಪನಿಯು ಹೆಕ್ಟರ್ ಪ್ಲಸ್ ಮೂಲಕ 7 ಸೀಟರ್ ಎಸ್‌ಯುವಿ ಖರೀದಿದಾರರನ್ನು ಸೆಳೆಯಲು ಮುಂದಾಗಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಇದು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಹೆಕ್ಟರ್ ಪ್ಲಸ್ ಬಹಿರಂಗಪಡಿಸಿದ ಎಂಜಿ ಮೋಟಾರ್

ಎಂಜಿನ್ ಸಾಮರ್ಥ್ಯ

ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಹೆಕ್ಟರ್ ಕಾರು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 7 ಸೀಟರ್ ಹೆಕ್ಟರ್ ಪ್ಲಸ್ ಕಾರು ಕೂಡಾ ಸಾಮಾನ್ಯ ಕಾರಿನಂತೆಯೇ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಹೆಕ್ಟರ್ ಪ್ಲಸ್ ಬಹಿರಂಗಪಡಿಸಿದ ಎಂಜಿ ಮೋಟಾರ್

ಈ ಮೂಲಕ ಮತ್ತಷ್ಟು ಎಸ್‌ಯುವಿ ಕಾರು ಖರೀದಿದಾರರನ್ನು ಸೆಳೆಯಲಿರುವ ಎಂಜಿ ಮೋಟಾರ್ ಕಂಪನಿಯು ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್ ಎಸ್‌ಯುವಿ ಜೊತೆಗೆ ಟೊಯೊಟಾ ಇನೋವಾ ಕ್ರಿಸ್ಟಾ ಆವೃತ್ತಿಗೂ ಪೈಪೋಟಿ ನೀಡಲಿದ್ದು, ಸಾಮಾನ್ಯ ಹೆಕ್ಟರ್ ಕಾರಿಗಿಂತಲೂ ತುಸು ದುಬಾರಿಯಾಗಿರಲಿದೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಹೆಕ್ಟರ್ ಪ್ಲಸ್ ಬಹಿರಂಗಪಡಿಸಿದ ಎಂಜಿ ಮೋಟಾರ್

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಸೌಲಭ್ಯಗಳಿದ್ದು, ಹೊಸ ಮಾದರಿಯ ಹೆಡ್‌ಲ್ಯಾಂಪ್, ಹೊಲೊಜೆನ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ವಿನ್ಯಾಸದ ರಿಯರ್ ಟೈಲ್ ಲೈಟ್, ಸ್ಕೀಡ್ ಪ್ಲೇಟ್, ಟೈಲ್‌ಗೆಟ್ ತೆರೆಯಲು ಲೆಗ್ ಸ್ಪೈಫ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯಗಳನ್ನು ಜೋಡಿಸಲಾಗಿದೆ.

MOST READ: ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕಾರುಗಳಿವು

ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಹೆಕ್ಟರ್ ಪ್ಲಸ್ ಬಹಿರಂಗಪಡಿಸಿದ ಎಂಜಿ ಮೋಟಾರ್

ಸದ್ಯ ಸಾಮಾನ್ಯ ಹೆಕ್ಟರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.74 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.44 ಲಕ್ಷ ಬೆಲೆ ಹೊಂದಿದ್ದು, ಹೊಸ ಹೆಕ್ಟರ್ ಪ್ಲಸ್ ಮಾದರಿಯು ಸಾಮಾನ್ಯ ಕಾರಿಗಿಂತಲೂ ರೂ. 1.50 ಲಕ್ಷದಿಂದ ರೂ.2 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಿರಲಿದೆ.

Most Read Articles

Kannada
English summary
MG Hector Plus Listed On Website Ahead Of Its Launch Next Month. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X