ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ತನ್ನ ನಾಲ್ಕನೇ ಕಾರು ಮಾದರಿಯಾಗಿ ಗ್ಲೊಸ್ಟರ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಲು ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಬಿಡುಗಡೆಗೂ ಮುನ್ನ ಹೊಸ ಕಾರಿನ ತಾಂತ್ರಿಕ ಅಂಶಗಳನ್ನು ಅನಾವರಣಗೊಳಿಸಿದೆ.

ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಪ್ರೀಮಿಯಂ ಎಸ್‌ಯುವಿ ಕಾರು ಮಾದರಿಯಾಗಿರುವ ಗ್ಲೊಸ್ಟರ್ ಮಾದರಿಯನ್ನ ಮೊದಲ ಬಾರಿಗೆ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದ ಎಂಜಿ ಮೋಟಾರ್ ಕಂಪನಿಯು ಇದೀಗ ಅಧಿಕೃತವಾಗಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಲೆವಲ್ 1 ಅಟೊನೊಮಸ್ ಸಿಸ್ಟಂ ಸೇರಿದಂತೆ ಹತ್ತಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿಯುತ್ತಿದೆ. ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ಎನ್ನಿಸಲಿರುವ ಗ್ಲೊಸ್ಟರ್ ಕಾರು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಗ್ಲೊಸ್ಟರ್ ಕಾರಿನಲ್ಲಿ ಅಡ್ವಾನ್ಸ್ ಡ್ರೈವರ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಪಾರ್ಕ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೈನ್ ಡಿಪಾರ್ಚರ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಫಾರ್ವಡ್ ಕುಲಿಷನ್ ವಾರ್ನಿಂಗ್ ಸೌಲಭ್ಯಗಳಿವೆ.

ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಐಷಾರಾಮಿ ಫೀಚರ್ಸ್‌ಗಳ ಜೊತೆಗೆ ಆಫ್ ರೋಡ್ ಕೌಶಲ್ಯದಲ್ಲೂ ಗಮನಸೆಳೆಯುವ ಹೊಸ ಗ್ಲೊಸ್ಟರ್ ಕಾರು ಆಲ್ ಟೆರೆನ್ ಸಿಸ್ಟಂ, ಫೋರ್ ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿದ್ದು, ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾಗಿ ಸ್ಯಾಂಡ್, ಮಡ್, ರಾಕ್, ಸ್ನೋ, ಇಕೋ, ಸ್ಪೋರ್ಟ್ ಮತ್ತು ನಾರ್ಮಲ್ ಡ್ರೈವಿಂಗ್ ಮೋಡ್‌ಗಳನ್ನು ಪಡೆದಿದೆ.

ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಗ್ಲೊಸ್ಟರ್ ಕಾರಿನಲ್ಲಿ ಎಂಜಿ ಮೋಟಾರ್ಸ್ ಕಂಪನಿಯೇ ಅಭಿವೃದ್ದಿಗೊಳಿಸಲಾದ ಐ-ಸ್ಮಾರ್ಟ್ 2.0 ಕಾರ್ ಕನೆಕ್ಟೆಡ್ ಟೆಕ್ನಾಲಜಿ ಜೋಡಿಸಲಾಗಿದ್ದು, ಆ್ಯಂಟಿ-ಥೆಫ್ಟ್ ಇಮೊಬಿಲೈಸೇಶನ್, ಕ್ರಿಟಿಕಲ್ ಟ್ರೈರ್ ಪ್ರೆಷರ್ ವಾಯ್ಸ್ ಅಲರ್ಟ್, ಮ್ಯಾಪ್‌ಮೈಇಂಡಿಯಾದ 3ಡಿ ಮ್ಯಾಪ್, ಪಾಟ್‌ಹೊಲ್ ಅಲರ್ಟ್, ಸ್ಪೀಡ್ ಅಲರ್ಟ್ ಸೌಲಭ್ಯಗಳಿವೆ.

ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಜೊತೆಗೆ ಹೊಸ ಕಾರಿನಲ್ಲಿ ಎಲ್‌ಇಡಿ ಲೈಟಿಂಗ್ಸ್, ಪನೊರಮಿಕ್ ಸನ್‌ರೂಫ್, 19-ಇಂಚಿನ ಅಲಾಯ್ ವೀಲ್ಹ್, 12.3-ಇಂಚಿನ ಟಚ್ ಸ್ಕ್ರೀನ್ ಇನ್ಟೋಟೈನ್‌ಮೆಂಟ್, ಮುಂಭಾಗದಲ್ಲಿ ಮತ್ತು ಮಧ್ಯದ ಸಾಲಿನ ಆಸನಗಳಲ್ಲಿ ವೆಂಟಿಲೆಟರ್ ಆಸನೊಂದಿಗೆ ಹಿಟಿಂಗ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ಆ್ಯಂಬಿಯೆಂಟ್ ಲೈಟಿಂಗ್, ಪ್ರೀಮಿಯಂ ಲೆದರ್ ಸೀಟುಗಳು, 8-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಟೀರಿಂಗ್ ಮೌಟೆಂಡ್ ಕಂಟ್ರೋಲ್ಸ್ ಸೇರಿ ಹಲವಾರು ಫೀಚರ್ಸ್‌ಗಳಿವೆ.

ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಎಂಜಿನ್ ಮತ್ತು ಪರ್ಫಾಮೆನ್ಸ್

ಗ್ಲೊಸ್ಟರ್ ಎಸ್‌ಯುವಿ ಮಾದರಿಯು ಜೆಡ್ಎಫ್ ನಿರ್ಮಾಣದ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 2.0-ಲೀಟರ್ ಟ್ವಿನ್ ಟರ್ಬೋ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಹೊಸ ಎಂಜಿನ್ ಮಾದರಿಯು 216-ಬಿಎಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಯಲ್ಲೇ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ್ದು, ಹೊಸ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡುತ್ತಿಲ್ಲ ಎನ್ನಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಗ್ಲೊಸ್ಟರ್ ಕಾರಿನಲ್ಲಿ 2+2+3 ಮಾದರಿಯಲ್ಲಿ ಆಸನ ಸೌಲಭ್ಯವನ್ನು ಜೋಡಿಸಲಾಗಿದ್ದು, ಹೊಸ ಕಾರು ಬರೋಬ್ಬರಿ 5 ಮೀಟರ್ ಉದ್ದ, 1.9 ಮೀಟರ್ ಎಂಎಂ ಎತ್ತರದೊಂದಿಗೆ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಪಡೆದುಕೊಂಡಿದೆ.

ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಈ ಮೂಲಕ ಎಂಜಿನ್, ವಿನ್ಯಾಸ ಮತ್ತು ಫೀಚರ್ಸ್‌ಗಳಲ್ಲಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿರುವ ಹೊಸ ಕಾರು ಅಗರ್ತಾ ರೆಡ್, ಮೆಟಲ್ ಬ್ಲ್ಯಾಕ್, ಮೆಟಲ್ ಆ್ಯಷ್ ಮತ್ತು ವಾರ್ಮ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಬಹುನೀರಿಕ್ಷಿತ ಪ್ರೀಮಿಯಂ ಎಸ್‍‌ಯುವಿ ಗ್ಲೊಸ್ಟರ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಹೊಸ ಕಾರನ್ನು ಮುಂದಿನ ತಿಂಗಳ ಮಧ್ಯಂತರದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ನೀರಿಕ್ಷೆಯಿದ್ದು, ಇಂದಿನಿಂದಲೇ ಹೊಸ ಕಾರು ಖರೀದಿಗೆ ರೂ.1 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಸಲ್ಲಿಸಬಹುದಾಗಿದೆ. ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್ ಮತ್ತು ಎಂಜಿನ್ ಸೌಲಭ್ಯಕ್ಕೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 35 ಲಕ್ಷದಿಂದ ರೂ.40 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

More from DriveSpark

Article Published On: Thursday, September 24, 2020, 14:17 [IST]
English summary
MG Motors Unveils Advanced-Features List On Upcoming Gloster SUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+