ಶೋರೂಂಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಅಳವಡಿಸಲು ಮುಂದಾದ ಎಂಜಿ ಮೋಟಾರ್

ಎಂಜಿ ಮೋಟರ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾದ ಝಡ್‌ಎಸ್‌ ಕಾರ್ ಅನ್ನು ಭಾರತದ ಆರು ಹೊಸ ನಗರಗಳಲ್ಲಿ ಬಿಡುಗಡೆಗೊಳಿಸಿತ್ತು. ಈ ಎಸ್‌ಯುವಿಯು ಹೆಚ್ಚು ಗ್ರಾಹಕರನ್ನು ಆಕರ್ಷಿಸಿರುವ ಕಾರಣಕ್ಕೆ, ಮುಂಬರುವ ದಿನಗಳಲ್ಲಿ ದೇಶಾದ್ಯಂತ ಬಿಡುಗಡೆಗೊಳಿಸಲು ಕಂಪನಿಯು ಮುಂದಾಗಿದೆ.

ಶೋರೂಂಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಅಳವಡಿಸಲು ಮುಂದಾದ ಎಂಜಿ ಮೋಟಾರ್

ಈಗ ಎಂಜಿ ಮೋಟಾರ್ ಕಂಪನಿಯು ಟಾಟಾ ಪವರ್‌ನೊಂದಿಗೆ ಕೈಜೋಡಿಸಿದ್ದು, ದೇಶಾದ್ಯಂತವಿರುವ ಶೋರೂಂಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಅಳವಡಿಸಲು ಮುಂದಾಗಿದೆ. ಎಲ್ಲಾ ಶೋರೂಂಗಳಲ್ಲಿ 50 ಕಿ.ವ್ಯಾ ಡಿಸಿ ಸೂಪರ್‌ಫಾಸ್ಟ್ ಚಾರ್ಜರ್ ಅಳವಡಿಸಲಾಗುವುದು.

ಶೋರೂಂಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಅಳವಡಿಸಲು ಮುಂದಾದ ಎಂಜಿ ಮೋಟಾರ್

ಈ ಸಹಭಾಗಿತ್ವದಲ್ಲಿ, ಎಂಜಿ ಮೋಟಾರ್ ಪ್ರಮುಖ ನಗರಗಳತ್ತ ಗಮನ ಹರಿಸಲಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ವೆಹಿಕಲ್ ಯೋಜನೆಯಡಿ ಈ ಹೆಜ್ಜೆಯನ್ನಿಡುತ್ತಿದೆ. ಈ 50 ಕಿ.ವ್ಯಾ ಡಿಸಿ ಚಾರ್ಜರ್‌ಗಳನ್ನು ಕಂಪನಿಯ ಎಂಜಿ ಝಡ್ಎಸ್ ಇವಿ ಗ್ರಾಹಕರಿಗೆ ಹಾಗೂ ಇತರ ಎಲೆಕ್ಟ್ರಿಕ್ ವಾಹನಗಳ ಗ್ರಾಹಕರಿಗೆ ನೀಡಲಾಗುವುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಶೋರೂಂಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಅಳವಡಿಸಲು ಮುಂದಾದ ಎಂಜಿ ಮೋಟಾರ್

ಇತರ ಎಲೆಕ್ಟ್ರಿಕ್ ವಾಹನಗಳು ಸಿಸಿಎಸ್ / ಚಾಡೆಮೊ ಚಾರ್ಜಿಂಗ್ ಸ್ಟ್ಯಾಂಡರ್ಡ್‌ಗಳನ್ನು ಹೊಂದಿರಬೇಕು. ಸದ್ಯಕ್ಕೆ ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ತಯಾರಕ ಕಂಪನಿಗಳು ದೇಶಾದ್ಯಂತ ಚಾರ್ಜಿಂಗ್ ಮೂಲಸೌಕರ್ಯಗಳನ್ನು ನೀಡಲು ಮುಂದೆ ಬರುತ್ತಿವೆ.

ಶೋರೂಂಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಅಳವಡಿಸಲು ಮುಂದಾದ ಎಂಜಿ ಮೋಟಾರ್

ಸದ್ಯಕ್ಕೆ ಎಂಜಿ ಮೋಟಾರ್ ಕಂಪನಿಯು ಬೆಂಗಳೂರು, ನವದೆಹಲಿ-ಎನ್‌ಸಿಆರ್, ಮುಂಬೈ, ಅಹಮದಾಬಾದ್, ಹಾಗೂ ಹೈದರಾಬಾದ್ ನಗರಗಳಲ್ಲಿ ಒಟ್ಟು 10 ಸೂಪರ್‌ಫಾಸ್ಟ್ 50 ಕಿ.ವ್ಯಾ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದೆ. ಟಾಟಾ ಪವರ್ ಕಂಪನಿಯು 19 ನಗರಗಳಲ್ಲಿ 180 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಶೋರೂಂಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಅಳವಡಿಸಲು ಮುಂದಾದ ಎಂಜಿ ಮೋಟಾರ್

ಈ ಬಗ್ಗೆ ಮಾತನಾಡಿದ ಎಂಜಿ ಮೋಟರ್ ಕಂಪನಿಯ ಎಂಡಿ ರಾಜೀವ್ ಛಾಬಾರವರು ಗ್ರಾಹಕರಿಗೆ ಸ್ವಚ್ವವಾದ ಹಾಗೂ ಪರಿಸರ ಸ್ನೇಹಿಯಾದ ಕಾರುಗಳನ್ನು ಒದಗಿಸಲು ಬಯಸುತ್ತೇವೆ. ಎಲೆಕ್ಟ್ರಿಕ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಟಾಟಾ ಪವರ್‌ನಂತಹ ಕಂಪನಿಯೊಂದಿಗೆ ನಾವು ಒಟ್ಟಾಗಿ ವಿಭಿನ್ನವಾದ ಸೌಲಭ್ಯಗಳನ್ನು ನೀಡುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಶೋರೂಂಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಅಳವಡಿಸಲು ಮುಂದಾದ ಎಂಜಿ ಮೋಟಾರ್

ಎಂಜಿ ಝಡ್ಎಸ್ ಇವಿಯ ಬುಕ್ಕಿಂಗ್‌ಗಳನ್ನು ಪುಣೆ, ಸೂರತ್, ಕೊಚ್ಚಿನ್, ಚಂಡೀಗಢ, ಜೈಪುರ, ಚೆನ್ನೈ ನಗರಗಳಲ್ಲಿ ಆರಂಭಿಸಲಾಗಿದೆ. ಸದ್ಯಕ್ಕೆ ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಭಾರತದ 11 ನಗರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

Most Read Articles

Kannada
English summary
MG Motor install 50 kw fast chargers at dealerships in partnership with Tata power. Read in Kannada.
Story first published: Monday, June 8, 2020, 22:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X