ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ ಮೋಟಾರ್

ಕರೋನಾ ವೈರಸ್ ಪರಿಣಾಮ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟವು ಲಾಕ್‌ಡೌನ್ ವಿನಾಯ್ತಿ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಎಂಜಿ ಮೋಟಾರ್ ಕಂಪನಿಯು ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.48ರಷ್ಟು ಏರಿಕೆ ಕಂಡಿದೆ.

ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ

ಹೌದು, ಲಾಕ್‌ಡೌನ್ ಸಂದರ್ಭದಲ್ಲಿ ಮೂರಂಕಿ ದಾಟಲು ಪರದಾಡಿದ್ದ ಆಟೋ ಕಂಪನಿಗಳು ಇದೀಗ ಉತ್ತಮ ಮಾರಾಟ ಪ್ರಕ್ರಿಯೆ ಕಂಡುಕೊಂಡಿದ್ದು, ಎಂಜಿ ಮೋಟಾರ್ ಕಂಪನಿಯು ಅಗಸ್ಟ್ ಅವಧಿಯಲ್ಲಿ 2,851 ಯುನಿಟ್ ಮಾರಾಟ ಮಾಡಿದೆ. ಕಳೆದ ವರ್ಷ ಅಗಸ್ಟ್ ಅವಧಿಯಲ್ಲಿ ಕೇವಲ 2,018 ಯುನಿಟ್ ಮಾತ್ರ ಮಾರಾಟ ಮಾಡಿದ್ದ ಎಂಜಿ ಕಂಪನಿಯು ಇದೀಗ ಶೇ.41ರಷ್ಟು ಏರಿಕೆಯೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಿದೆ.

ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ

ಎಂಜಿ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹೆಕ್ಟರ್, ಹೆಕ್ಟರ್ ಪ್ಲಸ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಜುಲೈ ಅವಧಿಯಲ್ಲಿ ಬಿಡುಗಡೆಯಾಗಿರುವ ಹೆಕ್ಟರ್ ಪ್ಲಸ್ ಮಾದರಿಯು ಎಂಜಿ ಕಾರು ಮಾರಾಟ ಹೆಚ್ಚಕ್ಕೆ ಪ್ರಮುಖ ಕಾರಣವಾಗಿದೆ.

ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ

ಕರೋನಾ ವೈರಸ್ ಭೀತಿಯಿಂದಲೂ ಕೂಡಾ ಎಂಜಿ ಸೇರಿದಂತೆ ಪ್ರಮುಖ ಆಟೋ ಕಂಪನಿಗಳ ಹೊಸ ವಾಹನಗಳ ಮಾರಾಟವು ಹೆಚ್ಚಳಗೊಂಡಿದ್ದು, ಎಂಜಿ ಮೋಟಾರ್ ಸೇರಿದಂತೆ ವಿವಿಧ ಆಟೋ ಕಂಪನಿಗಳು ಶೀಘ್ರದಲ್ಲೇ ಮತ್ತಷ್ಟು ಹೊಸ ವಾಹನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ.

ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ

ಇನ್ನು ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಹೊಸ ಸಂಚಲನದೊಂದಿಗೆ ಕಾರು ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿದ್ದು, ಗ್ರಾಹಕರಿಗೆ ಹಲವಾರು ಹೊಸ ಯೋಜನೆಗಳ ಮೂಲಕ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುತ್ತಿದೆ. ಕಾರು ಮಾರಾಟ ಪ್ರಕ್ರಿಯೆಯಲ್ಲಿ ಮಾತ್ರವಲ್ಲದೆ ಗ್ರಾಹಕರ ಸೇವೆಗಳಲ್ಲೂ ಸಾಕಷ್ಟು ಸುಧಾರಣೆ ಕಂಡಿರುವ ಎಂಜಿ ಮೋಟಾರ್ ಕಂಪನಿಯು ಹೊಸದಾಗಿ ರಿಅಶ್ಯೂರ್(reassure) ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ

ಗ್ರಾಹಕರು ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಬಳಕೆ ಮಾಡಿದ ಎಂಜಿ ಕಾರುಗಳನ್ನು ಗುಣಮಟ್ಟದ ಆಧಾರದ ಅತ್ಯುತ್ತಮ ಬೆಲೆಗೆ ಮರು ಮಾರಾಟ ಮಾಡುವುದಲ್ಲದೆ ಹೊಸ ಕಾರಿನ ಮಾದರಿಯಲ್ಲೇ ಹಲವು ಆಫರ್‌ಗಳೊಂದಿಗೆ ಖರೀದಿ ಕೂಡಾ ಮಾಡಬಹುದಾಗಿದೆ.

ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ

ಗ್ರಾಹಕರಿಗೆ ಒಂದೇ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಮರು ಮಾರಾಟದೊಂದಿಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿದಾರರಿಗೆ ಸಾಕಷ್ಟು ಹೊಸ ಆಫರ್‌ಗಳನ್ನು ನೀಡುತ್ತಿದ್ದು, ಗುಣಮಟ್ಟ, ಕಾರ್ಯಕ್ಷಮತೆ ಮೇಲೆ ಯೋಗ್ಯ ದರ ನಿಗದಿಪಡಿಸಲಿದೆ.

ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ

ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಗ್ರಾಹಕರಿಗೂ ಹಲವು ಆಕರ್ಷಕ ಆಫರ್‌ಗಳೊಂದಿಗೆ ಹೊಸ ಕಾರು ಮಾರಾಟ ಪ್ರಕ್ರಿಯೆ ಮಾದರಿಯಲ್ಲೇ ಹಣಕಾಸು ಸೌಲಭ್ಯ ಮತ್ತು ವಾರಂಟಿಗಳನ್ನು ನೀಡಲಿದೆ.

ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ

ಇನ್ನು ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮವನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ಗುರಿ ಯೋಜನೆ ಹೊಂದಿರುವ ಹಲವು ಆಟೋ ಕಂಪನಿಯು ಹೊಸ ವಾಹನಗಳ ಮಾರಾಟ ಜೊತೆ ಜೊತೆಗೆ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟವನ್ನು ಹೆಚ್ಚಿಸುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

Most Read Articles

Kannada
English summary
MG August sales increased by 41 percent. Read in Kannada.
Story first published: Tuesday, September 1, 2020, 20:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X