ವೈರಸ್ ಭೀತಿ: ಸಂಪರ್ಕ ರಹಿತ ಕಾರು ಮಾರಾಟಕ್ಕೆ ಚಾಲನೆ ನೀಡಿದ ಎಂಜಿ ಮೋಟಾರ್
ಕರೋನಾ ವೈರಸ್ ಅಟ್ಟಹಾಸದಿಂದಾಗಿ ಇಡೀ ವಿಶ್ವವೇ ಆತಂಕದಲ್ಲಿದ್ದು, ವೈರಸ್‌ವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವೈರಸ್ ಭೀತಿ ನಡುವೆಯೂ ಆರ್ಥಿಕ ಪುನಶ್ಚೇತನಕ್ಕಾಗಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿರುವುದರಿಂದ ಉದ್ಯಮ ವ್ಯವಹಾರಗಳನ್ನು ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ನಿರ್ವಹಿಸುವುದೇ ಇದೀಗ ಒಂದು ಸವಾಲಾಗಿದೆ.

ಲಾಕ್‌ಡೌನ್ ವಿನಾಯ್ತಿಯಿಂದಾಗಿ ಆಟೋ ಉದ್ಯಮ ಕೂಡಾ ಇದೀಗ ಪುನಾರಂಭಗೊಂಡಿದ್ದು, ಕಳೆದ 2 ತಿಂಗಳಿನಿಂದ ಭಾರೀ ನಷ್ಟ ಅನುಭವಿಸಿರುವ ಆಟೋ ಕಂಪನಿಗಳು ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿವೆ. ಆದರೆ ಈ ಸಂಕಷ್ಟದ ಸಮಯದಲ್ಲಿ ಗ್ರಾಹಕರು ನೇರವಾಗಿ ವಾಹನ ಖರೀದಿಗೆ ಆಗಮಿಸುವುದನ್ನು ತಪ್ಪಿಸಲು ಮುಂದಾಗುತ್ತಿರುವ ಆಟೋ ಕಂಪನಿಗಳು ವೈರಸ್ ಭೀತಿಯಿಂದಾಗಿ ಆನ್‌ಲೈನ್ ಮೂಲಕ ವಾಹನ ಮಾರಾಟ ಪ್ರಕ್ರಿಯೆ ಹೆಚ್ಚಿನ ಒತ್ತುನೀಡುತ್ತಿವೆ.

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟವನ್ನು ಪುನಾರಂಭಿಸುತ್ತಿರುವ ಆಟೋ ಕಂಪನಿಗಳು ಸೋಂಕು ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ವಾಹನ ಖರೀದಿಗೆ ಸುಲಭವಾಗುವಂತೆ ಆನ್‌ಲೈನ್ ವಾಹನ ಮಾರಾಟ ಮಳಿಗೆಯನ್ನು ತೆರೆದಿವೆ.

ಎಂಜಿ ಮೋಟಾರ್ ಕೂಡಾ ಭಾರತದಲ್ಲಿ ಆನ್‌ಲೈನ್ ಕಾರು ಮಾರಾಟ ಹೆಚ್ಚಿಸಲು ಹೊಸದಾಗಿ ಶೀಲ್ಡ್ ಪ್ಲಸ್ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರಿದಿದ್ದು, ಈ ಮೂಲಕ ಕಾರು ಖರೀದಿ ಪ್ರಕ್ರಿಯೆ, ಡಿಜಿಟಲ್ ಹಣಕಾಸು ವ್ಯವಹಾರ ಮತ್ತು ಅಂತಿಮವಾಗಿ ಗ್ರಾಹಕರ ಮನೆ ಬಾಗಿಲಿಗೆ ವಾಹನ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆ ಇದಾಗಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಸದ್ಯ ಭಾರತದಲ್ಲಿ ವೈರಸ್ ಪ್ರಮಾಣವು ದಿನದಿಂದ ಹೆಚ್ಚಳವಾಗುತ್ತಿರುವರಿಂದ ಉದ್ಯಮ ವ್ಯವಹಾರಗಳನ್ನು ಅತಿ ಹೆಚ್ಚು ಸುರಕ್ಷತೆಗಳೊಂದಿಗೆ ಕೈಗೊಳ್ಳಬೇಕಾದ ಅನಿವಾರ್ಯತೆಗಳಿದ್ದು, ಮುಂಬರುವ ದಿನಗಳನ್ನು ಇನ್ನಷ್ಟು ಕಠಿಣವಾಗಿರಲಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೀಗಾಗಿ ವೈರಸ್ ಹರಡದಂತೆ ಎಲ್ಲಾ ಮಾರ್ಗಗಳಲ್ಲೂ ಸುರಕ್ಷಾ ಕ್ರಮಗಳೊಂದಿಗೆ ಉದ್ಯಮ ಮುನ್ನಡೆಸಬೇಕಾದ ಅನಿವಾರ್ಯತೆಯಲ್ಲಿರುವ ಆಟೋ ಕಂಪನಿಗಳು ಆದಷ್ಟು ಆನ್‌ಲೈನ್ ವ್ಯವಹಾರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಅನಗತ್ಯವಾಗಿ ಶೋರೂಂಗಳಿಗೆ ಗ್ರಾಹಕರು ಭೇಟಿ ನೀಡುವುದನ್ನು ತಪ್ಪಿಸಲು ಹಲವಾರು ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಜೊತೆಗೆ ಗ್ರಾಹಕರ ಸೇವೆಗಳಿಗಾಗಿಯೂ ಪ್ರತ್ಯೇಕ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿರುವ ಎಂಜಿ ಮೋಟಾರ್ ಕಂಪನಿಯು ವೈರಸ್ ಹರಡದಿರುವಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸದ್ಯದ ಪರಿಸ್ಥಿತಿಗೆ ಆನ್‌ಲೈನ್ ವ್ಯವಹಾರವೇ ಅತ್ಯುತ್ತಮ ಆಯ್ಕೆಯಾಗಿದೆ.


Click it and Unblock the Notifications