ಹೊಸ ಹೆಕ್ಟರ್ ಪ್ಲಸ್ ಕಾರು ವಿತರಣೆಯನ್ನು ಆರಂಭಿಸಿದ ಎಂಜಿ ಮೋಟಾರ್

ಕಳೆದ ವಾರವಷ್ಟೇ ಹೆಕ್ಟರ್ ಪ್ಲಸ್ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದ ಎಂಜಿ ಮೋಟಾರ್ ಕಂಪನಿಯು ಇದೀಗ ವಿತರಣೆಯನ್ನು ಆರಂಭಿಸಿದ್ದು, ಹೊಸ ಕಾರು ಎಂಪಿವಿ ಕಾರು ಖರೀದಿದಾರರ ಆಕರ್ಷಣೆ ಮಾಡುತ್ತಿದೆ.

ಹೊಸ ಹೆಕ್ಟರ್ ಪ್ಲಸ್ ಕಾರು ವಿತರಣೆಯನ್ನು ಆರಂಭಿಸಿದ ಎಂಜಿ ಮೋಟಾರ್

ಎಂಪಿವಿ ಕಾರು ಖರೀದಿದಾರರು ಹೆಕ್ಟರ್ ಪ್ಲಸ್ ಕಾರು ಖರೀದಿ ಒಲವು ತೊರುತ್ತಿದ್ದು, ಈಗಾಗಲೇ ಸಾವಿರಾರು ಗ್ರಾಹಕರು ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ಸಲ್ಲಿಸಿದ್ದಾರೆ. ಸದ್ಯ ಆಯ್ದ ಕಾರು ಮಾರಾಟಮಳಿಗೆಗಳಲ್ಲಿ ಹೊಸ ಕಾರಿನ ವಿತರಣೆಯನ್ನು ಆರಂಭಿಸಿರುವ ಎಂಜಿ ಮೋಟಾರ್ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ದೇಶಾದ್ಯಂತ ಕಾರ್ಯನಿರ್ವಹಣೆಯಲ್ಲಿರುವ 151ರ ಕಾರು ಮಾರಾಟ ಮಳಿಗೆಗಳಲ್ಲೂ ವಿತರಣೆಗೆ ಚಾಲನೆ ನೀಡಲಿದೆ.

ಹೊಸ ಹೆಕ್ಟರ್ ಪ್ಲಸ್ ಕಾರು ವಿತರಣೆಯನ್ನು ಆರಂಭಿಸಿದ ಎಂಜಿ ಮೋಟಾರ್

ಹೊಸ ಹೆಕ್ಟರ್ ಪ್ಲಸ್ ಎಸ್‌ಯುವಿ ಆವೃತ್ತಿಯು ಸದ್ಯಕ್ಕೆ 6 ಆಸನ ಸೌಲಭ್ಯಗಳೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು ಸಹ ಮಾರಾಟ ಮಾಡುವುದಾಗಿ ಎಂಜಿ ಕಂಪನಿಯು ಹೇಳಿಕೊಂಡಿದೆ.

ಹೊಸ ಹೆಕ್ಟರ್ ಪ್ಲಸ್ ಕಾರು ವಿತರಣೆಯನ್ನು ಆರಂಭಿಸಿದ ಎಂಜಿ ಮೋಟಾರ್

ಹೊಸ ಕಾರು ಗ್ರಾಹಕರ ಬೇಡಿಕೆ ಅನ್ವಯ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಲ್ಲದೆ ಎಂಪಿವಿ ಕಾರು ಮಾದರಿಗಳಿಗೂ ಪೈಪೋಟಿ ನೀಡಲುವ ನೀರಿಕ್ಷೆಯಲ್ಲಿದೆ.

ಹೊಸ ಹೆಕ್ಟರ್ ಪ್ಲಸ್ ಕಾರು ವಿತರಣೆಯನ್ನು ಆರಂಭಿಸಿದ ಎಂಜಿ ಮೋಟಾರ್

ಹೆಕ್ಟರ್ ಪ್ಲಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.54 ಲಕ್ಷ ಬೆಲೆ ಹೊಂದಿದ್ದು, ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಒಟ್ಟು 8 ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

ಹೊಸ ಹೆಕ್ಟರ್ ಪ್ಲಸ್ ಕಾರು ವಿತರಣೆಯನ್ನು ಆರಂಭಿಸಿದ ಎಂಜಿ ಮೋಟಾರ್

ಪೆಟ್ರೋಲ್ ಮಾದರಿಯಲ್ಲಿ ಮೂರು ವೆರಿಯೆಂಟ್, ಪೆಟ್ರೋಲ್ ಹೈಬ್ರಿಡ್ ಮಾದರಿಯಲ್ಲಿ ಒಂದು ವೆರಿಯೆಂಟ್ ಮತ್ತು ಡೀಸೆಲ್ ವೆರಿಯೆಂಟ್‌ನಲ್ಲಿ ನಾಲ್ಕು ವೆರಿಯೆಂಟ್‌ಗಳನ್ನು ಪಡೆದುಕೊಂಡಿದ್ದು, ಸಾಮಾನ್ಯ ಹೆಕ್ಟರ್ ಕಾರಿಗೂ ಹೆಕ್ಟರ್ ಪ್ಲಸ್ ಕಾರು ರೂ.65 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಹೊಸ ಹೆಕ್ಟರ್ ಪ್ಲಸ್ ಕಾರು ವಿತರಣೆಯನ್ನು ಆರಂಭಿಸಿದ ಎಂಜಿ ಮೋಟಾರ್

ಇನ್ನು ಹೊಚ್ಚ ಹೊಸ ಹೆಕ್ಟರ್ ಪ್ಲಸ್ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಹೇಳುವುದಾದರೇ, ಹೊಸ ಕಾರು ಸಾಮಾನ್ಯ ಹೆಕ್ಟರ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಸಿದ್ದಗೊಂಡಿದ್ದು, 2+2+2 ಆಸನ ವಿನ್ಯಾಸವನ್ನು ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಹೊಸ ಹೆಕ್ಟರ್ ಪ್ಲಸ್ ಕಾರು ವಿತರಣೆಯನ್ನು ಆರಂಭಿಸಿದ ಎಂಜಿ ಮೋಟಾರ್

ಹೊಸ ಕಾರಿನ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ರೌನ್ ಲೆದರ್ ಆಸನವು ಹೆಡ್ ರೆಸ್ಟ್ ಮತ್ತು ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹೊಸ ಹೆಕ್ಟರ್ ಪ್ಲಸ್ ಕಾರು ವಿತರಣೆಯನ್ನು ಆರಂಭಿಸಿದ ಎಂಜಿ ಮೋಟಾರ್

ಎಂಜಿನ್ ಸಾಮಾರ್ಥ್ಯ

ಸಾಮಾನ್ಯ ಮಾದರಿಯ 5 ಆಸನವುಳ್ಳ ಹೆಕ್ಟರ್ ಕಾರಿನಲ್ಲಿ ನೀಡಲಾಗಿರುವ ಎಂಜಿನ್ ಮಾದರಿಯೇ ಇದೀಗ ಹೊಸ ಹೆಕ್ಟರ್ ಪ್ಲಸ್‌ನಲ್ಲೂ ನೀಡಲಾಗಿದ್ದು, 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಜೋಡಣೆ ಮಾಡಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ಹೆಕ್ಟರ್ ಪ್ಲಸ್ ಕಾರು ವಿತರಣೆಯನ್ನು ಆರಂಭಿಸಿದ ಎಂಜಿ ಮೋಟಾರ್

2.0-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 170-ಬಿಎಚ್‌ಪಿ ಉತ್ಪಾದನೆ ಮಾಡಲಿದ್ದರೆ 1.5-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 143-ಬಿಎಚ್‌ಪಿ ಮತ್ತು ಹೈಬ್ರಿಡ್ ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ 48ವೋಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಉತ್ತಮ ಇಂಧನ ಕಾರ್ಯಕ್ಷಮತೆ ಹೊಂದಿದೆ.

More from DriveSpark

Article Published On: Saturday, July 25, 2020, 20:50 [IST]
English summary
MG Motor Started The Deliveries Of New Hector Plus In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+