ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಆಕ್ಸೆಸರಿಸ್ ಬಹಿರಂಗಪಡಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಮುಂದಿನ ತಿಂಗಳು ಅಕ್ಟೋಬರ್ ಮಧ್ಯಂತರದಲ್ಲಿ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಬಿಡುಗಡೆ ಮುನ್ನ ಕಂಪನಿಯು ಕಾರಿನ ಆಕ್ಸೆಸರಿಸ್ ಮಾಹಿತಿ ಬಹಿರಂಗಪಡಿಸಿದೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಆಕ್ಸೆಸರಿಸ್ ಬಹಿರಂಗ

ಐಷಾರಾಮಿ ಫೀಚರ್ಸ್‌ನೊಂದಿಗೆ ಹಲವಾರು ಹೊಸ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿರುವ ಗ್ಲೊಸ್ಟರ್ ಕಾರು ಸ್ಮಾರ್ಟ್ ಮತ್ತು ಸೂಪರ್ ವೆರಿಯೆಂಟ್‌ನೊಂದಿಗೆ 6 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರವಿದ್ದು, ಪ್ರೀಮಿಯಂ ಎಸ್‌ಯುವಿ ಕಾರು ಮಾದರಿಯಾಗಿರುವ ಗ್ಲೊಸ್ಟರ್ ಮಾದರಿಯು ಲೆವಲ್ 1 ಅಟೊನೊಮಸ್ ಸಿಸ್ಟಂ ಸೇರಿದಂತೆ ಹತ್ತಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿಯುತ್ತಿದೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಆಕ್ಸೆಸರಿಸ್ ಬಹಿರಂಗ

ಎಂಜಿ ಮೋಟಾರ್ ಬಹಿರಂಗಪಡಿಸಿರುವ ಪ್ರೀಮಿಂ ಆಕ್ಸೆಸರಿಸ್‌ಗಳು ಗ್ರಾಹಕರಿಗೆ ಕಾರಿನಲ್ಲಿರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಖರೀದಿ ಮಾಡಬೇಕಿದ್ದು, ಕಾರಿಗೆ ಬಲಿಷ್ಠ ವಿನ್ಯಾಸ ನೀಡುವುದಕ್ಕಾಗಿ ಹಲವಾರು ಆಕ್ಸೆಸರಿಸ್‌ಗಳನ್ನು ಅಭಿವೃದ್ದಿಗೊಳಿಸಿದೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಆಕ್ಸೆಸರಿಸ್ ಬಹಿರಂಗ

ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ಎನ್ನಿಸಲಿರುವ ಗ್ಲೊಸ್ಟರ್ ಕಾರು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಆಕ್ಸೆಸರಿಸ್ ಬಹಿರಂಗ

ಎಂಜಿ ಕಂಪನಿಯು ಬಹಿರಂಗಪಡಿಸಿರುವ ಆಕ್ಸೆಸರಿಸ್ ಪಟ್ಟಿಯಲ್ಲಿ ಬಾಡಿ ಸೈಡ್ ಮೊಡ್ಡಿಂಗ್, ಹುಡ್ ಸ್ಕೂಪ್, ಬಂಪರ್ ಕಾರ್ನರ್, ವಿಶೇಷ ಗ್ರಾಫಿಕ್ಸ್‌ವುಳ್ಳ ಕ್ರೋಮ್, ಸೈಡ್ ರಾಕ್ ರೈಲ್ ಸೌಲಭ್ಯಗಳನ್ನು ನೀಡಲಾಗಿದ್ದು, ಹೆಚ್ಚುವರಿ ಆಕ್ಸೆಸರಿಸ್‌ಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗುತ್ತದೆ. ಸ್ಟ್ಯಾಂಡರ್ಡ್ ಆಕ್ಸೆಸರಿಸ್‌ಗಳು ಸಾಮಾನ್ಯ ದರದಲ್ಲೇ ಒಳಗೊಂಡಿರಲಿದ್ದು, ಎಸ್‌ಯವಿ ಬಲಿಷ್ಠತೆಗೆ ಮತ್ತಷ್ಟು ಮೆರಗು ನೀಡಲು ಹೆಚ್ಚುವರಿ ಆಕ್ಸೆಸರಿಸ್ ಸಹಕಾರಿಯಾಗಲಿವೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಆಕ್ಸೆಸರಿಸ್ ಬಹಿರಂಗ

ಇನ್ನು ಗ್ಲೊಸ್ಟರ್ ಕಾರಿನಲ್ಲಿ ಅಡ್ವಾನ್ಸ್ ಡ್ರೈವರ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಪಾರ್ಕ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೈನ್ ಡಿಪಾರ್ಚರ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಫಾರ್ವಡ್ ಕುಲಿಷನ್ ವಾರ್ನಿಂಗ್, ಆಲ್ ಟೆರೆನ್ ಸಿಸ್ಟಂ, ಫೋರ್ ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿದ್ದು, ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾಗಿ ಸ್ಯಾಂಡ್, ಮಡ್, ರಾಕ್, ಸ್ನೋ, ಇಕೋ, ಸ್ಪೋರ್ಟ್ ಮತ್ತು ನಾರ್ಮಲ್ ಡ್ರೈವಿಂಗ್ ಮೋಡ್‌ಗಳನ್ನು ಪಡೆದಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಆಕ್ಸೆಸರಿಸ್ ಬಹಿರಂಗ

ಜೊತೆಗೆ ಹೊಸ ಕಾರಿನಲ್ಲಿ ಎಲ್‌ಇಡಿ ಲೈಟಿಂಗ್ಸ್, ಪನೊರಮಿಕ್ ಸನ್‌ರೂಫ್, 19-ಇಂಚಿನ ಅಲಾಯ್ ವೀಲ್ಹ್, 12.3-ಇಂಚಿನ ಟಚ್ ಸ್ಕ್ರೀನ್ ಇನ್ಟೋಟೈನ್‌ಮೆಂಟ್, ಮುಂಭಾಗದಲ್ಲಿ ಮತ್ತು ಮಧ್ಯದ ಸಾಲಿನ ಆಸನಗಳಲ್ಲಿ ವೆಂಟಿಲೆಟರ್ ಆಸನೊಂದಿಗೆ ಹಿಟಿಂಗ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ಆ್ಯಂಬಿಯೆಂಟ್ ಲೈಟಿಂಗ್, ಪ್ರೀಮಿಯಂ ಲೆದರ್ ಸೀಟುಗಳು, 8-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಟೀರಿಂಗ್ ಮೌಟೆಂಡ್ ಕಂಟ್ರೋಲ್ಸ್ ಸೇರಿ ಹಲವಾರು ಫೀಚರ್ಸ್‌ಗಳಿವೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಆಕ್ಸೆಸರಿಸ್ ಬಹಿರಂಗ

ಎಂಜಿ ಮೋಟಾರ್ ಕಂಪನಿಯು ಗ್ಲೊಸ್ಟರ್ ಎಸ್‌ಯುವಿಯಲ್ಲಿ 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, 4x4 ಮಾದರಿಯಲ್ಲಿ ಟ್ವಿನ್ ಟರ್ಬೋ ಮತ್ತು 4x2 ಮಾದರಿಯಲ್ಲಿ ಸಿಂಗಲ್ ಟರ್ಬೋ ಎಂಜಿನ್ ನೀಡಲಾಗಿದ್ದು, ಎರಡು ಮಾದರಿಗಳಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ನೀಡಲಾಗಿದ್ದು, ಟ್ವಿನ್ ಟರ್ಬೋ ಮಾದರಿಯು 218-ಬಿಹೆಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಸಿಂಗಲ್ ಟರ್ಬೋ ಮಾದರಿಯು 160-ಬಿಎಚ್‌ಪಿ, 375-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಆಕ್ಸೆಸರಿಸ್ ಬಹಿರಂಗ

ಹೊಸ ಕಾರು ಖರೀದಿಗೆ ಈಗಾಗಲೇ ರೂ.1 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಸಲ್ಲಿಸಬಹುದಾಗಿದ್ದು, ಹೊಸ ಕಾರು ಪ್ರೀಮಿಯಂ ಫೀಚರ್ಸ್ ಮತ್ತು ಎಂಜಿನ್ ಸೌಲಭ್ಯಕ್ಕೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 35 ಲಕ್ಷದಿಂದ ರೂ.40 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Article Published On: Monday, September 28, 2020, 20:37 [IST]
English summary
MG Gloster Exterior Accessories Unveiled. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+