ಶೀಘ್ರದಲ್ಲೇ ಅಧಿಕ ಮೈಲೇಜ್ ಪ್ರೇರಿತ ಹೊಸ ವೆರಿಯೆಂಟ್ ಪಡೆದುಕೊಳ್ಳಲಿದೆ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್
ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹೊಸ ಬದಲಾವಣೆ ಪರಿಚಯಿಸಲು ಮುಂದಾಗಿದ್ದು, ಶೀಘ್ರದಲ್ಲೇ ಅಧಿಕ ಮೈಲೇಜ್ ಪ್ರೇರಿತ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯ ಪ್ರತಿ ಚಾರ್ಜ್‌ಗೆ 340 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದು, ಮುಂಬರುವ ದಿನಗಳಲ್ಲಿ ಪ್ರತಿ ಚಾರ್ಜ್‌ಗೆ ಗರಿಷ್ಠ 500 ಕಿ.ಮೀ ಮೈಲೇಜ್ ನೀಡುವ ಹೊಸ ವೆರಿಯೆಂಟ್ ಪರಿಚಯಿಸಲು ಎಂಜಿ ಕಂಪನಿಯು ಸಿದ್ದತೆ ನಡೆಸಿದೆ. ಜೆಡ್ಎಸ್ ಎಲೆಕ್ಟ್ರಿಕ್ ಖರೀದಿಗೆ ಮುಂದಾಗುತ್ತಿರುವ ಬಹುತೇಕ ಗ್ರಾಹಕರು ಹೆಚ್ಚು ಮೈಲೇಜ್ ಹೊಂದಿರುವ ಮಾದರಿಯ ಖರೀದಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಹೊಸ ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.

ಇನ್ನು ಎಂಜಿ ಮೋಟಾರ್ ಕಂಪನಿಯು ಇದೇ ಹಿಂದೆ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಯ ಸಂದರ್ಭದಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್ ಮತ್ತು ಹೈದ್ರಾಬಾದ್ ನಗರಗಳಲ್ಲಿ ಮಾತ್ರವೇ ಮಾರಾಟಕ್ಕೆ ಚಾಲನೆ ನೀಡಿತ್ತು. ಇದೀಗ ಚಾರ್ಜಿಂಗ್ ಸ್ಟೇಷನ್‌ಗಳ ಸಂಖ್ಯೆ ಹೆಚ್ಚಿದಂತೆ ಮತ್ತೆ ಪ್ರಮುಖ ಆರು ಹೊಸ ನಗರಗಳಲ್ಲೂ ಜೆಡ್ಎಸ್ ಇವಿ ಕಾರಿನ ಮಾರಾಟವನ್ನು ವಿಸ್ತರಣೆ ಮಾಡಿದೆ.

ಹೊಸದಾಗಿ ಪುಣೆ, ಜಯಪುರ್, ಚೆನ್ನೈ, ಸೂರತ್, ಕೊಚ್ಚಿನ್ ಮತ್ತು ಚಂಡಿಗಢದಲ್ಲಿ ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಬುಕ್ಕಿಂಗ್ ಪ್ರಕ್ರಿಯೆಯ ಜೊತೆಗೆ ವಿತರಣೆಯು ಕೂಡಾ ಇದೀಗ ಪುನಾರಂಭಗೊಂಡಿದೆ.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಎಂಜಿ ಮೋಟಾರ್ ಕಂಪನಿಯು ಲಾಕ್‌ಡೌನ್ ಹಿನ್ನಲೆ ಬಿಡಿಭಾಗಗಳ ಕೊರತೆಯಿಂದಾಗಿ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಉತ್ಪಾದನೆಯನ್ನು ತಾತ್ಕಾಲಿಕ ಬಂದ್ ಮಾಡಿತ್ತು. ಇದೀಗ ಲಾಕ್‌ಡೌನ್ ವಿನಾಯ್ತಿ ನೀಡಿರುವುದರಿಂದ ಆಟೋ ಉದ್ಯಮ ಮತ್ತೆ ಪುನಾರಂಭಗೊಂಡಿದೆ.

ಜೆಡ್ಎಸ್ ಎಲೆಕ್ಟ್ರಿಕ್ ಕಾರು ಸದ್ಯ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸೈಟ್ ಮಾದರಿಯ ಬೆಸ್ ವೆರಿಯೆಂಟ್ ಮಾದರಿಯಾಗಿ ಮತ್ತು ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಹೈ ಎಂಡ್ ಮಾದರಿಯಾಗಿ ಮಾರಾಟವಾಗುತ್ತಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಜೆಡ್ಎಸ್ ಇವಿ ಕಾರಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ಎಕ್ಸೈಟ್ ಆವೃತ್ತಿಗೆ ರೂ.20.58 ಲಕ್ಷ ಮತ್ತು ಎಕ್ಸ್‌ಕ್ಲೂಸಿವ್ ಆವೃತ್ತಿಗೆ ರೂ.23.58 ಲಕ್ಷ ನಿಗದಿ ಪಡಿಸಲಾಗಿದ್ದು, ಬಿಡುಗಡೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಬುಕ್ ಮಾಡಿದ್ದ 1 ಸಾವಿರ ಗ್ರಾಹಕರಿಗೆ ಬರೋಬ್ಬರಿ ರೂ.1 ಲಕ್ಷ ಆಫರ್ ನೀಡಲಾಗಿತ್ತು. ಆದರೆ ಇದೀಗ ಯಾವುದೇ ಆಫರ್ ನೀಡುತ್ತಿಲ್ಲ.

ಬ್ಯಾಟರಿ ಸಾಮರ್ಥ್ಯ
ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎರಡು ವೆರಿಯೆಂಟ್‌ಗಳಲ್ಲೂ 44.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಈ ಮೂಲಕ ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಯು ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪಡೆದುಕೊಳ್ಳಲಿದ್ದು, ಮೈಲೇಜ್‌ಗೆ ತಕ್ಕಂತೆ ಕಾರಿನ ಬೆಲೆ ಕೂಡಾ ತುಸು ದುಬಾರಿಯಾಗಿರಲಿದೆ.


Click it and Unblock the Notifications








