ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

ಎಂಜಿ ಮೋಟಾರ್ ಇಂಡಿಯಾ ಹೊಸ 10 ನಗರಗಳಲ್ಲಿ ಎಂಜಿ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಎಂಜಿ ಕಂಪನಿಯು ಹೊಸ ಟೀಸರ್ ವೀಡಿಯೋ ಮೂಲಕ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಹೊಸ ನಗರಗಳಲ್ಲಿ ಬಿಡುಗಡೆಗೊಳಿಸಲಿದೆ ಎಂದು ತಿಳಿಸಿದೆ.

ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಭಾರತದಾದ್ಯಂತ 10 ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಕೋಲ್ಕತಾ, ಲಕ್ನೋ, ಲುಧಿಯಾನ, ಕೊಯಮತ್ತೂರು, ಡೆಹ್ರಾಡೂನ್, ನಾಗ್ಪುರ, ಆಗ್ರಾ, ಔರಂಗಾಬಾದ್, ಇಂದೋರ್, ಮತ್ತು ವಿಶಾಖಪಟ್ಟಣಂ ಸೇರಿವೆ. ದೇಶದ ಹೊಸ ನಗರಗಳ ಸೇರ್ಪಡೆಯು ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯ ಹಂತವಾರು ಮಾರಾಟ ವಿಸ್ತರಣೆಯ ಭಾಗವಾಗಿದೆ.

ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

ಈ ಹೊಸ ನಗರಗಳಲ್ಲಿ ಎಲೆಕ್ಟ್ರಿಕ್-ಎಸ್‌ಯುವಿ ಲಭ್ಯವಾಗುವಂತೆ ಮಾಡುವುದರ ಜೊತೆಗೆ ಇವಿ ಖರೀದಿದಾರರಿಗೆ ಸುಲಭವಾಗಿ ಬಳಕೆಯಾಗುವಂತಹ ಸಾಕಷ್ಟು ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶವನ್ನು ಕಂಪನಿಯು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

ಎಂಜಿ ಜೆಡ್ಎಸ್ ಎಸ್‍ಯುವಿಯು ಬಿಡುಗಡೆಯಾದ ಆರಂಭದಲ್ಲಿ ಮುಂಬೈ, ದೆಹಲಿ, ಅಹಮದಾಬಾದ್, ಬೆಂಗಳೂರು ಮತ್ತು ಹೈದರಾಬಾದ್ ಎಂಬ ಐದು ನಗರಗಳಲ್ಲಿ ಮಾತ್ರ ಮಾರಾಟವಾಯಿತು. ಎರಡನೇ ಹಂತದ ವಿಸ್ತರಣೆಯಲ್ಲಿ ಕಂಪನಿಯು ಪುಣೆ, ಸೂರತ್, ಕೊಚ್ಚಿನ್, ಚಂಡೀಗಡ್, ಜೈಪುರ ಮತ್ತು ಚೆನ್ನೈ ಸೇರಿದಂತೆ ಆರು ಹೊಸ ನಗರಗಳನ್ನು ಸೇರಿಕೊಂಡಿತು.

ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

ಎಂಜಿ ಕಂಪನಿಯು ಈ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯ ಎಂಟ್ರಿ ಲೆವೆಲ್ ವೆರಿಯೆಂಟ್ ಬೆಲೆಯು ರೂ.20.88 ಲಕ್ಷಗಳಾದರೆ, ಟಾಪ್-ಸ್ಪೆಕ್ ಬೆಲೆಯು ರೂ. 23.58 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 3-ಹಂತದ ಪರ್ಮೆನೆಂಟ್ ಮ್ಯಾಗ್ನೆಟ್ ಅನ್ನು 44.5 ಕಿ.ವ್ಯಾ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗೆ ಜೋಡಿಸಲಾಗಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 141 ಬಿಹೆಚ್‍ಪಿ ಪವಎ ಮತ್ತು 353 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

ಎಂಜಿ ಜೆಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯು ಒಂದು ಬಾರಿ ಪೂರ್ಣ ಪ್ರಮಾಣದ ಜಾರ್ಜ್ ಮಾಡಿದರೆ 340 ಕಿ.ಮೀ ಚಲಿಸುತ್ತದೆ. ಹೋಮ್ ಚಾರ್ಜರ್ ಮೂಲಕ ಝಡ್ಎಸ್ ಎಸ್‍ಯುವಿಯನ್ನು 6 ರಿಂದ 7 ಗಂಟೆಗಳ ಚಾರ್ಜ್ ಮಾಡಿದಾಗ ಶೇ.80 ವರೆಗೆ ಚಾರ್ಜ್ ಆಗುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

50 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಎಸ್‍ಯುವಿಯನ್ನು ಚಾರ್ಜ್ ಮಾಡುವಾಗ ಬ್ಯಾಟರಿಗಳನ್ನು ಕೇವಲ 50 ನಿಮಿಷಗಳಲ್ಲಿ 0 ರಿಂದ 80% ವರೆಗೆ ಚಾರ್ಜ್ ಮಾಡಬಹುದಾಗಿದೆ. ಇದು ಬ್ರೇಕಿಂಗ್ ಮಾಡುವಾಗ ಬ್ಯಾಟರಿಗಳನ್ನು ಚಾರ್ಜ್ ಮಾಡುತ್ತದೆ ಮತ್ತು ಅದರ ಮೈಲೇಜ್ ಅನ್ನು ಹೆಚ್ಚಿಸುತ್ತದೆ.

ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

ಎಲೆಕ್ಟ್ರಿಕ್ ಎಸ್‍ಯುವಿಯ ಹೊರಭಾಗದಲ್ಲಿ ಸ್ಟಾರ್-ರೈಡರ್ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿರುವ ಎಲ್‌ಇಡಿ ಡಿಆರ್‌ಎಲ್, ರೂಫ್ ರೈಲ್ ಮತ್ತು ಲ್ಇಡಿ ಟೈಲ್-ಲ್ಯಾಂಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

ಈ ಎಲೆಕ್ಟ್ರಿಕ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಬ್ರಾಂಡ್‌ನ ‘ಐ-ಸ್ಮಾರ್ಟ್' ಕನೆಕ್ಟಿವಿಟಿ ಕಾರು ತಂತ್ರಜ್ಞಾನವನ್ನು ಬೆಂಬಲಿಸುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಶೀಘ್ರದಲ್ಲೇ ಹೊಸ ನಗರಗಳಲ್ಲಿ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಇವಿ

ಎಂಜಿ ಮೋಟಾರ್ ಇಂಡಿಯಾ ಹೊಸ ನಗರಗಳಲ್ಲಿಯು ಜಿಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಹೊಸ ನಗರಗಳಲ್ಲಿಯು ಬಿಡುಗಡೆಗೊಳಿಸುತ್ತಿದೆ. ಎಂಜಿ ಮೋಟಾರ್ ತನ್ನ ಝೆಡ್ಎಸ್ ಎಸ್‍ಯುವಿಯನ್ನು ಹೊಸ ನಗರಗಳಲ್ಲಿ ಬಿಡುಗಡೆಗೊಳಿಸುವುದರಿಂಡ ಮಾರಾಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

Most Read Articles

Kannada
English summary
MG ZS EV To Launch In 10 New Cities Soon. Read In Kannada.
Story first published: Saturday, September 26, 2020, 15:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X