ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಕೋವಿಡ್-19 ಪರಿಣಾಮ ನೆಲಕಚ್ಚಿದ್ದ ಆಟೋ ಉದ್ಯಮವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ಹೊಸ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಂಡಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಹೊಸ ವಾಹನಗಳ ನೋಂದಣಿಯು 2020ರ ಅಗಸ್ಟ್ ಅವಧಿಯಲ್ಲಿ ಶೇ. 26.81ರಷ್ಟು ಕುಸಿತ ಕಂಡುಬಂದಿದ್ದು, ಪ್ಯಾಸೆಂಜರ್ ಕಾರುಗಳು, ದ್ವಿಚಕ್ರ ವಾಹನಗಳು, ತ್ರಿ ಚಕ್ರ ವಾಹನಗಳು, ವಾಣಿಜ್ಯ ವಾಹನಗಳು ಮತ್ತು ಟ್ರ್ಯಾಕ್ಟ್ ಮಾರಾಟವು ಒಟ್ಟಾರೆಯಾಗಿ 11,88,087 ಯುನಿಟ್ ಮಾರಾಟ ದಾಖಲಿಸಿವೆ. ಇದರಲ್ಲಿ ಟ್ರ್ಯಾಕ್ಟರ್ ಮಾರಾಟವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ವಾಹನಗಳ ಮಾರಾಟದಲ್ಲೂ ಕುಸಿತ ಕಂಡುಬಂದಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

2019ರ ಅಗಸ್ಟ್ ಅವಧಿಯಲ್ಲಿ 16,23,218 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಈ ಬಾರಿ ಶೇ. 26.81ರಷ್ಟು ಕುಸಿತ ಅನುಭವಿಸಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟವು ತುಸು ಹೆಚ್ಚಳವಾಗಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಶೇ. 40ರಿಂದ ಶೇ.65ರಷ್ಟು ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ಹೊಸ ವಾಹನ ಮಾರಾಟದಲ್ಲಿ ಬೆಳವಣಿಗೆ ಕಾರಣುತ್ತಿದ್ದು, ಹೊಸ ವಾಹನ ಮಾರಾಟವು ಮೊದಲಿನ ಸ್ಥಿತಿಗೆ ಮರಳಲು ಇನ್ನು ಎರಡು ವರ್ಷಗಳ ಕಾಲಾವಕಾಶ ಬೇಕಾಗಬಹುದು ಎನ್ನಲಾಗಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಆದರೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟವು ಮಾರಾಟ ತೀವ್ರ ಬೆಳವಣಿಗೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಮತ್ತು ಮಹೀಂದ್ರಾ ಸ್ಕಾರ್ಪಿಯೋ ಕಾರುಗಳ ಮಾರಾಟವು ಹೆಚ್ಚಳವಾಗಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಹೌದು, 2020ರ ಅಗಸ್ಟ್ ಅವಧಿಯಲ್ಲಿ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳು ಇತರೆ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದ್ದು, ಅಗಸ್ಟ್ ತಿಂಗಳಿನಲ್ಲಿಯೇ ಶೇ. 65ರಷ್ಟು ಹೆಚ್ಚಳವಾಗಿರುವುದು ಅಂಕಿ-ಅಂಶಗಳಲ್ಲಿ ಸಾಬೀತಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ನ್ಯೂ ಜನರೇಷನ್ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರು ಮಾದರಿಗಳೇ ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಗಳಲ್ಲಿ ಮುಂಚೂಣಿಯಲ್ಲಿದ್ದು, ಈ ಕಾರು ಮಾದರಿಗಳೇ ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ ಶೇ.60ರಷ್ಟು ಪಾಲು ಹೊಂದಿವೆ ಎನ್ನಬಹುದು.

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.4-ಲೀಟರ್ ಪೆಟ್ರೋಲ್ ಟರ್ಬೋ ಮಾದರಿಗಳನ್ನು ಹೊಂದಿರುವ ಕ್ರೆಟಾ ಮತ್ತು ಸೆಲ್ಟೊಸ್ ಕಾರುಗಳು ಒಂದೇ ಮಾದರಿಯ ಎಂಜಿನ್‌ನೊಂದಿಗೆ ವಿಭಿನ್ನ ತಾಂತ್ರಿಕ ಅಂಶ ಮತ್ತು ವಿನ್ಯಾಸದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿವೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಇದರೊಂದಿಗೆ ಹೊಸದಾಗಿ ಬಿಡುಗಡೆಯಾಗಿರುವ ಎಂಜಿ ಹೆಕ್ಟರ್, ಮಹೀಂದ್ರಾ ಸ್ಕಾರ್ಪಿಯೋ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳು ಸಹ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕರೋನಾ ವೈರಸ್ ಪರಿಣಾಮ ಹೆಚ್ಚುತ್ತಿರುವ ಸ್ವಂತ ವಾಹನಗಳ ಪರಿಣಾಮ ಹೊಸ ಕಾರುಗಳ ಮಾರಾಟವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

Article Published On: Friday, September 11, 2020, 8:45 [IST]
English summary
Mid-Size SUV Segment Sales Increased By 65 Per Cent In August 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+