ಭಾರತದಲ್ಲಿ ಹೊಸ ಬಂಡವಾಳ ಹೂಡಿಕೆಯೊಂದಿಗೆ ಮತ್ತಷ್ಟು ಕಾರು ಬಿಡುಗಡೆ ಮಾಡಲಿದೆ ಮಿಟ್ಸುಬಿಷಿ
ಜಪಾನ್ ಕಾರು ಉತ್ಪಾದನಾ ಕಂಪನಿಯಾಗಿರುವ ಮಿಟ್ಸುಬಿಷಿ ಭಾರತದಲ್ಲಿ ಹೊಸ ಹೂಡಿಕೆಯೊಂದಿಗೆ ಮತ್ತಷ್ಟು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರುಗಳು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ.

ದೇಶಿಯ ಮಾರುಕಟ್ಟೆಯಲ್ಲಿ ಪಜೆರೊ ಎಸ್‌ಯುವಿ ಕಾರು ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಕಾರು ಮಾರಾಟದಲ್ಲಿ ಅಷ್ಟಾಗಿ ಮುಂಚೂಣಿ ಸಾಧಿಸದ ಮಿಟ್ಸುಬಿಷಿ ಕಂಪನಿಯು ಹೊಸ ಬಂಡವಾಳ ಹೂಡಿಕೆಯೊಂದಿಗೆ ಬೃಹತ್ ಯೋಜನೆ ಚಾಲನೆ ನೀಡುತ್ತಿದ್ದು, ದೇಶದ ಅತಿ ದೊಡ್ಡ ವಾಹನ ಉತ್ಪಾದನಾ ಬಿಡಿಭಾಗಗಳ ಕಂಪನಿಯೊಂದು ಮಿಟ್ಸುಬಿಷಿ ಹೊಸ ಕಾರು ಉತ್ಪಾದನೆ ಮೇಲೆ ಹೂಡಿಕೆಗೆ ಒಪ್ಪಿಗೆ ಸೂಚಿಸಿದೆ.

ಹೊಸ ಮಾದರಿಯ ಕಾರುಗಳ ಬಿಡುಗಡೆಗಾಗಿ ಮೊದಲ ಹಂತದಲ್ಲಿ ರೂ.500 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಬಂಡವಾಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ಹೊಸ ಬಂಡವಾಳ ಹೂಡಿಕೆಯೊಂದಿಗೆ ಕಾರು ಉತ್ಪಾದನಾ ಸಾಮಾರ್ಥ್ಯವನ್ನು ಹೆಚ್ಚಿಸಲಿರುವ ಮಿಟ್ಸುಬಿಷಿ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಪಜೆರೊ ಸ್ಪೋರ್ಟ್ಸ್ ಮತ್ತು ಔಟ್‌ಲ್ಯಾಂಡರ್ ಜೊತೆಗೆ ಮತ್ತಷ್ಟು ಹೊಸ ಎಸ್‌ಯುವಿ ಮತ್ತು ಎಂಪಿವಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಮಾಹಿತಿಗಳ ಪ್ರಕಾರ, ಮಿಟ್ಸುಬಿಷಿ ಕಂಪನಿಯು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು ನಾಲ್ಕು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳಲ್ಲಿ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಸಹ ಸೇರಿದೆ.

ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಪೈಪೋಟಿ ಬಿಡುಗಡೆಯಾಗಲಿದ್ದರೆ ಎಂಪಿವಿ ಮಾದರಿಯು ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಇನ್ನುಳಿದ ಎರಡು ಕಾರುಗಳಲ್ಲಿ ಒಂದು 5 ಸೀಟರ್ ಐಷಾರಾಮಿ ಎಸ್‌ಯುವಿ ಮಾದರಿಯಾಗಿದ್ದರೆ ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ 7 ಸೀಟರ್ ಎಸ್‌ಯುವಿಯೊಂದು ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಯೋಜನೆ ಅಡಿ ಅಭಿವೃದ್ದಿಯಾದ ಮೊದಲ ಕಾರು ಇದೇ ವರ್ಷಾಂತ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಹಾಗೆಯೇ ಮಾರಾಟ ಮಳಿಗೆಗಳು ಮತ್ತು ಗ್ರಾಹಕರ ಸೇವೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲೂ ಯೋಜನೆ ರೂಪಿಸಲಾಗಿದ್ದು, ಪ್ರಸ್ತುತ 11 ಮಿಟ್ಸಬಿಷಿ ಮಾರಾಟ ಮಳಿಗೆಗಳು ಮಾತ್ರವೇ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಇದು ಮುಂಬರುವ 2021ರ ಹೊತ್ತಿಗೆ 100 ಹೊಸ ಕಾರು ಡೀಲರ್‌ಶಿಪ್ ತೆರೆಯುವ ಯೋಜನೆಯಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಕಾರು ಉತ್ಪನ್ನಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗಳನ್ನು ಕೈಗೊಳ್ಳುತ್ತಿದೆ.


Click it and Unblock the Notifications








