ಮೂರೇ ತಿಂಗಳಲ್ಲಿ ಭಾರೀ ಪ್ರಮಾಣದ ಫೇಸ್ ಮಾಸ್ಕ್ ವಿತರಿಸಿದ ಮಹೀಂದ್ರಾ

ಭಾರತದ ಖ್ಯಾತ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಲಾಕ್‌ಡೌನ್ ಜಾರಿಯಾದಾಗಿನಿಂದ ಕಂಪನಿಯು ಅಗತ್ಯವಿರುವವರಿಗೆ ವೈದ್ಯಕೀಯ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸುತ್ತಿದೆ.

ಮೂರೇ ತಿಂಗಳಲ್ಲಿ ಭಾರೀ ಪ್ರಮಾಣದ ಫೇಸ್ ಮಾಸ್ಕ್ ವಿತರಿಸಿದ ಮಹೀಂದ್ರಾ

ಮಾರ್ಚ್ ತಿಂಗಳಿನಲ್ಲಿ ಕಂಪನಿಯು ಕೈಗೆಟುಕುವ ಬೆಲೆಯ ವೆಂಟಿಲೇಟರ್ ಮೂಲಮಾದರಿಯನ್ನು ತಯಾರಿಸಿತ್ತು. ಇದರ ಉತ್ಪಾದನೆಯನ್ನು ಜೂನ್ ನಿಂದ ಆರಂಭಿಸಿತ್ತು. ಇದರ ಜೊತೆಗೆ ಕಂಪನಿಯು ಆಸ್ಪತ್ರೆಗಳಿಗೆ ಫೇಸ್ ಶೀಲ್ಡ್ ಹಾಗೂ ಏರೋಸಾಲ್ ಕ್ಯಾನ್‌ಗಳನ್ನು ಪೂರೈಸುತ್ತಿದೆ. ಮಹೀಂದ್ರಾ ಕಂಪನಿಯು ವಿನ್ಯಾಸಗೊಳಿಸಿರುವ ವೈದ್ಯಕೀಯ ಸಾಧನಗಳನ್ನು ಲಕ್ಷಾಂತರ ಕರೋನಾ ರೋಗಿಗಳು ಬಳಸುತ್ತಿದ್ದಾರೆ.

ಮೂರೇ ತಿಂಗಳಲ್ಲಿ ಭಾರೀ ಪ್ರಮಾಣದ ಫೇಸ್ ಮಾಸ್ಕ್ ವಿತರಿಸಿದ ಮಹೀಂದ್ರಾ

ಇದುವರೆಗೆ 16 ಲಕ್ಷಕ್ಕೂ ಹೆಚ್ಚಿನ ಫೇಸ್‌ಶೀಲ್ಡ್ ಹಾಗೂ ಫೇಸ್ ಮಾಸ್ಕ್ ಗಳನ್ನು ತಯಾರಿಸಿ ವಿತರಿಸಿರುವುದಾಗಿ ಮಹೀಂದ್ರಾ ಹೇಳಿದೆ. ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೈ ಜೋಡಿಸಿರುವ ತನ್ನ ಉದ್ಯೋಗಿಗಳಿಗೆ ಕಂಪನಿಯು ಕೃತಜ್ಞತೆ ಸಲ್ಲಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮೂರೇ ತಿಂಗಳಲ್ಲಿ ಭಾರೀ ಪ್ರಮಾಣದ ಫೇಸ್ ಮಾಸ್ಕ್ ವಿತರಿಸಿದ ಮಹೀಂದ್ರಾ

ಇದುವರೆಗೂ 60ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ 4 ಲಕ್ಷ ಫೇಸ್ ಶೀಲ್ಡ್, 12 ಲಕ್ಷ ಫೇಸ್ ಮಾಸ್ಕ್ ಹಾಗೂ 600 ಏರೋಸಾಲ್ ಕ್ಯಾನ್ ಗಳನ್ನು ಪೂರೈಸಲಾಗಿದೆ ಎಂದು ಕಂಪನಿ ತನ್ನ ವರದಿಯಲ್ಲಿ ತಿಳಿಸಿದೆ. ಇದರ ಜೊತೆಗೆ ಕಂಪನಿಯು ಕಳೆದ 3 ತಿಂಗಳಲ್ಲಿ 2.5 ಲಕ್ಷ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದೆ.

ಮೂರೇ ತಿಂಗಳಲ್ಲಿ ಭಾರೀ ಪ್ರಮಾಣದ ಫೇಸ್ ಮಾಸ್ಕ್ ವಿತರಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಬೆಂಗಳೂರು ಮೂಲದ ಹೆಲ್ತ್ ಕೇರ್ ಕಂಪನಿಯ ಸಹಯೋಗದಲ್ಲಿ ಅಂಬುಬ್ಯಾಗ್ಸ್ ವೆಂಟಿಲೇಟರ್‌ಗಳನ್ನು ತಯಾರಿಸುತ್ತಿದೆ. ಈ ವೆಂಟಿಲೇಟರ್ ಗಳು ಕಡಿಮೆ ಬೆಲೆಯನ್ನು ಹೊಂದಿವೆ ಎಂದು ಕಂಪನಿ ಹೇಳಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮೂರೇ ತಿಂಗಳಲ್ಲಿ ಭಾರೀ ಪ್ರಮಾಣದ ಫೇಸ್ ಮಾಸ್ಕ್ ವಿತರಿಸಿದ ಮಹೀಂದ್ರಾ

ಈ ಸಾಧನಗಳನ್ನು ತಯಾರಿಸಲು ಮಹೀಂದ್ರಾ ಕಂಪನಿಯ ವಿವಿಧ ಉತ್ಪಾದನಾ ಘಟಕಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈ, ನಾಸಿಕ್, ಚಕನ್, ಮಧ್ಯಪ್ರದೇಶದ ಪಿತಾಂಪುರ್ ಹಾಗೂ ತೆಲಂಗಾಣದ ಜಹೀರಾಬಾದ್ ಉತ್ಪಾದನಾ ಘಟಕಗಳಲ್ಲಿ ಈ ಸಾಧನಗಳನ್ನು ಉತ್ಪಾದಿಸಲಾಗುತ್ತಿದೆ.

ಮೂರೇ ತಿಂಗಳಲ್ಲಿ ಭಾರೀ ಪ್ರಮಾಣದ ಫೇಸ್ ಮಾಸ್ಕ್ ವಿತರಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ ಸುಪ್ರೊ ಬಿಎಸ್ 6 ಆಂಬ್ಯುಲೆನ್ಸ್ ಅನ್ನು ಬಿಡುಗಡೆಗೊಳಿಸಿತ್ತು. ಈ ಆಂಬುಲೆನ್ಸ್‌ಗಳ 80 ಯುನಿಟ್ ಗಳನ್ನು ಮಹಾರಾಷ್ಟ್ರ ಸರ್ಕಾರಕ್ಕೆ ವಿತರಿಸಲಾಗಿದೆ. ಚಿಕ್ಕ ಗಾತ್ರವನ್ನು ಹೊಂದಿರುವ ಸುಪ್ರೊ ಆಂಬ್ಯುಲೆನ್ಸ್‌ಗಳು ಹಲವಾರು ಫೀಚರ್ ಗಳನ್ನು ಹೊಂದಿವೆ.

Most Read Articles

Kannada
English summary
More than 16 lakh face shield and face mask distributed by Mahindra in three months. Read in Kannada.
Story first published: Wednesday, July 1, 2020, 19:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X