ಸಾವಿರ ರೂಪಾಯಿಯೊಳಗೆ ದೊರೆಯುವ ಕಾರು ಬಿಡಿಭಾಗಗಳಿವು

ಜನರು ತಮ್ಮ ಕಾರುಗಳನ್ನು ಮಾಡಿಫೈಗೊಳಿಸಲು ಬಯಸುತ್ತರಾದರೂ ದುಬಾರಿ ಬೆಲೆಯ ಕಾರಣದಿಂದಾಗಿ ಹಿಂದೆ ಸರಿಯುತ್ತಾರೆ. ಕೆಲವು ಆಕ್ಸೆಸರೀಸ್ ಗಳನ್ನು ಬಳಸಿಕೊಂಡು ಕಾರುಗಳಿಗೆ ಆಕರ್ಷಕ ಲುಕ್ ನೀಡಬಹುದು. ಆ ಆಕ್ಸೆಸರೀಸ್ ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸಾವಿರ ರೂಪಾಯಿಯೊಳಗೆ ದೊರೆಯುವ ಕಾರು ಬಿಡಿಭಾಗಗಳಿವು

1. ಎಲ್ಇಡಿ ಆಂಬಿಯೆಂಟ್ ಲೈಟ್ಸ್

ಕಾರು ತಯಾರಕ ಕಂಪನಿಗಳು ಪ್ರತಿಯೊಂದು ಸೆಗ್ ಮೆಂಟಿನಲ್ಲಿರುವ ಕಾರುಗಳಲ್ಲಿಯೂ ಆಂಬಿಯೆಂಟ್ ಲೈಟ್ ಗಳನ್ನು ಬಳಸುತ್ತಿವೆ. ಆದರೆ ಈ ಫೀಚರ್ ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಕಂಡುಬರುತ್ತದೆ. ಟಾಪ್ ಎಂಡ್ ಕಾರುಗಳನ್ನು ಹೊಂದಿಲ್ಲದಿರುವವರು ಆಫ್ಟರ್ ಮಾರ್ಕೆಟ್ ನಲ್ಲಿ ಆಂಬಿಯೆಂಟ್ ಲೈಟ್ ಗಳನ್ನು ಅಳವಡಿಸಿಕೊಳ್ಳಬಹುದು.

ಸಾವಿರ ರೂಪಾಯಿಯೊಳಗೆ ದೊರೆಯುವ ಕಾರು ಬಿಡಿಭಾಗಗಳಿವು

2. ಬೂಟ್ ಆರ್ಗನೈಜರ್

ಕೆಲವು ಬಾರಿ ಸಣ್ಣ ವಸ್ತುಗಳನ್ನಿಡಲು ಕಾರಿನಲ್ಲಿ ಸ್ಥಳವಿರುವುದಿಲ್ಲ. ಇದಕ್ಕಾಗಿ ಬೂಟ್ ಆರ್ಗನೈಜರ್ ಬಳಸಬಹುದು. ಬೂಟ್ ಆರ್ಗನೈಜರ್ ಅನ್ನು ಹಿಂಬದಿಯ ಸೀಟಿನ ಹಿಂದೆ ಇಡಲಾಗುತ್ತದೆ. ಇದರಿಂದ ಸಣ್ಣ ವಸ್ತುಗಳನ್ನು ಸುಲಭವಾಗಿ ಇಟ್ಟುಕೊಳ್ಳಬಹುದು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸಾವಿರ ರೂಪಾಯಿಯೊಳಗೆ ದೊರೆಯುವ ಕಾರು ಬಿಡಿಭಾಗಗಳಿವು

3. ವ್ಯಾಕ್ಯೂಮ್ ಕ್ಲೀನರ್

ಕಾರುಗಳನ್ನು ಎಷ್ಟೇ ಮುತುವರ್ಜಿಯಿಂದ ಸ್ವಚ್ವಗೊಳಿಸಿದರೂ ಎಲ್ಲಾ ಭಾಗಗಳನ್ನು ಸ್ವಚ್ವಗೊಳಿಸಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಪೋರ್ಟಬಲ್ ವ್ಯಾಕ್ಯೂಮ್ ಕ್ಲೀನರ್ ಗಳನ್ನು ಬಳಸಬಹುದು.

ಸಾವಿರ ರೂಪಾಯಿಯೊಳಗೆ ದೊರೆಯುವ ಕಾರು ಬಿಡಿಭಾಗಗಳಿವು

4. ಹ್ಯುಮಿಡಿಫೈಯರ್ ಹಾಗೂ ರಿಫ್ರೆಶರ್

ಅನೇಕ ದಿನಗಳವರೆಗೆ ಕಾರಿನ ಕ್ಯಾಬಿನ್ ಮುಚ್ಚಲ್ಪಟ್ಟಾಗ, ಅದರಲ್ಲಿ ಒಂದು ರೀತಿಯ ದುರ್ವಾಸನೆ ಆರಂಭವಾಗುತ್ತದೆ. ಈ ದುರ್ವಾಸನೆಯನ್ನು ತೊಡೆದುಹಾಕಲು ಹ್ಯುಮಿಡಿಫೈಯರ್ ಹಾಗೂ ರಿಫ್ರೆಶರ್ ಗಳನ್ನು ಬಳಸಬಹುದು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸಾವಿರ ರೂಪಾಯಿಯೊಳಗೆ ದೊರೆಯುವ ಕಾರು ಬಿಡಿಭಾಗಗಳಿವು

5. ಎಲೆಕ್ಟ್ರಿಕ್ ಕಾಫಿ ಮಗ್

ದೂರದ ಪ್ರಯಾಣದಲ್ಲಿ ಕೆಲವೊಮ್ಮೆ ಚಾಲಕನು ಸುಸ್ತಾಗಿ ಮಲಗಲು ಬಯಸಬಹುದು. ಒಂದು ವೇಳೆ ಚಾಲಕನು ನಿದ್ರಿಸಿದರೆ, ಕಾರಿನಲ್ಲಿರುವ ಎಲ್ಲರಿಗೂ ಅಪಾಯ ಸಂಭವಿಸುತ್ತದೆ. ಇಂತಹ ಸಂದರ್ಭಗಳಲ್ಲಿ ರಿಫ್ರೆಶ್ ಮಾಡಿಕೊಳ್ಳಲು ಕಾರುಗಳಲ್ಲಿ ಎಲೆಕ್ಟ್ರಿಕ್ ಕಾಫಿ ಮಗ್ ಗಳನ್ನು ಹೊಂದಿರುವುದು ಉತ್ತಮ.

ಸಾವಿರ ರೂಪಾಯಿಯೊಳಗೆ ದೊರೆಯುವ ಕಾರು ಬಿಡಿಭಾಗಗಳಿವು

6. ಕಾರ್ ಸೀಟ್ ಆರ್ಗನೈಜರ್

ಯಾರಾದರೂ ಕಾರಿನಲ್ಲಿ ಸುದೀರ್ಘ ಪ್ರಯಾಣಕ್ಕೆ ಹೊರಟರೆ ತಮ್ಮೊಂದಿಗೆ ಹೆಚ್ಚು ಮುಖ್ಯವಾದ ವಸ್ತುಗಳನ್ನು ಒಯ್ಯುವುದು ಸಹಜ. ಈ ಸಂದರ್ಭದಲ್ಲಿ ಲಗೇಜ್ ಗಳನ್ನು ಜೋಡಿಸಲು ತೊಂದರೆಯಾಗಬಹುದು. ಕಾರಿನಲ್ಲಿ ಸೀಟ್ ಆರ್ಗನೈಜರ್ ಹೊಂದಿದ್ದರೆ ಲಗೇಜ್ ಗಳನ್ನು ಸುಲಭವಾಗಿ ಜೋಡಿಸಬಹುದು.

Most Read Articles

Kannada
English summary
Most useful car accessories below 1000 rupees. Read in Kannada.
Story first published: Friday, July 3, 2020, 18:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X