ಕರೋನಾ ವೈರಸ್ ಎಫೆಕ್ಟ್: 2020ರ ಮೋಟಾರ್‌ಸೈಕಲ್ ಲೈವ್ ಶೋ ರದ್ದು
ಈ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಬೇಕಿದ್ದ 2020ರ ಮೋಟಾರ್‌ಸೈಕಲ್ ಲೈವ್ ಶೋವನ್ನು ಕರೋನಾ ವೈರಸ್ ಕಾರಣದಿಂದಾಗಿ ರದ್ದುಪಡಿಸಲಾಗಿದೆ. ಆಯೋಜಕರು ಈ ಶೋವನ್ನು ಮುಂದಿನ ವರ್ಷದ ನವೆಂಬರ್‌ಗೆ ಮುಂದೂಡಿದ್ದಾರೆ.

ಈ ಮೋಟಾರ್‌ಸೈಕಲ್ ಲೈವ್ ಶೋವನ್ನು ಯುರೋಪಿನಲ್ಲಿ ಮೊದಲ ಬಾರಿಗೆ 1981ರಲ್ಲಿ ಆಯೋಜಿಸಲಾಗಿತ್ತು. ಆ ನಂತರ ಇದನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ. ಮೋಟಾರ್‌ಸೈಕಲ್ ಲೈವ್ ಶೋ ಈ ವರ್ಷದ ನವೆಂಬರ್ 21ರಿಂದ 29ರವರೆಗೆ ನಡೆಯಬೇಕಿತ್ತು. ಈಗ ಈ ಮೋಟಾರ್‌ಸೈಕಲ್ ಲೈವ್ ಶೋವನ್ನು ಮುಂದೂಡಲಾಗಿದ್ದು, ಮುಂದಿನ ವರ್ಷದ ನವೆಂಬರ್ 20ರಿಂದ 28ರವರೆಗೆ ನಡೆಯಲಿದೆ.

ಕರೋನಾ ವೈರಸ್ ಆಟೋಮೊಬೈಲ್ ಉದ್ಯಮದ ಮೇಲೆ ಹೆಚ್ಚು ಪರಿಣಾಮವನ್ನು ಬೀರಿದೆ. ಈ ವರ್ಷ ನಡೆಯಬೇಕಿದ್ದ ಆಟೋ ಎಕ್ಸ್‌ಪೋಗಳನ್ನು ಕರೋನಾ ವೈರಸ್ ಕಾರಣದಿಂದಾಗಿ ರದ್ದುಪಡಿಸಲಾಗಿದೆ. ಜಿನೀವಾ ಆಟೋ ಶೋ ರದ್ದಾದ ನಂತರ, ನ್ಯೂಯಾರ್ಕ್‌ನಲ್ಲಿ ನಡೆಯಬೇಕಿದ್ದ ಅಂತರರಾಷ್ಟ್ರೀಯ ಆಟೋ ಎಕ್ಸ್‌ಪೋವನ್ನು ಮುಂದೂಡಲಾಗಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ನ್ಯೂಯಾರ್ಕ್ ಆಟೋ ಶೋ ಏಪ್ರಿಲ್ ತಿಂಗಳಿನಲ್ಲಿ ನಡೆಯಬೇಕಿತ್ತು. ಮುಂದೂಡಿಕೆಯ ನಂತರ ನ್ಯೂಯಾರ್ಕ್ ಮೋಟಾರ್ ಶೋ ಆಗಸ್ಟ್ 28ರಿಂದ ಸೆಪ್ಟೆಂಬರ್ 6ರವರೆಗೆ ನಡೆಯಲಿದೆ. ಆಗಸ್ಟ್ 26 ಮತ್ತು 27ರಂದು ಆಟೋ ಪ್ರದರ್ಶನವನ್ನು ಮಾಧ್ಯಮದವರಿಗೆ ತೆರೆಯಲಾಗುವುದು. ನ್ಯೂಯಾರ್ಕ್‌ನ ಜಾವಿಟ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಆಟೋ ಎಕ್ಸ್‌ಪೋ ನಡೆಯಲಿದೆ.

ಈ ಆಟೋ ಎಕ್ಸ್‌ಪೋದಿಂದ ನ್ಯೂಯಾರ್ಕ್ ನಗರವು 330 ಮಿಲಿಯನ್ ಡಾಲರ್ ಲಾಭ ಪಡೆಯಲಿದ್ದು, ಈ ಆದಾಯದಿಂದ ಆ ರಾಜ್ಯದ ಆರ್ಥಿಕತೆಯು ಹೆಚ್ಚಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿರುವ ನ್ಯೂಯಾರ್ಕ್ ಆಟೋ ಶೋ ಸಂಘಟಕ ಮಾರ್ಕ್ ಶಿನ್‌ಬರ್ಗ್‌ರವರು ಈ ಆಟೋ ಎಕ್ಸ್‌ಪೋ 120 ವರ್ಷಗಳಿಂದ ನಡೆಯುತ್ತಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಆಟೋ ಎಕ್ಸ್‌ಪೋ ದಿನಾಂಕವನ್ನು ಮುಂದೂಡುವುದು ನಮಗೆ ಕಷ್ಟವಾಗಿದ್ದರೂ ಪ್ರೇಕ್ಷಕರು ಹಾಗೂ ಪ್ರದರ್ಶಕರ ಸುರಕ್ಷತೆಯ ದೃಷ್ಟಿಯಿಂದ ಮುಂದೂಡಲಾಗಿದೆ ಎಂದು ಹೇಳಿದ್ದಾರೆ. ಕರೋನಾ ವೈರಸ್‌ನಿಂದಾಗಿ ಚೀನಾದಲ್ಲಿ ನಡೆಯಬೇಕಿದ್ದ ಎಫ್ 1 ರೇಸ್, ಕತಾರ್‌ನಲ್ಲಿ ನಡೆಯಬೇಕಿದ್ದ ಮೋಟೋ ಜಿಪಿ ಬೈಕ್ ರೇಸ್‌ಗಳನ್ನು ಮುಂದೂಡಲಾಗಿದೆ.

ಯುರೋಪಿನ ಅನೇಕ ದೇಶಗಳಲ್ಲಿ 1000ಕ್ಕೂ ಹೆಚ್ಚು ಜನರು ಒಟ್ಟಿಗೆ ಸೇರುವುದನ್ನು ನಿಷೇಧಿಸಲಾಗಿದೆ. ಕರೋನಾ ವೈರಸ್‌ನಿಂದ ಅಮೆರಿಕಾ ಹೆಚ್ಚು ತತ್ತರಿಸಿದೆ. ಅಂಕಿಅಂಶಗಳ ಪ್ರಕಾರ, ಕರೋನಾ ವೈರಸ್‌ನಿಂದ ಅಮೆರಿಕಾದಲ್ಲಿ ಇದುವರೆಗೂ 50 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.


Click it and Unblock the Notifications