ಲಾಕ್‌ಡೌನ್ ಸಡಿಲಿಕೆ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಿದ ಟ್ರಾಫಿಕ್ ದಟ್ಟಣೆ
ದೇಶಾದ್ಯಂತ ಪರಿಸ್ಥಿತಿಗೆ ಅನುಗುಣವಾಗಿ ಲಾಕ್‌ಡೌನ್ ಅನ್ನು ಸಡಿಲಿಕೆ ಮಾಡಲಾಗಿದ್ದು, ಹಸಿರು ಮತ್ತು ಕಿತ್ತಳೆ ವಲಯದಲ್ಲಿನ ವಾಣಿಜ್ಯ ಚಟುವಟಿಕೆಗೆ ಷರತ್ತುಬದ್ಧ ಅವಕಾಶ ನೀಡಲಾಗಿದೆ. ಈ ಹಿನ್ನಲೆ ವಾಹನ ದಟ್ಟಣೆ ಕೂಡಾ ಹೆಚ್ಚುತ್ತಿದ್ದು, ಲಾಕ್‌ಡೌನ್ ಸಡಿಲವಾದ ಮೊದಲ ವಾರದಲ್ಲಿ ವಾಹನಗಳ ಓಡಾಟದಲ್ಲಿ ಭಾರೀ ಏರಿಕೆಯಾಗಿದೆ.

ಲಾಕ್‌ಡೌನ್ ಸಡಿಲಿಕೆಯಿಂದ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹೆದ್ದಾರಿಗಳಲ್ಲೂ ಕೂಡಾ ಟ್ರಾಫಿಕ್ ದಟ್ಟಣೆ ಹೆಚ್ಚಿದ್ದು, ಮೂರನೇ ಹಂತದ ಲಾಕ್‌ಡೌನ್ ನಡುವೆಯೂ ಶೇ.35ರಷ್ಟು ವಾಹನಗಳು ರಸ್ತೆಗಿಳಿದಿವೆ. ಕಳೆದ ಎರಡು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರಿಕ್ಷೆಗೂ ಮೀರಿ ವಾಹನಗಳ ಓಡಾಟ ಹೆಚ್ಚಾಗಿದ್ದು, ಅಗತ್ಯಕ್ಕಿಂತ ಹೆಚ್ಚಾಗಿ ಅನಗತ್ಯವಾಗಿ ಓಡಾಡುವ ವಾಹನಗಳ ಸಂಖ್ಯೆಯೇ ಹೆಚ್ಚಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.

ಮತ್ತೊಂದು ಅಪಾಯಕಾರಿ ಅಂಶ ಅಂದ್ರೆ, ಅಪಾಯದ ಸೂಚನೆಯ ನಡುವೆಯೂ ವಾಹನ ಓಡಾಟ ಸಂಖ್ಯೆಯಲ್ಲಿ ದಿನದಿಂದ ದ್ವಿಗುಣಗೊಳ್ಳುತ್ತಿದ್ದು, ಸುರಕ್ಷಾ ಕ್ರಮಗಳನ್ನು ಪಾಲನೆ ಮಾಡುವ ವಾಹನ ಸವಾರರ ಸಂಖ್ಯೆಯೂ ಕಡಿಮೆಯಿದೆ.

ಮಾಸ್ಕ್ ಹೊರತುಪಡಿಸಿ ಇನ್ನುಳಿದ ಯಾವುದೇ ಸುರಕ್ಷಾ ಕ್ರಮಗಳನ್ನು ಪಾಲನೆ ಮಾಡದಿರುವುದು ಅಪಾಯಕ್ಕೆ ಆಹ್ವಾನ ಮಾಡುತ್ತಿದ್ದು, ರೆಡ್ ಝೋನ್ ವಲಯಗಳಿಂದಲೂ ಹೆಚ್ಚಿನ ಮಟ್ಟದ ವಾಹನಗಳು ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಹೆದ್ದಾರಿಯಲ್ಲಿ ಸಂಚರಿಸುವ ಬಹುತೇಕ ವಾಹನಗಳು ಅಂತರ್‌ರಾಜ್ಯಗಳಿಗೆ ಅಥವಾ ವಿವಿಧ ಜಿಲ್ಲೆಗಳ ನಡುವೆ ಸಂಚರಿಸುವ ವಾಹನಗಳಾಗಿರುವುದು ಸಾಮಾನ್ಯ. ಹೀಗಿರುವಾಗ ನಿಯಂತ್ರಣದಲ್ಲಿರುವ ವೈರಸ್ ಪ್ರಮಾಣವ ಮುಂದಿನ ಕೆಲವೇ ದಿನಗಳಲ್ಲಿ ದುಪ್ಪಟ್ಟುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸದ್ಯ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ಸಂಖ್ಯೆ ಹೊಂದಿರುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿ ಭಾರತದಲ್ಲಿ ಅಷ್ಟಾಗಿ ಪರಿಣಾಮ ಬೀರಿಲ್ಲ ಎನ್ನಬಹುದು. ಆದ್ರೆ ಲಾಕ್‌ಡೌನ್ ನಿಯಮಗಳನ್ನು ಹೆಚ್ಚೆಚ್ಚು ಉಲ್ಲಂಘನೆ ಮಾಡಿದಷ್ಟು ವೈರಸ್ ಪ್ರಮಾಣವು ಯಾವುದೇ ನಿಯಂತ್ರಣಕ್ಕೆ ಸಿಗದಂತೆ ಹೆಚ್ಚುವುದರಲ್ಲಿ ಎರಡು ಮಾತಿಲ್ಲ.

ಹೀಗಾಗಿ ಅವಶ್ಯವಿದ್ದಲ್ಲಿ ಮಾತ್ರವೇ ಪ್ರಯಾಣ ಮಾಡುವುದು ಒಳಿತು. ಇಲ್ಲವಾದಲ್ಲಿ ಸೋಂಕಿರ ಪ್ರಮಾಣವು ಲೆಕ್ಕಕ್ಕೆ ಸಿಗದಂತಾಗುತ್ತದೆ. ಸೋಂಕು ಹೆಚ್ಚಳವಾದದಲ್ಲಿ ಮತ್ತಷ್ಟು ಕಠಿಣವಾದ ಲಾಕ್‌ಡೌನ್ ಅನಿವಾರ್ಯವಾಗಬುಹುದು.

ಇನ್ನು ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಾಹಾಮಾರಿ ವೈರಸ್ ಇದುವರೆಗೆ ಸುಮಾರು 38 ಲಕ್ಷ ಜನರಲ್ಲಿ ಕಾಣಿಸಿಕೊಂಡಿದ್ದು, 2.65 ಲಕ್ಷ ಜನರನ್ನು ಬಲಿಪಡೆದಿದೆ. ಸೋಂಕು ಪಿಡಿತರಲ್ಲಿ ಸುಮಾರು 13 ಲಕ್ಷ ಜನ ಗುಣಮುಖರಾಗಿದ್ದು, ಶೇ.2ರಷ್ಟು ಸೋಂಕು ಪಿಡಿತರ ಸ್ಥಿತಿ ಗಂಭೀರ ಪರಿಸ್ಥಿತಿಯಲ್ಲಿದೆ. ಇದಕ್ಕಾಗಿ ಸೂಕ್ತ ಔಷಧಿಯಿಲ್ಲದ ರೋಗವನ್ನು ತಡೆಯಲು ಸದ್ಯಕ್ಕೆ ಸಾಮಾಜಿಕ ಅಂತರ, ಸುರಕ್ಷಾ ಸಾಧನಗಳ ಬಳಕೆಯೊಂದೆ ಮದ್ದು ಎನ್ನಬಹುದು.


Click it and Unblock the Notifications