ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಫೋರ್ಡ್ ರೇಂಜರ್

ಅಮೆರಿಕ ಮೂಲದ ಪೋರ್ಡ್ ಕಂಪನಿಯ ರೇಂಜರ್ ಪಿಕಪ್ ಟ್ರಕ್ ಮಾದರಿಯು ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಫೋರ್ಡ್ ಕಂಪನಿಯ ಈ ಜನಪ್ರಿಯ ರೇಂಜರ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಫೋರ್ಡ್ ರೇಂಜರ್

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಲೈಫ್‌ಸ್ಟೈಲ್ ವಾಹನಗಳು ಉತ್ತಮ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಇಸುಝು ಕಂಪನಿಯ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕಪ್ ಟ್ರಕ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಮಹೀಂದ್ರಾ ಥಾರ್ ಕೂಡ ಲೈಫ್‌ಸ್ಟೈಲ್ ಮಾದರಿಯಲ್ಲಿಯು ಲಭ್ಯವಿರಲಿದೆ. ರೇಂಜರ್ ಪಿಕಪ್ ಟ್ರಕ್ ಎವರೆಸ್ಟ್ ಎಸ್‍ಯುವಿಯೊಂದಿಗೆ ಚಾಸಿಸ್ ಅನ್ನು ಹಂಚಿಕೊಳ್ಳುತ್ತದೆ, ಈ ಫೋರ್ಡ್ ರೇಂಜರ್ ಮಾದರಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ.

ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಫೋರ್ಡ್ ರೇಂಜರ್

ಫಾರ್ಚೂನರ್ ಎಸ್‍ಯುವಿಯೊಂದಿಗೆ ತನ್ನ ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಳ್ಳುವ ಹಿಲಕ್ಸ್ ಪಿಕಪ್ ಟ್ರಕ್ ಅನ್ನು ಬಿಡುಗಡೆ ಮಾಡಲು ಟೊಯೊಟಾ ಕಂಪನಿಯು ಮುಂದಾಗಿದೆ ಎಂದು ಇತ್ತೀಚೆಗೆ ವರದಿಗಳು ಪ್ರಕಟವಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಫೋರ್ಡ್ ರೇಂಜರ್

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಸರಣಿಯಲ್ಲಿರುವ ‘ಲೈಫ್‌ಸ್ಟೈಲ್ ವಾಹನಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಇನ್ನು ನವೀಕರಿಸಲಾಗುತ್ತಿದೆ.

ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಫೋರ್ಡ್ ರೇಂಜರ್

ಇನ್ನು ಫೋರ್ಡ್ ಕಂಪನಿಯು ರೇಂಜರ್ ಮಾದರಿಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಅಲ್ಲದೇ ಈ ರೇಂಜರ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲಾಗಿಲ್ಲ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಫೋರ್ಡ್ ರೇಂಜರ್

ಭಾರತದಲ್ಲಿ ಈ ರೇಂಜರ್ ಮಾದರಿಯನ್ನು ಬಿಡುಗಡೆಗೊಳಿಸಿದರೆ ಎಂಡೀವರ್ ಎಸ್‍ಯುವಿಯಲ್ಲಿರುವ 2.0-ಲೀಟರ್ ಟರ್ಬೊ-ಡೀಸೆಲ್ ಎಂಜಿನ್‌ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಫೋರ್ಡ್ ರೇಂಜರ್

ಈ ಎಂಜಿನ್ 168-ಬಿಎಚ್‌ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ನೊಂದಿಗೆ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗಿದೆ. ಇದರೊಂದಿಗೆ ಫೋರ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಒಳಗೊಂಡಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಫೋರ್ಡ್ ರೇಂಜರ್

ಫೋರ್ಡ್ ರೇಂಜರ್ ಮಾದರಿಯನ್ನು ಆಫ್-ರೋಡ್ ಪ್ರಿಯರನ್ನು ಗುರಿಯಾಗಿಸಿ ಬಿಡುಗಡೆಗೊಳಿಸಬಹುದು. ಆದ್ದರಿಂದ ಟಾರ್ಕ್ ಬಗ್ಗೆ ಹೆಚ್ಚಿನ ಗಮನಹರಿಸಬಹುದು. ಫೋರ್-ವ್ಹೀಲ್-ಡ್ರೈವ್ ಸಿಸ್ಟಂನೊದಿಗೆ ಟೆರೈನ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಟಿಎಂಎಸ್), ಲಾಕಿಂಗ್ ಡಿಫರೆನ್ಷಿಯಲ್ಸ್, ಹಿಲ್- ಕ್ಲೈಂಬ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ರೋಲ್‌ಓವರ್ ಮೆಟಿಗೇಷನ್ ಫೀಚರ್ ಗಳನ್ನು ಹೊಂದಿರಲಿದೆ.

ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಫೋರ್ಡ್ ರೇಂಜರ್

ಫೋರ್ಡ್ ರೇಂಜರ್ ಮಾದರಿಯಲ್ಲಿ ಎರಡು-ಸಾಲಿನ ಸೀಟಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಹೊಸ ರೇಂಜರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಇನ್ನು ಫೋರ್ಡ್ ಕಂಪನಿಯು ಖಚಿತಪಡಿಸಲಾಗಿಲ್ಲ. ಪೋರ್ಡ್ ರೇಂಜರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಇಸುಝು ಡಿ ಮ್ಯಾಕ್ಸ್ ವಿ-ಕ್ರಾಸ್‌ ಪಿಕಪ್ ಟ್ರಕ್ ಮಾದರಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, November 24, 2020, 19:46 [IST]
English summary
Ford Ranger Pickup Truck Spotted In India Details. Read In Kannada.
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+