Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತಕ್ಕೆ ಲಗ್ಗೆಯಿಡಲಿದೆ ಫೋರ್ಡ್ ರೇಂಜರ್ ರಾಪ್ಟರ್ ಪರ್ಫಾಮೆನ್ಸ್ ಪಿಕ್ ಅಪ್
ಫೋರ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪರ್ಫಾಮೆನ್ಸ್ ಆಧಾರಿತ ರೇಂಜರ್ ರಾಪ್ಟರ್ ಪಿಕ್ ಅಪ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಕೆಲವು ವರದಿಗಳ ಪ್ರಕಾರ, ಈ ಹೊಸ ಫೋರ್ಡ್ ರೇಂಜರ್ ರಾಪ್ಟರ್ ಪಿಕ್ ಅಪ್ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಬಿಡುಗೆಯಾಗಲಿದೆ.

ಫೋರ್ಡ್ ಕಂಪನಿಯು ರೇಂಜರ್ ರಾಪ್ಟರ್ ಮಾದರಿಯನ್ನು ಭಾರತಕ್ಕೆ ಸರ್ಕಾರದ ನಿಯಮದಡಿಯಲ್ಲಿ ಸಿಬಿಯು (ಕಂಪ್ಲೀಟ್ ಬಿಲ್ಟ್ ಅಪ್)ಯುನಿಟ್ ಆಗಿ ಆಮದು ಮಾಡಿಕೊಳ್ಳಲಾಗುವುದು, ವಾರ್ಷಿಕವಾಗಿ ಕಾರು ತಯಾರಕ ಕಂಪನಿಗಳು 2,500 ಯುನಿಟ್‌ಗಳನ್ನು ಆಮದು ಮಾಡಿಕೊಳ್ಳಬಹುದು. ಇದರಿಂದ ಫೋರ್ಡ್ ಪಿಕ್ ಅಪ್ ಅನ್ನು ಲಿಮಿಟೆಡ್ ಯುನಿಟ್ ಗಳಾಗಿ ಮಾರಾಟಗೊಳಿಸಬಹುದು ಎಂದು ವರದಿಗಳಾಗಿದೆ.

ಫೋರ್ಡ್ ರೇಂಜರ್ ರಾಪ್ಟರ್ ಪಿಕ್ ಅಪ್ ಟ್ರಕ್ ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಈ ಹೊಸ ಫೋರ್ಡ್ ರೇಂಜರ್ ರಾಪ್ಟರ್ ಪಿಕ್ ಅಪ್ ನಲ್ಲಿ 2.0 ಎಲ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಈ ಎಂಜಿನ್ 213 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವಂತೆ ಟ್ಯೂನ್ ಮಾಡಲಾಗಿದೆ. ಈ ಎಂಜಿನ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. ಪೋರ್ಡ್ ಸರಣಿಯಲ್ಲಿರುವ ಎಂಡೀವರ್ ಎಸ್‍ಯುವಿ ಕೂಡ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಹೊಂದಿದೆ.

ಫೋರ್ಡ್ ರೇಂಜರ್ ರಾಪ್ಟರ್ ಪರ್ಫಾಮೆನ್ಸ್ ಪಿಕ್ ಅಪ್ 4ಡಬ್ಲ್ಯುಡಿ ಸಿಸ್ಟಂ ಅನ್ನು ಹೊಂದಿದೆ. ಇನ್ನು ಈ ಪಿಕ್ ಅಪ್ ನಲ್ಲಿ ರಾಕ್, ಗ್ರ್ಯಾವೆಲ್, ಗ್ರಾಸ್, ಸ್ನೋ, ಕ್ಲೈಂಬಿಂಗ್ ಮತ್ತು ಬಾಜಾ ಎಂಬ ಆರು ಡ್ರೈವ್ ಮೋಡ್ ಗಳನ್ನು ಹೊಂದಿವೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಫೋರ್ಡ್ ರೇಂಜರ್ ರಾಪ್ಟರ್ ಪಿಕ್ ಅಪ್ 283 ಎಂಎಂ ಎತ್ತರದ ಗ್ರೌಂಡ್ ಕ್ಲಿಯರೆನ್ಸ್, 800 ಎಂಎಂ ವಾಟರ್ ವೇಡಿಂಗ್ ಡೆಪ್ತ್ ಮತ್ತು ದೊಡ್ಡ 285 ಎಂಎಂ ಟೈರ್‌ಗಳೊಂದಿಗೆ ಉತ್ತಮ ಆಫ್-ರೋಡಿಂಗ್ ಸಾ,ಮರ್ಥ್ಯವನ್ನು ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಈ ಪಿಕ್ ಅಪ್ 2.5-ಇಂಚಿನ ಆಫ್-ರೋಡ್ ರೇಸಿಂಗ್ ಕಾಯಿಲ್ ಕವರ್ ಅನ್ನು ಹೊಂದಿದೆ, ಫೋರ್ಡ್ ರೇಂಜರ್ ರಾಪ್ಟರ್ ಒರಟು ಭೂಪ್ರದೇಶಗಳ ಮೇಲೆ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಫೋರ್ಡ್ ರೇಂಜರ್ ರಾಪ್ಟರ್ ಪಿಕ್ ಅಪ್ ಬಾಡಿ ಒರಟಾದ ಸ್ಟೈಲಿಂಗ್ ಅನ್ನು ಹೊಂದಿದೆ. ಈ ಪಿಕ್ ಅಪ್ ಜಾಗತಿಕವಾಗಿ ಜನಪ್ರಿಯವಾದ ರಾಪ್ಟರ್ ಗ್ರಿಲ್ ಅನ್ನು ಐಕಾನಿಕ್ ಬ್ಲಾಕ್ ಎಫ್‌ಒಆರ್ಡಿ ಅಕ್ಷರಗಳೊಂದಿಗೆ ಹೊಸ ಎಲ್ಇಡಿ ಫಾಗ್ ಲ್ಯಾಂಪ್‌ಗಳೊಂದಿಗೆ ಮುಂಭಾಗದ ಬಂಪರ್‌ನಲ್ಲಿ ಏರ್ ಇನ್ ಟೆಕ್ ಅನ್ನು ಹೊಂದಿದೆ.

ಇದರೊಂದಿಗೆ ಡೆಂಟ್ ರೆಸಿಸ್ಟೆನ್ಸ್ ಫ್ರಂಟ್ ಫೆಂಡರ್‌ಗಳು, ಇಂಟಿಗ್ರೇಟೆಡ್ ಟವ್ ಬಾರ್‌ನೊಂದಿಗೆ ಹಿಂಭಾಗದ ಬಂಪರ್ ಮತ್ತು ಎರಡು ರಿಕವರಿ ಹೊಕ್ಕ್ ಮತ್ತು ಫ್ಲಶ್ ಸೆನ್ಸರ್ ಬೆಜೆಲ್‌ಗಳು ಇದರ ಇತರ ವಿನ್ಯಾಸದ ಮುಖ್ಯಾಂಶಗಳಾಗಿದೆ.