ಭಾರತದಲ್ಲಿ ಬಿಡುಗಡೆ ಸಜ್ಜಾದ ಹೊಸ ಹ್ಯುಂಡೈ ಐ20 ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಬಹುನಿರೀಕ್ಷಿತ ಹೊಸ ಐ20 ಕಾರನ್ನು ಅಂತಿಮವಾಗಿ ಜರ್ಮನಿಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹ್ಯುಂಡೈ ಐ20 ಕಾರನ್ನು ಸರಿಸುಮಾರು ರೂ.12.15 ಲಕ್ಷಗಳಿಗೆ ಬಿಡುಗಡೆಗೊಳಿಸಿದೆ.

ಈ ಹೊಸ ತಲೆಮಾರಿನ ಹ್ಯುಂಡೈ ಐ20 ಭಾರತೀಯ ಮಾರಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಿರೀಕ್ಷೆಯಂತೆ ಹ್ಯುಂಡೈ ಐ20 ಕಾರನ್ನು ಜರ್ಮನಿಯಲ್ಲಿ ಮೈಲ್ಡ್-ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ. ಈ ಹ್ಯುಂಡೈ ಐ20 ಹೈಬ್ರಿಡ್ ಆವೃತ್ತಿಯ ಬೆಲೆಯು ರೂ.16 ಲಕ್ಷಗಳಾಗಿದೆ. ಈ ಹೊಸ 1.2-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಜೊತೆಗೆ 1.0-ಲೀಟರ್ ಟರ್ಬೊ ಜಿಡಿ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ 1.2-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ 6,000 ಆರ್‌ಪಿಎಂನಲ್ಲಿ 84 ಬಿಹೆಚ್‍ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 118 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು 1.0-ಲೀಟರ್ ಟರ್ಬೊ ಜಿಡಿ ಎಂಜಿನ್ 6,000 ಆರ್‌ಪಿಎಂನಲ್ಲಿ 100 ಬಿಹೆಚ್‍ಪಿ ಪವರ್ ಮತ್ತು 1,500 ಆರ್‌ಪಿಎಂನಲ್ಲಿ 172 ಎನ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.0-ಲೀಟರ್ 48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 120 ಬಿಹೆಚ್‍ಪಿ ಪವರ್ ಮತ್ತು 2,000 ಆರ್‌ಪಿಎಂನಲ್ಲಿ 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅದರೆ 1.0-ಲೀಟರ್ ಯುನಿಟ್ ಖರೀದಿದಾರರಿಗೆ 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಅಥವಾ 6-ಸ್ಪೀಡ್ ಐಎಮ್‌ಟಿಯ ಆಯ್ಕೆಯನ್ನು ನೀಡಲಾಗುತ್ತದೆ.
| i20 Engine | 1.2L MPi | 1.2L T-Gdi | 1.0L T-GDI 48V | 1.0L T-GDI 48V |
| Type | 4-cylinder MPi | 3-cylinder Gdi | 3-cylinder Gdi | 3-cylinder Gdi |
| Turbocharged | No | Yes | Yes | Yes |
| Hybrid | No | No | Yes, 48V mild-hybrid | Yes, 48 V mild-hybrid |
| Power | 84 PS @ 6,000 rpm | 100 PS @ 6,000 rpm | 100 PS @ 6,000 rpm | 120 PS @ 6,000 rpm |
| Torque | 118 Nm @ 4,000 rpm | 172 Nm @ 1,500 rpm | 172 Nm @ 1,500 rpm | 200 Nm @ 2,000 rpm |
| Transmission | 6MT | 6 MT / 7 DCT | 6 iMT / 7 DCT | 6 iMT / 7 DCT |
| 0-100 kmph | 13.1 S | 10.4 / 11.4 S | 10.4 / 11.4 S | 10.2 / 10.3 S |

ಹೊಸ ಹ್ಯುಂಡೈ ಐ20 ಕಾರು ಭಾರತದಲ್ಲಿ ಈ ವರ್ಷದ ಹಬ್ಬದ ಸೀಸನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ. ಆದರೆ ಹ್ಯುಂಡೈ ಕಂಪನಿಯು ಈ ಕಾರಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಹೊಸ ಹುಂಡೈ ಐ20 ಕಾರಿನ ಬದಿಯ ಪಿಲ್ಲರ್‍ಗಳು ಕಪ್ಪು ಬಣ್ಣವನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಈ ಹೊಸ ಕಾರಿನಲ್ಲಿ ಎರಡು ಟೇಲ್ ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ. ವಿಡಬ್ಲ್ಯೂ ಟೈಗನ್‍ನಲ್ಲಿ ಇರುವಂತಹ ಕೆಂಪು ಇಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಟೇಲ್‍ಲೈಟ್ ಹೊಂದಿದೆ.

ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇದು ಹೊಸ ಹ್ಯುಂಡೈ ಕ್ರೆಟಾ ಕಾರಿನಲ್ಲಿರುವ ಸ್ಟಿಟಿಯರಿಂಗ್ ಮಾದರಿಯಲ್ಲಿದೆ. ಹೊಸ ಹ್ಯುಂಡೈ ಐ20 ಕಾರಿನಲ್ಲಿ ಬೋಸ್ ಸೌಂಡ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಜೊತೆಗೆ ಬ್ಲೂ ಲಿಂಕ್ ಟೆಕ್ನಾಲಜಿಯನ್ನು ಕೂಡ ಹೊಂದಿರಲಿದೆ.
MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಈ ಹೊಸ ಕಾರಿನಲ್ಲಿ 8.0 ಇಂಚಿನ ಡಿಜಿಟಲ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ಇಂಟಿರಿಯರ್‍ನಲ್ಲಿ ಆ್ಯಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹ್ಯುಂಡೈನ ಕನೆಕ್ಟಿವಿಟಿ ಸೂಟ್ ಮತ್ತು ಇತರ ಹಲವಾರು ಫೀಚರ್‍ಗಳನ್ನು ಹೊಂದಿದೆ. ಯುಎಸ್‌ಬಿ ಪೋರ್ಟ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಸಹ ಹೊಂದಿದೆ.

ಇದರೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಇರುವ ಮಾದರಿಯಂತೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಕಿಯಾ ಸೆಲ್ಟೋಸ್‌ನಿಂದ ಎರವಲು ಪಡೆದ 1.5-ಲೀಟರ್ ಡಿಟೂನ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಹೊಸ ಹ್ಯುಂಡೈ ಐ20 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಇದು ಕೂಡ ಒಂದಾಗಿದೆ.


Click it and Unblock the Notifications