ನ್ಯೂ ಜನರೇಷನ್ ಥಾರ್ ಕಾರು ಮಾದರಿಗಾಗಿ ಸ್ಪೋರ್ಟಿ ಮಾಡಿಫೈ ಡಿಸೈನ್ ಸಿದ್ದಪಡಿಸಿದ ಡಿಸಿ ಡಿಸೈನ್

ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಥಾರ್ ಎಸ್‌ಯುವಿ ಕಾರು ಮಾದರಿಯ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರಿಗಾಗಿ ಖ್ಯಾತ ಕಾರ್ ಮಾಡಿಫೈ ಕಂಪನಿಯಾದ ಡಿಸಿ ಡಿಸೈನ್ ಹೊಸ ಡಿಸೈನ್ ಮಾದರಿಯನ್ನು ಸಿದ್ದಪಡಿಸಿದೆ.

ನ್ಯೂ ಜನರೇಷನ್ ಥಾರ್ ಕಾರು ಮಾದರಿಗಾಗಿ ಸ್ಪೋರ್ಟಿ ಮಾಡಿಫೈ ಡಿಸೈನ್ ಸಿದ್ದಪಡಿಸಿದ ಡಿಸಿ ಡಿಸೈನ್

ಭಾರತದಲ್ಲಿ ಈ ಹಿಂದೆ ಬಜೆಟ್ ಬೆಲೆ ಅವಂತಿ ಸ್ಪೋರ್ಟ್ ಕಾರ್ ಬಿಡುಗಡೆಯ ಖ್ಯಾತಿ ಹೊಂದಿರುವ ಡಿಸಿ ಡಿಸೈನ್ ಕಂಪನಿಯು ಸದ್ಯ ಕಾರು ಉತ್ಪಾದನೆ ಮಾಡುತ್ತಿಲ್ಲವಾದರೂ ಪ್ರಮುಖ ಕಾರ್ ಬ್ರಾಂಡ್‌ಗಳಿಗೆ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಮಾಡಿಫೈ ಸೌಲಭ್ಯಗಳನ್ನು ಒದಗಿಸುತ್ತಿದೆ. ಸದ್ಯ ಕಾರುಗಳ ಮಾಡಿಫೈನಲ್ಲಿ ಜನಪ್ರಿಯವಾಗಿರುವ ಡಿಸಿ ಡಿಸೈನ್ ಕಂಪನಿಯು ಬಜೆಟ್ ಬೆಲೆಯ ಕಾರು ಮಾದರಿಗಳಿಂದ ಐಷಾರಾಮಿ ಕಾರು ಮಾದರಿಗಳಿಗೂ ಮಾಡಿಫೈ ವಿನ್ಯಾಸವನ್ನು ಒದಗಿಸುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಹೊಸ ಥಾರ್ ಕಾರು ಮಾದರಿಗಾಗಿ ಸ್ಪೋರ್ಟಿ ಡಿಸೈನ್ ಸಿದ್ದಪಡಿಸಿದೆ.

ನ್ಯೂ ಜನರೇಷನ್ ಥಾರ್ ಕಾರು ಮಾದರಿಗಾಗಿ ಸ್ಪೋರ್ಟಿ ಮಾಡಿಫೈ ಡಿಸೈನ್ ಸಿದ್ದಪಡಿಸಿದ ಡಿಸಿ ಡಿಸೈನ್

ಥಾರ್ ಅಡ್ವೆಂಚರ್ ಕಾರು ಮಾದರಿಗಾಗಿ ಸ್ಪೋರ್ಟಿ ವಿನ್ಯಾಸದ ಚಿತ್ರಗಳನ್ನು ಬಿಡುಗಡೆ ಮಾಡಿರುವ ಡಿಸಿ ಡಿಸೈನ್ ಕಂಪನಿಯು ಅಧಿಕೃತ ಕಾರು ಮಾದರಿಗಿಂತಲೂ ಭಿನ್ನವಾದ ನೋಟ ನೀಡುತ್ತದೆ. ಹೊಸ ಕಾರು ಐಷಾರಾಮಿ ಮಾದರಿಯಲ್ಲೇ ಮಾಡಿಫೈಗೊಂಡಿದ್ದು, ಆಸಕ್ತ ಗ್ರಾಹಕರಿಗೆ ಹೊಸ ಡಿಸೈನ್‌‌ಗಳನ್ನು ಒದಗಿಸಲಿದೆ.

ನ್ಯೂ ಜನರೇಷನ್ ಥಾರ್ ಕಾರು ಮಾದರಿಗಾಗಿ ಸ್ಪೋರ್ಟಿ ಮಾಡಿಫೈ ಡಿಸೈನ್ ಸಿದ್ದಪಡಿಸಿದ ಡಿಸಿ ಡಿಸೈನ್

ಡಿಸಿ ಡಿಸೈನ್ ಕಂಪನಿಯು ಥಾರ್ ಹೊಸ ಕಾರಿನ ಮುಂಭಾಗದ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಿದ್ದು, ಬಲಿಷ್ಠ ವಿನ್ಯಾಸ ನೀಡುವುದಕ್ಕಾಗಿ ಸ್ಲಿಕ್ ಹೆಡ್‌ಲ್ಯಾಂಪ್, ಬಂಪರ್‌ನಲ್ಲೇ ಅಡಕವಾಗಿರುವ ಟೈಲ್‌ಲೈಟ್, ಸ್ಟೋರ್ಟಿ ಅಲಾಯ್ ವಿನ್ಯಾಸದ ಚಕ್ರಗಳು ಕಾರಿನ ಖದರ್ ಹೆಚ್ಚಿಸಿವೆ.

ನ್ಯೂ ಜನರೇಷನ್ ಥಾರ್ ಕಾರು ಮಾದರಿಗಾಗಿ ಸ್ಪೋರ್ಟಿ ಮಾಡಿಫೈ ಡಿಸೈನ್ ಸಿದ್ದಪಡಿಸಿದ ಡಿಸಿ ಡಿಸೈನ್

ಹಾಗೆಯೇ ಹೊಸ ಕಾರಿನ ಒಳಾಂಗಣ ವಿನ್ಯಾಸವನ್ನು ಸಹ ಬದಸಿದ್ದು, ಸ್ಪೋಟಿ ಮಾದರಿಯ ಆಸನ ಸೌಲಭ್ಯ ಮತ್ತು ಸ್ಪೀರಿಂಗ್ ವೀಲ್ಹ್ ಹಾಗೂ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಸ್ಪೋರ್ಟಿ ಅಂಶಗಳನ್ನು ನೀಡಲಾಗಿದೆ. ಈ ಮೂಲಕ ಆಫ್ ರೋಡ್ ಎಸ್‌ಯುವಿ ಪ್ರಿಯರಿಗೆ ವಿಭಿನ್ನ ಚಾಲನಾ ಅನುಭವವನ್ನು ಒದಗಿಸಲಿರುವ ಡಿಸಿ ಡಿಸೈನ್ ಕಂಪನಿಯು ಕಾರಿನ ವಿನ್ಯಾಗಳನ್ನು ಹೊರತುಪಡಿಸಿ ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾಣೆ ಮಾಡಿಲ್ಲ.

ನ್ಯೂ ಜನರೇಷನ್ ಥಾರ್ ಕಾರು ಮಾದರಿಗಾಗಿ ಸ್ಪೋರ್ಟಿ ಮಾಡಿಫೈ ಡಿಸೈನ್ ಸಿದ್ದಪಡಿಸಿದ ಡಿಸಿ ಡಿಸೈನ್

ಇನ್ನು ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ. ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 9.80 ಲಕ್ಷದಿಂದ ಟಾಪ್ ಮಾದರಿಯು ರೂ. 12.95 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನ್ಯೂ ಜನರೇಷನ್ ಥಾರ್ ಕಾರು ಮಾದರಿಗಾಗಿ ಸ್ಪೋರ್ಟಿ ಮಾಡಿಫೈ ಡಿಸೈನ್ ಸಿದ್ದಪಡಿಸಿದ ಡಿಸಿ ಡಿಸೈನ್

ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದ್ದು, ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿವೆ.

ನ್ಯೂ ಜನರೇಷನ್ ಥಾರ್ ಕಾರು ಮಾದರಿಗಾಗಿ ಸ್ಪೋರ್ಟಿ ಮಾಡಿಫೈ ಡಿಸೈನ್ ಸಿದ್ದಪಡಿಸಿದ ಡಿಸಿ ಡಿಸೈನ್

ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ನ್ಯೂ ಜನರೇಷನ್ ಥಾರ್ ಕಾರು ಮಾದರಿಗಾಗಿ ಸ್ಪೋರ್ಟಿ ಮಾಡಿಫೈ ಡಿಸೈನ್ ಸಿದ್ದಪಡಿಸಿದ ಡಿಸಿ ಡಿಸೈನ್

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

More from DriveSpark

Article Published On: Saturday, October 31, 2020, 8:45 [IST]
English summary
DC2 Design Creates Body Kit For 2020 Mahindra Thar. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+