ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ಸೆಡಾನ್ ಕಾರುಗಳ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ವೆಂಟೊ ಕಾರು ಅತ್ಯುತ್ತಮ ಆಯ್ಕೆಗಳ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿರುವ ಅದ್ಭುತವಾದ ವಿನ್ಯಾಸ, ಹೆಚ್ಚು ಎಫಿಶಿಯಂಟ್ ಆಗಿರುವ ಎಂಜಿನ್ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತವೆ.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿಯ ಹಿನ್ನೆಲೆಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ವೆಂಟೊ ಕಾರ್ ಅನ್ನು ಅಪ್‍‍ಗ್ರೇಡ್‍‍ಗೊಳಿಸಿದೆ. ವೆಂಟೊ ಕಾರ್ ಅನ್ನು ಹೊಸ ತಲೆಮಾರಿನ ಮಾದರಿಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ಈ ಕಾರಿನ ಅಧಿಕೃತ ಚಿತ್ರಗಳನ್ನು ಇತ್ತೀಚಿಗೆ ಬಿಡುಗಡೆಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಕಾರ್ ಅನ್ನು ರಷ್ಯಾದಲ್ಲಿ ಅನಾವರಣಗೊಳಿಸಲಾಗಿದೆ. ಈ ಕಾರಿಗೆ ರಷ್ಯಾದಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಸೆಡಾನ್ ಎಂಬ ಹೆಸರಿಡಲಾಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ಈ ಕಾರ್ ಅನ್ನು ಭಾರತದಲ್ಲಿ ವೆಂಟೊ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರ್ ಅನ್ನು ಭಾರತದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಬಿಡುಗಡೆಗೊಳಿಸಲಾಗುವುದು. ರಷ್ಯಾ ಹಾಗೂ ಭಾರತದಲ್ಲಿ ಬೇರೆ ಬೇರೆ ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸಲಾಗುವುದು.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ರಷ್ಯಾದಲ್ಲಿ ಅನಾವರಣಗೊಂಡಿರುವ ಮಾದರಿಯ ವಿನ್ಯಾಸವು ವಿಭಿನ್ನವಾಗಿದೆ. ಈ ಕಾರಿನಲ್ಲಿ ಫೋಕ್ಸ್‌ವ್ಯಾಗನ್ ಜೆಟ್ಟಾದ ಡಿಸೈನ್ ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಗ್ರಾಹಕರನ್ನು ಆಕರ್ಷಿಸಲು ಹಿಂಭಾಗದ ಫೀಚರ್‍‍ಗಳನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ಹೊಸ ಫೋಕ್ಸ್‌ವ್ಯಾಗನ್ ಪೊಲೊ ಸೆಡಾನ್ ಕಾರು ಮಾರುಕಟ್ಟೆಯಲ್ಲಿರುವ ಕಾರಿಗಿಂತ 93 ಎಂಎಂ ಹೆಚ್ಚು ಉದ್ದ ಹಾಗೂ 7 ಎಂಎಂ ಹೆಚ್ಚು ಅಗಲವನ್ನು ಹೊಂದಿದೆ. ಎತ್ತರವನ್ನು ಸಹ 17 ಎಂಎಂನಷ್ಟು ಹೆಚ್ಚಿಸಲಾಗಿದೆ. ಬೂಟ್‍‍ಸ್ಪೇಸ್ ಅನ್ನು 90 ಲೀಟರ್‍‍ನಷ್ಟು ಹೆಚ್ಚಿಸಲಾಗಿದ್ದು, ಈಗ 550 ಲೀಟರ್ ಸಾಮರ್ಥ್ಯವನ್ನು ಹೊಂದಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ಈ ಕಾರಿನಲ್ಲಿ ಎಲ್‍ಇ‍‍ಡಿ ಹೆಡ್‍‍ಲೈಟ್, ಎಲ್‍ಇ‍‍ಡಿ ಡೇ ಟೈಂ ಲೈಟ್, ಬಲಶಾಲಿಯಾದ ಬಂಪರ್ ಸಿಸ್ಟಂ ಹಾಗೂ ಅಗಲವಾದ ಏರ್ ಡ್ಯಾಂನಂತಹ ಹಲವಾರು ಫೀಚರ್‍‍ಗಳಿವೆ. ಮಾರುಕಟ್ಟೆಯಲ್ಲಿರುವ ಹಲವು ಫೀಚರ್‍‍ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ಈ ಕಾರಿನಲ್ಲಿ 16 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಹೊಸ ಫೋಕ್ಸ್‌ವ್ಯಾಗನ್ ವೆಂಟೊ 8.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಸಿಸ್ಟಂ ಅನ್ನು ಆಂಡ್ರಾಯಿಡ್ ಆಟೋ ಹಾಗೂ ಆಪಲ್ ಕಾರ್‍‍ಪ್ಲೇಗಳಿಗೆ ಹೊಂದಿಕೊಳ್ಳುವಂತೆ ಅಭಿವೃದ್ಧಿಪಡಿಸಲಾಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ಇದರ ಜೊತೆಗೆ 10.25 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಈ ಕಾರು ಫ್ಲಾಟ್ ಬಾಟಂ ಸ್ಟೀಯರಿಂಗ್ ವ್ಹೀಲ್, ಪ್ರೀಮಿಯಂ ಫ್ಯಾಬ್ರಿಕ್ ಅಪ್‍‍ಹೊಲೆಸ್ಟರಿ ಹಾಗೂ ಪ್ರೀಮಿಯಂ ಸೀಟ್‍‍ಗಳನ್ನು ಹೊಂದಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ರಷ್ಯಾದಲ್ಲಿ ಅನಾವರಣಗೊಂಡ ಹೊಸ ಫೋಕ್ಸ್‌ವ್ಯಾಗನ್ ವೆಂಟೊ ಕಾರು 1.6 ಲೀಟರಿನ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 89 ಬಿಹೆಚ್‍‍ಪಿ ಪವರ್ ಹಾಗೂ 108 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುವ ಎರಡು ಆಯ್ಕೆಗಳನ್ನು ಹೊಂದಿರಲಿದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್‍‍ನ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ಭಾರತದಲ್ಲಿ ಬಿಡುಗಡೆಯಾಗುವ ಫೋಕ್ಸ್‌ವ್ಯಾಗನ್ ವೆಂಟೊ ಕಾರಿನಲ್ಲಿ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ ಸಿ‍ಎನ್‍‍ಜಿ ಅಳವಡಿಸಲಾಗುವುದು. ಈ ಎಂಜಿನ್ ಅನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಅಪ್‍‍ಡೇಟ್‍‍ಗೊಳಿಸಲಾಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ

ಹೊಸ ಫೋಕ್ಸ್‌ವ್ಯಾಗನ್ ವೆಂಟೊ ಕಾರ್ ಅನ್ನು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.9 ಲಕ್ಷದಿಂದ ರೂ.13 ಲಕ್ಷಗಳಾಗುವ ಸಾಧ್ಯತೆಗಳಿವೆ. ಬಿಡುಗಡೆಯಾದ ನಂತರ ಈ ಕಾರು ಮಾರುತಿ ಸಿಯಾಜ್, ಹೋಂಡಾ ಸಿಟಿ ಹಾಗೂ ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Saturday, February 29, 2020, 17:05 [IST]
English summary
New gen Volkswagen Polo Sedan Vento revealed in Russia. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+