ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ಇಟಲಿ ಮೂಲದ ನ್ಯೂ ಹಾಲೆಂಡ್ ಅಗ್ರಿಕಲ್ಚರ್ ಕಂಪನಿಯು ಭಾರತದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡುತ್ತದೆ. ಕಂಪನಿಯು ಭಾರತೀಯ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ಇದುವರೆಗೆ ಯಾವುದೇ ಕಂಪನಿಯು ನೀಡದ ವಿಶೇಷ ಸೇವೆಯನ್ನು ರೈತರಿಗೆ ನಿಡುವುದಾಗಿ ತಿಳಿಸಿದೆ. ಕಂಪನಿಯು ತನ್ನ ಹೊಸ ಟ್ರಾಕ್ಟರುಗಳಿಗಾಗಿ 6 ​​ವರ್ಷಗಳ ಕನ್ವರ್ಟಿಬಲ್ ವಾರಂಟಿಯನ್ನು ಘೋಷಿಸಿದೆ. ಈ ವಾರಂಟಿಯು ಎಲ್ಲಾ ನ್ಯೂ ಹಾಲೆಂಡ್ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ಈ ಯೋಜನೆಯು 6 ವರ್ಷ / 6,000 ಗಂಟೆಗಳ ವಾರಂಟಿಯನ್ನು ಹೊಂದಿದೆ.

ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ಈ ಯೋಜನೆ ಅಕ್ಟೋಬರ್ 2ರಿಂದ ಜಾರಿಗೆ ಬಂದಿದೆ ಎಂದು ಕಂಪನಿ ಹೇಳಿದೆ. ಅಕ್ಟೋಬರ್ 2ರಿಂದ ನ್ಯೂ ಹಾಲೆಂಡ್ ಟ್ರಾಕ್ಟರುಗಳನ್ನು ಖರೀದಿಸಿದ ಗ್ರಾಹಕರಿಗೆ ಈ ಯೋಜನೆ ಅನ್ವಯಿಸಲಿದೆ. ಖರೀದಿಸಿದ ಟ್ರ್ಯಾಕ್ಟರ್ ಅನ್ನು ಬೇರೆಯವರಿಗೆ ಮಾರಾಟ ಮಾಡಿದರೆ, ಟ್ರ್ಯಾಕ್ಟರ್ ಖರೀದಿಸುವವರು ಸಹ ಈ ವಾರಂಟಿಯನ್ನು ಪಡೆಯಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ಈ ವಾರಂಟಿ ಯೋಜನೆಯ ಬಗ್ಗೆ ಕಂಪನಿಯ ಭಾರತದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರವುಣಕ್ ವರ್ಮಾ ಮಾಹಿತಿ ನೀಡಿದ್ದಾರೆ. ಕಂಪನಿಯ ಈ ನಿರ್ಧಾರದಿಂದ ಗ್ರಾಹಕರು ಖುಷಿಯಾಗಿರುವುದಂತೂ ಸತ್ಯ. ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ನ್ಯೂ ಹಾಲೆಂಡ್ ಈ ನಿರ್ಧಾರವನ್ನು ಕೈಗೊಂಡಿದೆ.

ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ಗ್ರಾಹಕರಿಗೆ ತಮ್ಮ ಉತ್ಪನ್ನಗಳ ಬಗ್ಗೆ ವಿಶ್ವಾಸವನ್ನು ಮೂಡಿಸುವ ಸಲುವಾಗಿ ಈ ಗರಿಷ್ಠ ವಾರಂಟಿಯ ಬಗ್ಗೆ ಮಾಹಿತಿ ನೀಡಿದೆ. ಕಂಪನಿಯು ಸದ್ಯಕ್ಕೆ ಭಾರತದಲ್ಲಿ 5 ಲಕ್ಷ ಗ್ರಾಹಕರನ್ನು ಹೊಂದಿದೆ. ಕಂಪನಿಯು ನೋಯ್ಡಾದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ಭಾರತದಲ್ಲಿ ಗ್ರಾಹಕರನ್ನು ಆಕರ್ಷಿಸಲು ಕಂಪನಿಯು ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ. ನ್ಯೂ ಹಾಲೆಂಡ್ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ 6 ವರ್ಷ / 6,000 ಗಂಟೆಗಳ ವಾರಂಟಿಯನ್ನು ಘೋಷಿಸಿದೆ. ಬೇರೆ ಯಾವುದೇ ಕಂಪನಿಯು ಈ ರೀತಿಯ ವಾರಂಟಿ ನೀಡುತ್ತಿಲ್ಲ.

ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ಭಾರತದಲ್ಲಿ ಮಹೀಂದ್ರಾ ಕಂಪನಿಯ ಟ್ರಾಕ್ಟರುಗಳು ಹೆಚ್ಚು ಮಾರಾಟವಾಗುತ್ತವೆ. ಮಾರಾಟ ಪಟ್ಟಿಯಲ್ಲಿ ನ್ಯೂ ಹಾಲೆಂಡ್ ಆರನೇ ಸ್ಥಾನದಲ್ಲಿದೆ. ಸೆಪ್ಟೆಂಬರ್ ವೇಳೆಗೆ ಕಂಪನಿಯು ಭಾರತದಲ್ಲಿ 28.81%ನಷ್ಟು ಮಾರಾಟದ ಬೆಳವಣಿಗೆಯನ್ನು ಹೊಂದಿದೆ. ಕಳೆದ ವರ್ಷದ ಸೆಪ್ಟೆಂಬರ್‌ಗಿಂತ ಈ ವರ್ಷದ ಸೆಪ್ಟೆಂಬರ್‌ನಲ್ಲಿ 962 ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ಈ ವರ್ಷದ ಸೆಪ್ಟೆಂಬರ್ ನಲ್ಲಿ 4,301 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇವುಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ನ್ಯೂ ಹಾಲೆಂಡ್ ಕಂಪನಿ ಹೊಂದಿದೆ. ನ್ಯೂ ಹಾಲೆಂಡ್ ಕಂಪನಿಯ ಈ ಘೋಷಣೆಯು ದೇಶದ ಇತರ ಪ್ರಮುಖ ಟ್ರಾಕ್ಟರ್ ವಿತರಕರಾದ ಮಹೀಂದ್ರಾ, ಟೇಫ್, ಸೋನಾಲಿಕಾ ಎಸ್ಕೋರ್ಟ್ಸ್ ಹಾಗೂ ಜಾನ್ ಡೀರೆ ಕಂಪನಿಗಳಿಗೆ ಸಂದಿಗ್ಧತೆಯನ್ನು ಉಂಟು ಮಾಡಿದೆ.

ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ನ್ಯೂ ಹಾಲೆಂಡ್ ಭಾರತದಲ್ಲಿ ವ್ಯಾಪಕ ಶ್ರೇಣಿಯ ಬಹುಪಯೋಗಿ ಕೃಷಿ ವಾಹನಗಳನ್ನು ಮಾರಾಟ ಮಾಡುತ್ತದೆ. ಭತ್ತವನ್ನು ಬಿತ್ತನೆ ಮಾಡುವ ಮೊದಲು ಬೇಕಾದ ವಾಹನದಿಂದ ಕೊಯ್ಲು ಮಾಡಲು ಬೇಕಾದ ವಾಹನಗಳವರೆಗೆ ಎಲ್ಲಾ ರೀತಿಯ ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ಈ ಕಂಪನಿಯ ಟ್ರಾಕ್ಟರುಗಳು 35 ಹೆಚ್‌ಪಿಯಿಂದ 90 ಹೆಚ್‌ಪಿ ವರೆಗಿನ ಎಂಜಿನ್ ಹೊಂದಿವೆ. ಇದರ ಜೊತೆಗೆ ಮೇವಿನ ಉಪಕರಣ, ಪಾರ್ಕ್ ಮೆಂಟೆನೆನ್ಸ್ ಯಂತ್ರೋಪಕರಣ, ಆಟೋಮ್ಯಾಟಿಕ್ ಆಗಿ ಕೀಟನಾಶಕ ಸಿಂಪಡಿಸುವ ಯಂತ್ರ, ದ್ರಾಕ್ಷಿ ಕೊಯ್ಲು ಉಪಕರಣಗಳಂತಹ ಸಾಧನಗಳನ್ನು ಮಾರಾಟ ಮಾಡುತ್ತದೆ.

ರೈತರಿಗೆ ಸಿಹಿ ಸುದ್ದಿ ನೀಡಿದ ನ್ಯೂ ಹಾಲೆಂಡ್ ಕಂಪನಿ

ಈ ಎಲ್ಲಾ ಸಾಧನಗಳು ಅತ್ಯುತ್ತಮವಾದ ಎಂಜಿನ್ ತಂತ್ರಜ್ಞಾನವನ್ನು ಹೊಂದಿವೆ. ಈ ಎಂಜಿನ್ ಗಳು ಬಲಶಾಲಿಯಾಗಿದ್ದು, ಹೆಚ್ಚು ಇಂಧನ ದಕ್ಷತೆಯನ್ನು ನೀಡುತ್ತವೆ. ನ್ಯೂ ಹಾಲೆಂಡ್ ಕಂಪನಿಯು ಮಾರಾಟ ಮಾಡುವ ವಾಹನಗಳನ್ನು ಬಳಸುವುದು ಹೇಗೆ ಎಂಬ ಬಗ್ಗೆ ತರಬೇತಿಯನ್ನು ಸಹ ನೀಡುತ್ತದೆ.

Most Read Articles

Kannada
English summary
New Holland agriculture company offers 6 year warranty for entire tractor range. Read in Kannada.
Story first published: Saturday, October 31, 2020, 11:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X