ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಡೆಮೊ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಹೋಂಡಾ ಇಂಡಿಯಾ ಕಂಪನಿಯು ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.49 ಲಕ್ಷಗಳಾಗಿದೆ.

ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಡೆಮೊ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಹೋಂಡಾ ಕಂಪನಿಯು ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಡೆಮೋ ವೀಡಿಯೋದಲ್ಲಿ ಬಿಡುಗಡೆಗೊಳಿಸಿದೆ. ಈ ಡೆಮೋ ವೀಡಿಯೋವನ್ನು ಹೋಂಡಾ ಕಾರ್ಸ್ ಇಂಡಿಯಾ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ಈ ವೀಡಿಯೋದಲ್ಲಿ ಕಾರಿನ ಹೊರಭಾಗದ ವಿನ್ಯಾಸವನ್ನು ಪ್ರದರ್ಶನಪಡಿಸಿದೆ. ಈ ಡೆಮೊ ವೀಡಿಯೋದಲ್ಲಿ ಮುಂಭಾಗದಲ್ಲಿ ಸಿಗ್ನೇಚರ್ ಕ್ರೋಮ್ ಮತ್ತು ನವೀಕರಿಸಿದ ಹೆಡ್‌ಲ್ಯಾಂಪ್‌ಗಳನ್ನು ಪ್ರದರ್ಶಿಸಿದ್ದಾರೆ.

ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಡೆಮೊ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

2020ರ ಹೋಂಡಾ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್‌ನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಪೊಸಿಷನ್ ಲ್ಯಾಂಪ್‌ಗಳಿವೆ. ಹಿಂಭಾಗದಲ್ಲಿ, ಡಬ್ಲ್ಯುಆರ್-ವಿ ಫೇಸ್ ಲಿಫ್ಟ್ ಸುಧಾರಿತ ಸಿ-ಆಕಾರದ ಎಲ್ಇಡಿ ರೇರ್ ಫಾಗ್‍ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಡೆಮೊ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಫೇಸ್‍‍ಲಿಫ್ಟ್ ಆವೃತ್ತಿಯಲ್ಲಿ ಹೊಸ ಬಿ‍ಎಸ್-6 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. 2020ರ ಹೋಂಡಾ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್‌ ಹೊಸ ವಿನ್ಯಾಸ ಹಾಗೂ ಫೀಚರ್‍‍ಗಳನ್ನು ಸಹ ನವೀಕರಿಸಲಾಗಿದೆ.

ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಡೆಮೊ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಆವೃತ್ತಿಯನ್ನು 1.2 ಲೀಟರಿನ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಬಿ‍ಎಸ್ 6 ಎಂಜಿನ್‍‍ ಆಯ್ಕೆಗಳನ್ನು ಹೊಂದಿದೆ. ಹಳೆಯ ತಲೆಮಾರಿನ ಕಾರಿನಂತೆ ಫೇಸ್‍‍ಲಿಫ್ಟ್ ಕಾರಿನಲ್ಲಿಯೂ ಸಹ 5-ಸ್ಪೀಡ್ ಹಾಗೂ 6-ಸ್ಪೀಡಿನ ಗೇರ್‍‍ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಡೆಮೊ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಇದರಲ್ಲಿ 1.2 ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 16.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು 1.5 ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 23.7 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಡೆಮೊ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಈ ಕಾರಿನ ಇಂಟಿರಿಯರ್ ನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್‍‍‍ಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಹೋಂಡಾ ಡಬ್ಲ್ಯು‍ಆರ್-ವಿಯಲ್ಲಿರುವ ಎಲೆಕ್ಟ್ರಾನಿಕ್ ಸನ್‍‍ರೂಫ್ ಹಾಗೂ ಕ್ರೂಸ್ ಕಂಟ್ರೋಲ್‍‍ಗಳನ್ನು ಫೇಸ್‍‍ಲಿಫ್ಟ್ ಆವೃತ್ತಿಯಲ್ಲಿಯೂ ಸಹ ನೀಡಲಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಈ ಕಾರಿನಲ್ಲಿ ಒನ್-ಟಚ್ ಎಲೆಕ್ಟ್ರಿಕ್ ಸನ್‌ರೂಫ್ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಇಕೋ ಅಸಿಸ್ಟ್ ಆಂಬಿಡೆಂಟ್ ರಿಂಗ್ಸ್‌ನೊಂದಿಗೆ ಮಲ್ಟಿ ಇನ್ಫಾರ್ಮೇಶನ್ ಕಾಂಬೀಮೀಟರ್, ಹ್ಯಾಂಡ್‌ಫ್ರೀ ಮತ್ತು ಕ್ರೂಸ್ ಕಂಟ್ರೋಲ್ ಸ್ವಿಚ್‌ಗಳೊಂದಿಗೆ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀಯರಿಂಗ್ ವ್ಹೀಲ್ ಹೊಂದಿದೆ.

ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಡೆಮೊ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ

ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರು ಭಾರತದಲ್ಲಿ ಹೊಸ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್ ಇಕೋಸ್ಪೋರ್ಟ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಹೋಂಡಾ honda
English summary
Honda WR-V Facelift: Official Demo Video Out. Read In Kannada.
Story first published: Tuesday, August 4, 2020, 13:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X