ಅನಾವರಣವಾಗಲಿದೆ ಪವರ್‌ಫುಲ್ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಜನರಲ್ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ಹಮ್ಮರ್ ಎಸ್‍‍ಯುವಿಯನ್ನು ಮತ್ತೊಮ್ಮೆ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ . ಆದರೆ ಈ ಬಾರಿ ಜನಪ್ರಿಯ ಹಮ್ಮರ್ ಎಸ್‍‍ಯುವಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಪರಿಚಯಿಸಲಿದೆ.

ಅನಾವರಣವಾಗಲಿದೆ ಪವರ್‌ಫುಲ್ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಮುಂಬರುವ ವಾರಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಿದೆ. ಈ ಹಮ್ಮರ್ ಎಸ್‍ಯುವಿಯನ್ನು ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಪರಿಚಯಿಸಲಾಗುತ್ತದೆ. ಈ ಹೊಸ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯ ಟಾಪ್-ಆಫ್-ಲೈನ್ ರೂಪಾಂತರವು 1000 ಬಿಹೆಚ್‍ಪಿ ಗಿಂತ ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಕೇವಲ ಮೂರು ಸೆಕೆಂಡುಗಳಲ್ಲಿ 0 - 96 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಅನಾವರಣವಾಗಲಿದೆ ಪವರ್‌ಫುಲ್ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್ ಎಲೆಕ್ಟ್ರಿಕ್ ಆವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಹಮ್ಮರ್ ಎಲೆಕ್ಟ್ರಿಕ್ ಎಸ್‍‍ಯುವಿಯ ಟೀಸರ್ ವೀಡಿಯೋವನ್ನು ಇತ್ತೀಚೆಗೆ ಜಿ‍ಎಂಸಿ ಬಿಡುಗಡೆಗೊಳಿಸಿತ್ತು. ಹಮ್ಮರ್ ಎಸ್‍‍ಯುವಿಯ ವಿನ್ಯಾಸವು ಹಿಂದಿನ ಮಾದರಿಗಿಂತ ಆಕರ್ಷಕವಾಗಿರಲಿದೆ.

MOST READ: ಅನಾವರಣವಾಯ್ತು ಮರ್ಸಿಡಿಸ್ ಎಎಂಜಿ ಇ 63 ಎಸ್ ಫೇಸ್‌ಲಿಫ್ಟ್ ಕಾರು

ಅನಾವರಣವಾಗಲಿದೆ ಪವರ್‌ಫುಲ್ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಎಸ್‍‍ಯುವಿಯು ಶಾರ್ಪ್ ಲೈನ್ ವಿನ್ಯಾಸವನ್ನು ಹೊಂದಿದೆ. ಹಳೆಯ ಮಾದರಿಯಿಂದ ಹೊಸ ಮಾದರಿಯು ಪ್ರತ್ಯೇಕಿಸುವ ಅಂಶವೆಂದರೆ ಎಲ್‍ಇಡಿ ಲೈಟಿಂಗ್, ಹೆಡ್‍‍ಲ್ಯಾಂಪ್‍, ಗ್ರಿಲ್ ಮತ್ತು ಡೇ ಟೈಮ್ ರನ್ನಿಂಗ್ ಲೈಟ್ ಆಗಿದೆ.

ಅನಾವರಣವಾಗಲಿದೆ ಪವರ್‌ಫುಲ್ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಎಲೆಕ್ಟ್ರಿಕ್ ಹಮ್ಮರ್ ಎಸ್‍ಯುವಿಯ ವಿನ್ಯಾಸ ಮತ್ತು ಸ್ಟೈಲಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಹೊಸ ಹಮ್ಮರ್ ಆಫ್-ರೋಡ್ ಎಸ್‍‍ಯುವಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಗಲಿದೆ ಪವರ್‌ಫುಲ್ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್ ಸರಳವಾದ ಆಫ್-ರೋಡ್ ಎಸ್‍‍ಯುವಿಯಾಗಿದೆ. ಹಮ್ಮರ್ ಎಸ್‍‍ಯುವಿಯು ಕಠಿಣವಾದ ಅಡೆತಡೆಗಳಲ್ಲಿ ಸುಲಭವಾಗಿ ಸಾಗುತ್ತದೆ. ಆಫ್ ರೋಡ್ ವಾಹನ ಪ್ರಿಯರ ಮೆಚ್ಚಿನ ಎಸ್‍‍ಯುವಿಯಾಗಿದೆ. ಅಮೆರಿಕಾದ ಸೈನ್ಯ ಯುಎಸ್ ಸೈನ್ಯ, ಯುಎಸ್ ಮೆರೈನ್ ಕಾಪ್ಸ್ ಮತ್ತು ಇತರ ಅರೆಸೈನಿಕ ಪಡೆಗಳಿಗೂ ಇದು ಮೆಚ್ಚಿನ ಎಸ್‍ಯುವಿಯಾಗಿದೆ.

ಅನಾವರಣವಾಗಲಿದೆ ಪವರ್‌ಫುಲ್ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಅಮೆರಿಕಾದ ಪಡೆಗಳು ಕಾರ್ಯಾಚರಣೆಗಾಗಿ ವಿಶೇಷವಾಗಿ ತಯಾರಿಸಿ ಹಮ್ಮರ್ ಅನ್ನು ಬಳಸುತ್ತಿದ್ದರು. ಹಮ್ಮರ್ ಎಸ್‍‍ಯುವಿಯನ್ನು ಮೊದಲ ಬಾರಿಗೆ 1992ರಲ್ಲಿ ಬಿಡುಗಡೆ ಮಾಡಿದ್ದರು. ಹಮ್ಮರ್‍‍ನ ಉತ್ಪಾದನೆಯನ್ನು 2010ರಲ್ಲಿ ಸ್ಥಗಿತಗೊಳಿಸಲಾಗಿತ್ತು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಗಲಿದೆ ಪವರ್‌ಫುಲ್ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಈ ಎಂಜಿನ್ ಅಪಾರ ಪ್ರಮಾಣದ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದನ್ನು ಪರಿಸರವಾದಿಗಳು ತೀವ್ರವಾಗಿ ಟೀಕಿಸಿದರು. ಈ ಟೀಕೆಗಳಿಂದ ಹೊರಗೆ ಬರಲು ಹಮ್ಮರ್ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಜಿ‍ಎಂಸಿ ಕಂಪನಿಯು ಹಮ್ಮರ್ ಎಲೆಕ್ಟ್ರಿಕ್ ಎಸ್‍‍ಯುವಿಯನ್ನು ಅಭಿವೃದ್ದಿಪಡಿಸಲಾಗಿದೆ.

ಅನಾವರಣವಾಗಲಿದೆ ಪವರ್‌ಫುಲ್ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್‍ ಎಸ್‍‍ಯುವಿಯು ಹೆಚ್ಚು ತೂಕ , ಇಂಧನ ದಕ್ಷತೆ ಅಂಕಿ ಅಂಶಗಳು, ಪವರ್ ಮತ್ತು ಟಾರ್ಕ್ ಉತ್ಪಾದನೆಯು ಅಂಕಿ ಅಂಶಗಳು ಹೆಚ್ಚಿದೆ. ಪವರ್‍‍ಫುಲ್ ಹಮ್ಮರ್ ಎಸ್‍‍ಯುವಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗುವ ಮೂಲಕ ಪರಿಸರ ಸ್ನೇಹಿಯಾಗಿರಲಿದೆ.

Most Read Articles

Kannada
Read more on ಹಮ್ಮರ್ hummer
English summary
Upcoming Hummer EV To Produce More Than 1000 HP; 0-96 In Sub 3 Seconds. Read In Kannada.
Story first published: Saturday, June 20, 2020, 20:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X