Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೇವಲ 40 ದಿನಗಳಲ್ಲಿ 30,000 ಬುಕ್ಕಿಂಗ್ ಪಡೆದುಕೊಂಡ ಹೊಸ ಹ್ಯುಂಡೈ ಐ20 ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಬಹುನಿರೀಕ್ಷಿತ ಮೂರನೇ ತಲೆಮಾರಿನ ಐ20 ಪ್ರೀಮಿಯಂ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಹ್ಯುಂಡೈ ಮೋಟರ್ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿದ ಮೂರನೇ ತಲೆಮಾರಿನ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಾಗಿ ಕೇವಲ 40 ದಿನಗಳಲ್ಲಿ 30,000 ಬುಕ್ಕಿಂಗ್ ಸ್ವೀಕರಿಸಿಕೊಂಡಿದೆ. ಹೊಸ ಹ್ಯುಂಡೈ ಐ20 ಕಾರು ದಾಖಲೆಯ ಮಟ್ಟದ ಬುಕ್ಕಿಂಗ್ ಅನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಹೊಸ ಸಂಚಲವನ್ನು ಮೂಡಿಸಿದೆ.

ಆಯ್ದ ಕೆಲವು ಹ್ಯುಂಡೈ ಡೀಲರುಗಳು ಅಕ್ಟೋಬರ್ ಮಧ್ಯೆ ಹೊಸ ಐ20 ಕಾರಿಗಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದರೆ, ಕಂಪನಿಯು ಅಧಿಕೃತವಾಗಿ ಅಕ್ಟೋಬರ್ 27ರಂದು ದೇಶಾದ್ಯಂತ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದರು.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ನವೆಂಬರ್ 5 ರಂದು ಬಿಡುಗಡೆಯಾಗುವ ವೇಳೆ 10,000 ಪ್ರಿ-ಬುಕ್ಕಿಂಗ್ ಪಡೆದುಕೊಂಡಿತ್ತು. ಹೀಗೆ ಕೇವಲ 20 ದಿನಗಳಲ್ಲಿ 20,000 ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿತ್ತು. ಇದೀಗ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು ಬುಕ್ಕಿಂಗ್ ನಲ್ಲಿ 30,000 ಗಡಿ ತಲುಪಿದೆ.

ಇನ್ನು ನ್ಯೂ ಜನರೇಷನ್ ಹ್ಯುಂಡೈ ಐ20 ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಐ20 ಹೆಚ್ಚು ಸ್ಪೋರ್ಟಿ ಮತ್ತು ಬೋಲ್ಡ್ ಲುಕ್ ಅನ್ನು ಹೊಂದಿದೆ. ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್ ಕಾರಿನ ಹಿಂದಿನ ಮಾದರಿಯು ಕೂಡ ಆಕರ್ಷಕ ಲುಕ್ ಅನ್ನು ಹೊಂದಿತ್ತು. ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹ್ಯುಂಡೈ ಐ20 ಗ್ರಾಹಕರನ್ನು ತನ್ನತ ಸೆಳೆಯುವಂತಹ ಆಕರ್ಷಕ ಲುಕ್ ಮತ್ತು ಸ್ಟೈಲಿಶ್ ನಿಂದ ಹೆಚ್ಚು ಜನಪ್ರಿಯವಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಈ ಹೊಸ ಹ್ಯುಂಡೈ ಐ20 ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಒಳಗೊಂಡಿದೆ.

ಹೊಸ ಹುಂಡೈ ಐ20 ಕಾರಿನ ಪಿಲ್ಲರ್‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ವಿಡಬ್ಲ್ಯೂ ಟೈಗನ್‍ನಲ್ಲಿ ಇರುವಂತಹ ಕೆಂಪು ಇಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇಲ್‍ಇಡಿ ಟೇಲ್‍ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 83 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದರೊಂದಿಗೆ 1.0ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯು ಕೂಡ ಲಭ್ಯವಿದೆ.

ಹೊಸ ಹ್ಯುಂಡೈ ಕಾರು ಅತ್ಯಾಧುನಿಕ ಫೀಚರ್, ಆಕರ್ಷಕ ವಿನ್ಯಾಸ ಮತ್ತು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ. ಈ ಎಲ್ಲಾ ಕಾರಣದಿಂದ ಈ ಹೊಸ ಹ್ಯುಂಡೈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಈ ಹೊಸ ಹ್ಯುಂಡೈ ಐ20 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ, ಟಾಟಾ ಆಲ್ಟ್ರೋಜ್, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.