ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿ
ಜೀಪ್ ಕಂಪನಿಯ ಸರಣಿಯಲ್ಲಿ ಕಂಪಾಸ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಮಾರಾಟದಲ್ಲಿರುವ ಮಾದರಿಯಾಗಿದೆ. ಜೀಪ್ ಇಂಡಿಯಾ ಕಂಪನಿಯು ತನ್ನ 2021ರ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ.

ಇದರ ನಡುವೆ ಜೀಪ್ ಇಂಡಿಯಾ ಕಂಪನಿಯು ತನ್ನ ಕಂಪಾಸ್ 7-ಸೀಟರ್ ಎಸ್‍ಯುವಿಯನ್ನು ಕೂಡ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಜೀಫ್ ಕಂಪಾಸ್ 7 ಸೀಟರ್ ಎಸ್‍ಯುವಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ. ಜೀಪ್ ಕಂಪಾಸ್ 3 ಸಾಲಿನ 7 ಸೀಟುಗಳನ್ನು ಹೊಂದಿರುವ ಎಸ್‍ಯುವಿಯಾಗಿದೆ. ಸಾಮಾನ್ಯ ಕಂಪಾಸ್‌ಗೆ ಹೋಲಿಸಿದರೆ ಜೀಪ್ ಗ್ರ್ಯಾಂಡ್ ಕಂಪಾಸ್ ಮುಂದೆ ವ್ಹೀಲ್ ಬೇಸ್ ನೊಂದಿಗೆ ಬರುವ ನಿರೀಕ್ಷೆಯಿದೆ.

ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿಯು ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಕಂಪಾಸ್ 7 ಸೀಟರ್ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ.
MOST READ: ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಹೊಸ 7-ಸೀಟರ್ ಎಸ್‍ಯುವಿಯುವಿಗೆ ಗ್ರ್ಯಾಂಡ್ ಕಂಪಾಸ್ ಎಂಬ ಹೆಸರನ್ನು ಇಡುವ ಸಾಧ್ಯತೆಗಳಿದೆ. ಜೀಪ್ ಲೋ ಡಿ ಅಥವಾ ಜೀಪ್ 598 ಎಂಬ ಎಂಬ ವೆರಿಯೆಂಟ್ ಅನ್ನು ನೀಡಬಹುದು. ಅಂತಿಮ ಸಾಲಿನ ಸೀಟುಗಳಿಗೆ ಅನುಗುಣವಾಗಿ ಮುಂದೆ ಹಿಂಭಾಗದ ಓವರ್‌ಹ್ಯಾಂಗ್ ಪಡೆಯಬಹುದು.

ಈ ಎಸ್‍ಯುವಿಯ ಸ್ಟೈಲಿಂಗ್ ಸಹ ಕಂಪಾಸ್ ಫೇಸ್‌ಲಿಫ್ಟ್ ಅನ್ನು ಆಧರಿಸಿರಬಹುದು. ಈ ಎಸ್‍ಯುವವಿಯ ದೊಡ್ಡ ಮೂರನೇ ವಿಂಡೋ ಮತ್ತು ಎಸ್-ಆಕಾರದ ಟ್ರಿಮ್ ಉದ್ದಕ್ಕೂ ರೂಫ್ ಅನ್ನು ಹೊಂದಿದೆ. ಜೀಪ್ ಗ್ರ್ಯಾಂಡ್ ಕಂಪಾಸ್ ಹೆಚ್ಚು ಪ್ರಾಮುಖ್ಯವಾದ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

2021 ಜೀಪ್ ಕಂಪಾಸ್ ಮರುವಿನ್ಯಾಸಗೊಳಿಸಲಾದ ಏಳು ಸ್ಲೇಟೆಡ್ ಫ್ರಂಟ್ ಗ್ರಿಲ್, ಅಗ್ರೇಸಿವ್ ಹೆಡ್‌ಲ್ಯಾಂಪ್‌ಗಳು, ಪರಿಷ್ಕೃತ ಬಂಪರ್ ಮತ್ತು ಹೊಸ ಫಾಗ್ ಲ್ಯಾಂಪ್ ಹೌಸಿಂಗ್‌ಗಳನ್ನು ಅಳವಡಿಸಲಾಗಿದೆ. ಹಿಂಭಾಗಕ್ಕೆ ಎತ್ತರದ ಪಿಲ್ಲರ್ ಗಳನ್ನು ಮತ್ತು ರ್ಯಾಕ್ಡ್ ವಿಂಡ್‌ಶೀಲ್ಡ್ ಅನ್ನು ನವೀಕರಿಸಲಾಗುತ್ತದೆ.

ಜೀಪ್ ಗ್ರ್ಯಾಂಡ್ ಕಂಪಾಸ್ ಆಯಿಲ್ ಬರ್ನರ್ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಇತ್ತೀಚೆಗೆ ಜೀಪ್ ಕಂಪಾಸ್ ಸರಣಿಯ ಸ್ಪೋರ್ಟ್ ರೂಪಾಂತರವನ್ನು ಸ್ಥಗಿತಗೊಳಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜೀಪ್ ಗ್ರ್ಯಾಂಡ್ ಕಂಪಾಸ್ ಎಸ್‍ಯುವಿಯಲ್ಲಿ 2.0-ಲೀಟರ್ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಬಹುದು.

ಜೀಪ್ ಕಂಪಾಸ್ 7 ಸೀಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಫೋಕ್ಸ್‌ವ್ಯಾಗನ್ ಟಿಗುವಾನ್ ಆಲ್‌ಸ್ಪೇಸ್, ಹ್ಯುಂಡೈ ಟಕ್ಸನ್, ಸ್ಕೋಡಾ ಕೊಡಿಯಾಕ್ ಮತ್ತು ಟೊಯೊಟಾ ಫಾರ್ಚೂನರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications