2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಜೀಪ್ ಕಂಪನಿಯು ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು 2021ರ ಜನವರಿ 7ರಂದು ಭಾರತದಲ್ಲಿ ಅನಾವರಣವಾಗಲಿದೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಭಾರತದಲ್ಲಿ ಅನಾವರಣವಾಗುವ ಮುನ್ನ ಜೀಪ್ ಕಂಪನಿಯು ತನ್ನ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮೊದಲ ಅಧಿಕೃತ ಟೀಸರ್ ಅನ್ನು ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಟೀಸರ್ ಚಿತ್ರದಲ್ಲಿ ಜೀಪ್ ಕಂಪಾಸ್ ಫೇಸ್‌ಲಿಫ್ಟ್‌ ಎಸ್‍ಯುವಿಯು ಹಸಿರು ಬಣ್ಣದಲ್ಲಿದೆ. ಹೊಸ ಬಣ್ಣ ಆಯ್ಕೆಯ ಹೊರತಾಗಿ, ಫೇಸ್‌ಲಿಫ್ಟ್ ಆವೃತ್ತಿಯು ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಹಲವಾರು ನವೀಕರಣಗಳನ್ನು ಪಡೆದುಕೊಳ್ಳಲಿದೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

2021ರ ಕಂಪಾಸ್ ಫೇಸ್‌ಲಿಫ್ಟ್ ಎಸ್‌ಯುವಿಯಲ್ಲಿ ಹೊಸ ಫೀಚರ್ ಗಳನ್ನು ಅಳವಡಿಸಲಾಗಿದೆ. ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುದಾದರೆ ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದೆ. ಈ ಹೊಸ ಎಸ್‍ಯುವಿಯಲ್ಲಿ ಏಳು-ಸ್ಲ್ಯಾಟ್ ಗ್ರಿಲ್ ಅನ್ನು ಉಳಿಸಿಕೊಂಡು ಮುಂಭಾಗದಲ್ಲಿ ಹೊಸ ಹನಿಕಾಂಬ್ ಮೆಶ್ ಅನ್ನು ಒಳಗೊಂಡಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಅಲ್ಲದೇ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿಯ ಇತರ ನವೀಕರಣಗಳಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ ಗಳೊಂದಿಗೆ ಹೆಡ್ ಲ್ಯಾಂಪ್, ಫಾಗ್ ಲ್ಯಾಂಪ್ ಗಳಿಗಾಗಿ ನವೀಕರಿಸಿದ ಫ್ರಂಟ್ ಬಂಪರ್ ಮತ್ತು ಹಿಂಭಾಗದಲ್ಲಿ ಟೇಲ್ ಲೈಟ್ ಅನ್ನು ಅಳವಡಿಸಲಾಗಿದೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸೂಕ್ಷ್ಮ ನವೀಕರಣಗಳು ಮತ್ತು ಬದಲಾವಣೆಗಳನ್ನು ಒಳಗೊಂಡಿದೆ. 2021 ಜೀಪ್ ಕಂಪಾಸ್‌ನ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿದೆ.ಎಸ್‍ಯುವಿಯ ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಹೊಂದಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದ ಫೀಚರುಗಳ ಮಾಹಿತಿ ಬಹಿರಂಗವಾಗಿದೆ. ಈ ಹೊಸ ಎಸ್‍ಯುವಿಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ 10.1-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಯುಕನೆಕ್ಟ್ 5 ತಂತ್ರಜ್ಞಾನವನ್ನು ಅಳವಡಿಸಿದೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

2021ರ ಜೀಪ್ ಕಂಪಾಸ್‌ನಲ್ಲಿ ಹೊಸ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಹೊಸದಾಗಿ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 160 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಹೊಸ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಫೋಕ್ಸ್‌ವ್ಯಾಗನ್ ಟಿ-ರೋಕ್, ಸ್ಕೋಡಾ ಕರೋಕ್, ನಿಸ್ಸಾನ್ ಕಿಕ್ಸ್, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, December 29, 2020, 12:25 [IST]
English summary
2021 Jeep Compass Facelift First Official Teaser Released. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+