ಪರಿಷ್ಕೃತ ಸೆಲ್ಟೋಸ್ ಕಾರು ಬಿಡುಗಡೆಗೊಳಿಸಿದ ಕಿಯಾ ಮೋಟಾರ್ಸ್
ಕಿಯಾ ಮೋಟಾರ್ಸ್, ಪರಿಷ್ಕೃತ ಸೆಲ್ಟೋಸ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಸೆಲ್ಟ್ರೋಸ್ ಕಾರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.9.89 ಲಕ್ಷಗಳಾಗಿದೆ. ಹೊಸ ಸೆಲ್ಟೋಸ್ ಕಾರು ಈಗ ಹೆಚ್ಚಿನ ಸುರಕ್ಷತೆ, ಕನೆಕ್ಟಿವಿಟಿ ಹಾಗೂ ಹೊಸ ವಿನ್ಯಾಸಗಳನ್ನು ಹೊಂದಿದ್ದು, ಹೆಚ್ಚುವರಿ ಫೀಚರ್‌ಗಳನ್ನು ಅಳವಡಿಸಲಾಗಿದೆ.

ಇದರ ಜೊತೆಗೆ ಹೈ ಎಂಡ್ ಮಾದರಿಗಳಲ್ಲಿದ್ದ ಸನ್‌ರೂಫ್‌ನಂತಹ ಫೀಚರ್‌ಗಳನ್ನು ಮೂಲ ಮಾದರಿಗಳಲ್ಲಿಯೂ ನೀಡಲಾಗುತ್ತದೆ. ಈ ಮೂಲಕ ಈ ಸೆಗ್‌ಮೆಂಟಿನಲ್ಲಿರುವ ಕಾರುಗಳಲ್ಲಿಯೇ ಹಲವಾರು ಫೀಚರ್‌ಗಳನ್ನು ನೀಡಲಾಗುತ್ತಿದೆ. ಮಾರುಕಟ್ಟೆಯ ಅಧ್ಯಯನ ಹಾಗೂ ಗ್ರಾಹಕರ ಆದ್ಯತೆಗೆ ಹೆಚ್ಚು ಒತ್ತು ನೀಡಿರುವ ಕಿಯಾ ಮೋಟಾರ್ಸ್ ಕಂಪನಿಯು ತನ್ನ ಎರಡು ಮಾದರಿಗಳಾದ ಸ್ಮಾರ್ಟ್‌ಸ್ಟ್ರೀಮ್ ಪೆಟ್ರೋಲ್ 1.4 ಟಿ-ಜಿಡಿಐ ಜಿಟಿಕೆ ಹಾಗೂ ಜಿಟಿಎಕ್ಸ್ 7 ಡಿಸಿಟಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಹೊಸ ಸೆಲ್ಟೋಸ್ ಕಾರು ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್ಎಸ್), ಫುಲಿ ಆಟೋಮ್ಯಾಟಿಕ್ ಟೆಂಪರೆಚರ್ ಕಂಟ್ರೋಲ್, ಡೆಕೊ ಪ್ಯಾನಲ್ ಸಿಲ್ವರ್ ಗಾರ್ನಿಷ್, ಸನ್‌ರೂಫ್‌ಗಳಿಗಾಗಿ ಡ್ಯುಯಲ್ ಟೋನ್, ಆರೆಂಜ್ / ವೈಟ್ ರೂಫ್ ಹೊಸ ಡ್ಯುಯಲ್-ಟೋನ್ ಹಾಗೂ ಯುವಿಒ ಕನೆಕ್ಟಿವಿಟಿ ಸಿಸ್ಟಂಗಾಗಿ 7 ಹೊಸ ಸೇರ್ಪಡೆಗಳನ್ನು ಹೊಂದಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಹೈ ಎಂಡ್ ಮಾದರಿಗಳಲ್ಲಿದ್ದ ಎಲ್‌ಇಡಿ ರೂಮ್ ಲ್ಯಾಂಪ್, ರಿಯರ್ ಯುಎಸ್‌ಬಿ ಚಾರ್ಜರ್, ಮೆಟಲ್ ಸ್ಕಫ್ ಪ್ಲೇಟ್, ಲೀಥೆರೆಟ್ ಗೇರ್ ನಾಬ್, ಬ್ಲ್ಯಾಕ್ ಲೀಥೆರೆಟ್ ಇಂಟೀರಿಯರ್, ಫ್ರಂಟ್ ಟ್ರೇ ಯುಎಸ್‌ಬಿ ಚಾರ್ಜರ್, ಪ್ರಿಂಟೆಡ್ ಡ್ಯಾಶ್‌ಬೋರ್ಡ್ ಗಾರ್ನಿಷ್ ಹಾಗೂ ಡಲ್ ಮಫ್ಲರ್ ವಿನ್ಯಾಸದ ಸನ್‌ರೂಫ್‌ಗಳನ್ನು ಸ್ಟ್ಯಾಂಡರ್ಡ್ ಮಾದರಿಗಳಲ್ಲಿಯೂ ನೀಡಲಾಗಿದೆ.

ಇದರ ಹೊರತಾಗಿ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಕಿಯಾ ಸೆಲ್ಟೋಸ್‌ನಲ್ಲಿರುವ 1.5-ಲೀಟರಿನ ಬಿಎಸ್ 6 ಪೆಟ್ರೋಲ್ ಎಂಜಿನ್ 115 ಬಿಹೆಚ್‌ಪಿ ಪವರ್ ಹಾಗೂ 144 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ . 1.5-ಲೀಟರಿನ ಡೀಸೆಲ್ ಎಂಜಿನ್ 115 ಬಿಹೆಚ್‌ಪಿ ಪವರ್ ಹಾಗೂ 250 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಇನ್ನು 1.4-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 140 ಬಿಹೆಚ್‌ಪಿ ಪವರ್ ಹಾಗೂ 242 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲ್ಲಾ ಮೂರು ಎಂಜಿನ್‌ಗಳು ಸ್ಟಾಂಡರ್ಡ್ ಆಗಿ ಆರು ಸ್ಪೀಡಿನ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿವೆ. ಇವುಗಳ ಜೊತೆಗೆ ಸಿವಿಟಿ, ಐವಿಟಿ ಹಾಗೂ 7-ಸ್ಪೀಡ್ ಡಿಸಿಟಿ ಸೇರಿದಂತೆ ವಿವಿಧ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೂ ಸಹ ಸೇರಿವೆ.

ಹೊಸ ಕಾರು ಬಿಡುಗಡೆಯ ಬಗ್ಗೆ ಮಾತನಾಡಿದ ಕಿಯಾ ಮೋಟಾರ್ಸ್ ಇಂಡಿಯಾದ ಎಂಡಿ ಹಾಗೂ ಸಿಇಒ ಕುಖಿಯುನ್ ಶಿಮ್‌ರವರು ಸೆಲ್ಟೋಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಕಂಪನಿಗೆ ತನ್ನದೇ ಆದ ಅಸ್ತಿತ್ವವನ್ನು ನೀಡಿದೆ. ಸೆಲ್ಟೋಸ್ ಕಾರು ಕಿಯಾ ಕಂಪನಿಗೆ ಭಾರತದಲ್ಲಿ ಬಲವಾದ ಅಡಿಪಾಯವನ್ನು ಹಾಕಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸೆಲ್ಟೋಸ್ ಭಾರತದ ಆಟೋ ಮೊಬೈಲ್ ಉದ್ಯಮದ ದಿಕ್ಕನ್ನೇ ಬದಲಿಸಲಿದೆ. ಪರಿಷ್ಕೃತಗೊಂಡ ಸೆಲ್ಟೋಸ್ ಕಾರಿನಿಂದ ಕಿಯಾ ಮೋಟಾರ್ಸ್ ಕಂಪನಿಯು ಹೊಸ ಫೀಚರ್ ಹಾಗೂ ಆಯ್ಕೆಗಳೊಂದಿಗೆ ಭಾರತೀಯರ ಈ ನೆಚ್ಚಿನ ಎಸ್‌ಯುವಿಯನ್ನು ಮತ್ತಷ್ಟು ಆಕರ್ಷಕವಾಗಿಸಲಿದೆ.

ಸೆಲ್ಟೋಸ್ ಕಾರಿನಲ್ಲಿ ಈ ಸೆಗ್‌ಮೆಂಟಿನಲ್ಲಿ ಅಗತ್ಯವಿದ್ದ ಎಲ್ಲಾ ಫೀಚರ್‌ಗಳನ್ನು ನೀಡಲಾಗಿದೆ. ಹೊಸ ತಲೆಮಾರಿನ ಟೆಕ್ನಾಲಜಿಯೊಂದಿಗೆ ಪರಿಷ್ಕೃತ ಸೆಲ್ಟೋಸ್‌ನೊಂದಿಗೆ ಗ್ರಾಹಕರು ಹೆಚ್ಚು ಸಂತಸಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ. ಹೊಸ ಸೆಲ್ಟೋಸ್ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಆಕರ್ಷಿಸಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್‌ನಿಂದ ಉಂಟಾಗಿರುವ ಈ ಸಂಕಷ್ಟದ ಸಂದರ್ಭದಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಗ್ರಾಹಕರು, ಸಿಬ್ಬಂದಿಗಳು, ಡೀಲರ್‌ಗಳು ಹಾಗೂ ಶೋರೂಂ ಸಿಬ್ಬಂದಿಗಳ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಕಾರಣಕ್ಕೆ ಡಿಜಿಟಲ್ ಖರೀದಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.

ಹೊಸ ಸೆಲ್ಟೋಸ್ ಕಾರು 2020ರ ಹ್ಯುಂಡೈ ಕ್ರೆಟಾ ಹಾಗೂ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಹೊಸ ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಸ್ಮಾರ್ಟ್‌ಸ್ಟ್ರೀಮ್ ಪೆಟ್ರೋಲ್ 1.5 ಎಚ್‌ಟಿಇ ಮಾದರಿಯ ಬೆಲೆ ರೂ.9.89 ಲಕ್ಷಗಳಿಂದ ಆರಂಭವಾಗಲಿದ್ದು, ಡೀಸೆಲ್ 1.5 ಸಿಆರ್‌ಡಿ ವಿಜಿಟಿ ಜಿಟಿಎಕ್ಸ್ ಪ್ಲಸ್ 6 ಎಟಿ ಮಾದರಿಯ ಬೆಲೆ ರೂ.17.34 ಲಕ್ಷಗಳಾಗುತ್ತದೆ.


Click it and Unblock the Notifications








