ಅನಾವರಣವಾಯ್ತು ಹೊಸ ಐಷಾರಾಮಿ ಲ್ಯಾಂಬೊರ್ಗಿನಿ ಲಿಮಿಟೆಡ್ ಎಡಿಷನ್ ಮಾದರಿ
ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಕ್ಸಾಗೊ ಎಡಿಷನ್ ಮಾದರಿಯನ್ನು ಅನಾವರಣಗೊಳಿಸಿದೆ. ವಿಶ್ವಾದ್ಯಂತ ಈ ಸೂಪರ್ ಕಾರಿನ ಕೇವಲ 10 ಯುನಿಟ್‌ಗಳು ಮಾತ್ರ ಲಭ್ಯವಿರಲಿದೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಆವೃತ್ತಿಯ ಹೊರಭಾಗವನ್ನು ನಿರ್ಮಿಸಲು ಒಟ್ಟು 120 ಗಂಟೆಗಳನ್ನು ತೆಗೆದುಕೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸೂಪರ್ ಕಾರಿನಲ್ಲಿ ಕೆಲವು ಸಿಲ್ವರ್ ಫೇಡಿಂಗ್ ಅನ್ನು ಹೊಂದಿದೆ. ಈ ಕಾರು ಗ್ಲೋಸ್ ಬ್ಲ್ಯಾಕ್ ನೈರಿಯೊ ಪರ್ಸನಮ್ ರಿಮ್ಸ್ ಅನ್ನು ಸಹ ಹೊಂದಿದೆ. ಈ ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಆವೃತ್ತಿಯ ಇಂಟಿರಿಯರ್ ಅನ್ನು ನಿರ್ಮಿಸಲು 80 ಗಂಟೆಗಳನ್ನು ತೆಗೆದುಕೊಂಡಿದೆ.

ಈ ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಆವೃತ್ತಿಯ 10 ಯುನಿಟ್‌ಗಳಲ್ಲಿಯು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಆವೃತ್ತಿ ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಆವೃತ್ತಿಯಲ್ಲಿ 6.5-ಲೀಟರ್ ವಿ 12 ಮಲ್ಟಿ-ಪಾಯಿಂಟ್ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 770 ಬಿಹೆಚ್‌ಪಿ ಪವರ್ ಮತ್ತು 720 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 7-ಸ್ಫೀಡ್ ಶಿಫ್ಟಿಂಗ್ ರಾಡ್ಸ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಕೂಡ ಜೋಡಿಸಲಾಗಿದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಆವೃತ್ತಿಯಲ್ಲಿ ಸುರಕ್ಷತೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಲಾಗಿದೆ. ಈ ಸೂಪರ್ ಕಾರಿನ ಮುಂಭಾಗದ ಡ್ಯುಯಲ್ ಸ್ಟೇಜ್ ಡ್ರೈವರ್ ಏರ್‌ಬ್ಯಾಗ್, ಅಡಾಪ್ಟಿವ್ ಫ್ರಂಟ್ ಪ್ಯಾಸೆಂಜರ್ ಏರ್‌ಬ್ಯಾಗ್ ಮತ್ತು ಹೆಡ್-ಥೋರಾಕ್ಸ್ ಏರ್‌ಬ್ಯಾಗ್ ಹೊಂದಿರುವ ಸೀಟುಗಳನ್ನು ಹೊಂದಿದೆ.

ಇದರೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಹೊಂದಿರುವ ಎಬಿಡಿ, ಲ್ಯಾಂಬೊರ್ಗಿನಿ ಡೈನಾಮಿಕ್ ಸ್ಟೀಯರಿಂಗ್ ಮತ್ತು ರಿಯರ್ ವ್ಹೀಲ್ ಸ್ಟೀರಿಂಗ್ ಮತ್ತು ಇತರ ಸುರಕ್ಷತಾ ಫೀಚರುಗಳನ್ನು ಒಳಗೊಂಡಿದೆ.
MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಈ ಸೂಪರ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಡೀಲರುಗಳನ್ನು ಸಂಪರ್ಕಿಸಬಹುದು. ಲ್ಯಾಂಬೊರ್ಗಿನಿ ಡೀಲರುಗಳು ವೀಡಿಯೋ ಕಾಲ್ ಮೂಲಕ ಈ ಕಾರನ್ನು ಪ್ರದರ್ಶಿಸುತ್ತಾರೆ. ಅಲ್ಲದೇ ಈ ಕಾರಿನ ಎಲ್ಲಾ ಮಾಹಿತಿಗಳನ್ನು ವಿವರಿಸುತ್ತಾರೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಕ್ಸಾಗೊ ಆವೃತ್ತಿಯ ಕೇವಲ 10 ಯುನಿಟ್‌ಗಳು ಮಾತ್ರ ಲಭ್ಯವಿರಲಿದೆ. ಈ ಸೂಪರ್ ಕಾರು ಲಿಮಿಟೆಡ್ ಎಡಿಷನ್ ಆಗಿದೆ. ಅಲ್ಲದೇ ಇತರ ಲ್ಯಾಂಬೊರ್ಗಿನಿ ಕಾರಿನಂತೆ ಇದು ಕೂಡ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ.


Click it and Unblock the Notifications








