ಅನಾವರಣವಾಯ್ತು ಬಹುನಿರೀಕ್ಷಿತ 2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿ
ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾದ ಲ್ಯಾಂಡ್ ರೋವರ್ ತಮ್ಮ 2021ರ ಡಿಸ್ಕವರಿ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯಲ್ಲಿ ಹಲವು ನೂತನ ಫೀಚರ್ ಗಳು, ಹೊಸ ಎಂಜಿನ್ ಆಯ್ಕೆಗಳು ಮತ್ತು ತಂತ್ರಜ್ಞಾನವನ್ನು ಹೊಂದಿದೆ.

2021ರ ಲ್ಯಾಂಡ್ ರೋವರ್ ಡಿಸ್ಕವರಿ ಫೇಸ್‌ಲಿಫ್ಟ್ ಇದೀಗ ಸುಧಾರಿತ ಸಾಮರ್ಥ್ಯಗಳನ್ನು ಭರವಸೆ ನೀಡುತ್ತದೆ ಮತ್ತು ಎಂದಿಗಿಂತಲೂ ಹೆಚ್ಚು ಐಷಾರಾಮಿ ಎಂದು ಹೇಳಲಾಗುತ್ತಿದೆ. 2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸೂಕ್ಷ್ಮವಾದ ಮತ್ತು ಗಮನಾರ್ಹವಾದ ಸ್ಟೈಲಿಂಗ್ ಟ್ವೀಕ್‌ಗಳೊಂದಿಗೆ ಬರುತ್ತದೆ. ಇವುಗಳಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್(ಡೇಟೈಮ್ ರನ್ನಿಂಗ್ ಲೈಟ್ಸ್) ನೊಂದಿಗೆ ಹೊಸ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲ್ಯಾಂಪ್ ಗಳು ಸೇರಿವೆ.

2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯಲ್ಲಿ ಮರು-ಶೈಲಿಯ ಮುಂಭಾಗದ ಗ್ರಿಲ್ ಅನ್ನು ಹೊಂದಿದೆ. ಲ್ಯಾಂಡ್ ರೋವರ್ ಮುಂಭಾಗದ ಬಂಪರ್‌ಗಳನ್ನು ಸಹ ಪುನರ್ನಿರ್ಮಾಣ ಮಾಡಿದೆ, ಅದು ಈಗ ಅಡ್ಡ-ಸ್ಲ್ಯಾಟ್‌ಗಳೊಂದಿಗೆ ದೊಡ್ಡ ಸೈಡ್ ಏರ್ ವೆಂಟ್ಸ್ ಗಳನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯಲ್ಲಿ ಗ್ಲೋಸ್-ಬ್ಲ್ಯಾಕ್ ಫಿನಿಶ್ಡ್ ಸ್ಕಿಡ್ ಪ್ಲೇಟ್‌ನೊಂದಿಗೆ ಬರುತ್ತದೆ. ಇದು ಹೊಸ ಡಿಸ್ಕವರಿ ಎಸ್‍ಯುವಿಗೆ ಹೆಚ್ಚಿನ ಸ್ಪೋರ್ಟಿ ಸ್ಪರ್ಶವನ್ನು ನೀಡುತ್ತದೆ. 2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯ ಸೈಡ್ ಪ್ರೊಫೈಲ್ ನಲ್ಲಿ ಉದ್ದಕ್ಕೂ ಅದರ ಡೋರುಗಳ ಹಿಡಿಕೆಗಳ ಉದ್ದಕ್ಕೂ ತೀಕ್ಷ್ಣವಾದ ಕ್ರೀಸ್ ಇದೆ.

ಈ ಕ್ರೇಸ್ ವ್ಹೀಲ್ ಕಮಾನುಗಳಲ್ಲಿನ ಸೈಡ್ ಬ್ಯಾಡ್ಜಿಂಗ್‌ನಿಂದ ಟೈಲ್ ಲೈಟ್ಸ್ ನಲ್ಲಿ ಕೊನೆಗೊಳ್ಳುತ್ತದೆ. ಹೊಸ ಡಿಸ್ಕವರಿ ಈಗ ಸ್ಟ್ಯಾಂಡರ್ಡ್ 20-ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ, ಇದರೊಂದಿಗೆ 21 ಇಂಚಿನ ವ್ಹೀಳ್ ಗಳನ್ನು ಆಯ್ಕೆಯಾಗಿ ನೀಡಲಾಗುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಈ ಎಸ್‍ಯುವಿಯ ಹಿಂಭಾಗದ ಬಗ್ಗೆ ಹೇಳುವುದಾದರೆ, ಎಲ್ಇಡಿ ಟೈಲ್ ಲೈಟ್ ಗಳನ್ನು ಹೊಂದಿವೆ. ಹಿಂಭಾಗದಲ್ಲಿ 'ಡಿಸ್ಕವರಿ' ಬ್ಯಾಡ್ಜಿಂಗ್ ಅನ್ನು ಸಹ ಹೊಂದಿದೆ. ಹಿಂಭಾಗದ ಬಂಪರ್ ಅನ್ನು ಸಹ ನವೀಕರಿಸಲಾಗಿದೆ.

2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯ ಎಸ್, ಎಸ್‌ಇ, ಎಚ್‌ಎಸ್‌ಇ ಮತ್ತು ಆರ್-ಡೈನಾಮಿಕ್ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿರಲಿದೆ. ಹೊಸ 2021 ಲ್ಯಾಂಡ್ ರೋವರ್ ಡಿಸ್ಕವರಿ ಆರ್-ಡೈನಾಮಿಕ್ ಟ್ರಿಮ್ ಹೆಚ್ಚುವರಿ ಸ್ಪೋರ್ಟಿ ಅಂಶಗಳನ್ನು ಹೊಂದಿವೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಹೊಸ ಡಿಸ್ಕವರಿ ಎಸ್‍ಯುವಿಯಲ್ಲಿ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕ್ಲಿಯರ್‌ಸೈಟ್ ಗ್ರೌಂಡ್ ವ್ಯೂ ಹೊಂದಿರುವ 3ಡಿ ಸರೌಂಡ್ ಕ್ಯಾಮೆರಾ, 15-ವ್ಯಾಟ್ ವೈರ್‌ಲೆಸ್ ಚಾರ್ಜಿಂಗ್, ಪಿಎಂ 2.5 ಕ್ಯಾಬಿನ್ ಏರ್ ಫಿಲ್ಟರೇಶನ್, ಮತ್ತು ಎರಡನೇ ಸಾಲಿನ ಸೀಟುಗಳು 160 ಎಂಎಂ ವರೆಗೆ ಎಲೆಕ್ಟ್ರಾನಿಕ್ ಹೊಂದಾಣಿಕೆ ಮಾಡಬಹುದಾಗಿದೆ.

2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿವೆ. ಇದರಲ್ಲಿ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಗಳನ್ನು ಒಳಗೊಂಡಿವೆ. ಇದರಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಈ ಎಂಜಿನ್ 300 ಬಿಹೆಚ್‌ಪಿ ಮತ್ತು 400 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಎರಡನೆಯದು ಪಿ 360, ದೊಡ್ಡದಾದ 3.0-ಲೀಟರ್ ಆರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಆಗಿದೆ. ಈ ಎಂಜಿನ್ 360 ಬಿಹೆಚ್‌ಪಿ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು 3.0-ಲೀಟರ್ ಆರು-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಎರಡು ರೀತಿ ಟ್ಯೂನ್‌ಗಳನ್ನು ಮಾಡಲಾಗಿದೆ. ಇದರಲ್ಲಿ ಡಿ250ಯು 242 ಬಿಹೆಚ್‍ಪಿ ಪವರ್ ಮತ್ತು 570ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ,ಡಿ300 300 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಲ್ಲಾ ಎಂಜಿನ್ ಗಳೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಲ್ಯಾಂಡ್ ರೋವರ್ ಆರು ಸಿಲಿಂಡರ್ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳನ್ನು ಮೈಲ್ಡ್ 48ವಿ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಿದೆ.

2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯಲ್ಲಿ ಹಲವು ನವೀಕರಣಗಳನ್ನು ಮಾಡಲಾಗಿದೆ. ಈ ಹೊಸ ಡಿಸ್ಕವರಿ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ನಂತರದ ಹಂತದಲ್ಲಿ ಭಾರತೀಯ ಮಾರುಕಟ್ಟೆಕ್ಕೆ ಬರಲಿದೆ.


Click it and Unblock the Notifications








