ಬಿಎಸ್-6 ಮಹೀಂದ್ರಾ ಬೊಲೆರೊ ಎಸ್‍ಯುವಿಯ ಖರೀದಿಗೆ ಬುಕ್ಕಿಂಗ್ ಆರಂಭ
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಬಿಎಸ್-6 ಬೊಲೆರೊ ಎಸ್‍ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಹೊಸ ಬೊಲೆರೊ ಎಸ್‍ಯುವಿಗಾಗಿ ಮಹೀಂದ್ರಾ ಕಂಪನಿಯು ಬುಕ್ಕಿಂಗ್ ಅನ್ನು ಆರಂಭಿಸಿದೆ.

ಹೊಸ ಬೊಲೆರೊ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.98 ಲಕ್ಷಗಳಾಗಿದೆ. ಮಹೀಂದ್ರಾ ಕಂಪನಿಯು ಹೊಸ ಬೊಲೆರೊ ಎಸ್‍ಯುವಿಗಾಗಿ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಗ್ರಾಹಕರು ಹೊಸ ಬೊಲೆರೊ ಎಸ್‍ಯುವಿಗಾಗಿ ಟೋಕನ್ ಮೊತ್ತ ರೂ.5,000 ಸಾವಿರ ಪಾವತಿಸಿ ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಎಸ್‍ಯುವಿ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಬೊಲೆರೊ ಕೂಡ ಒಂದಾಗಿದೆ.

ಹೊಸ ಬೊಲೆರೊ ಬಿ4, ಬಿ6 ಮತ್ತು ಬಿ6(ಒ) ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಹೊಸ ಬೊಲೆರೊ ಬಿ6(ಒ) ಟಾಪ್ ಎಂಡ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.64 ಲಕ್ಷಗಳಾಗಿದೆ. ಮಹೀಂದ್ರಾ ಕಂಪನಿಯು ಈ ಬೊಲೆರೊವನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ.
MOST READ: ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಬೆಲೆ ಮಾಹಿತಿ ಬಹಿರಂಗ

ಬಿಎಸ್-6 ಬೊಲೆರೊ ಎಸ್‍ಯುವಿನಲ್ಲಿ ಹೊಸ ಕ್ರ್ಯಾಶ್ ಟೆಸ್ಟ್ ಸುರಕ್ಷತಾ ನಿಯಮಕ್ಕೆ ಅನುಗುಣವಾಗಿ ಅದರ ಮಂಭಾಗವನ್ನು ನವೀಕರಿಸಲಾಗಿದೆ. ಮುಂಭಾಗದ ಪ್ರಯಾಣಿಕರ ಸುರಕ್ಷತೆಗೆ ಈ ಹೊಸ ನವೀಕರಣವು ಸಹಕಾರಿಯಾಗಲಿದೆ.

ಹೊಸ ಬೊಲೆರೊ ಮುಂಭಾಗದಲ್ಲಿ ಹೊಸ ಬಂಪರ್, ಗ್ರಿಲ್ ಮತ್ತು ಮರುವಿನ್ಯಾಸಗೊಳಿಸಲಾದ ಹೆಡ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಹೊಸ ಬೊಲೆರೊ ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಹೆಚ್ಚು ಪವರ್ ಉತ್ಪಾದಿಸುತ್ತದೆ ಮಾಡಿಫೈಗೊಂಡ ಈ ಜಿಮ್ನಿ ಎಸ್‍ಯುವಿ

ಹೊಸ ಮಹೀಂದ್ರಾ ಬೊಲೆರೊ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಏರ್‍ಬ್ಯಾಗ್‍ಗಳು, ರೇರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ(ಎಬಿಎಸ್) ಅನ್ನು ಅಳವಡಿಸಬಹುದು. ಬೊಲೆರೊ ಎಸ್‍ಯುವಿ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಎಸ್‍ಯುವಿಗಳಲ್ಲಿ ಒಂದಾಗಿದೆ.

ಹೊಸ ಬೊಲೆರೊ ಎಸ್‍ಯುವಿಯ ಇಂಟಿರಿಯರ್‍ನಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಬೊಲೆರೊದಲ್ಲಿ 1.5 ಎಲ್ 3-ಸಿಲಿಂಡರ್ ಎಮ್ಹಾಕ್ 75 ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿ

ಈ 1.5 ಲೀಟರ್ ಎಂಜಿನ್ ಟಿಯುವಿ ಎಸ್‍ಯುವಿ ಮಾದರಿಯಲ್ಲಿ 75 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಈ ಎಂಜಿನ್ 195 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮಾನ್ಯುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಈ ಹೊಸ ಎಸ್‍ಯುವಿಯು ಈಗಾಗಲೇ ಡೀಲರ್ ಬಳಿ ತಲುಪಿದೆ. ಹೊಸ ಬಿಎಸ್-6 ಮಹೀಂದ್ರಾ ಬೊಲೆರೊ ಬಾಕ್ಸೀ ವಿನ್ಯಾಸವನ್ನು ಹೊಂದಿದೆ. ಹೊಸ ಬೊಲೆರೊ ಎಸ್‍ಯುವಿಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ನೀಡಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು.


Click it and Unblock the Notifications