ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗಳು

ಮಹೀಂದ್ರಾ ಕಂಪನಿಯ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಿದೆ. ಥಾರ್ ಉತ್ತಮ ಯಶಸ್ವಿಯಾಗಿರುವ ಸಮಯದಲ್ಲಿ ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಎಕ್ಸ್‌ಯುವಿ 500 ಮತ್ತು ಸ್ಕಾರ್ಪಿಯೋ ಎಸ್‍ಯುವಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗಳು

ಇದರ ನಡುವೆ ಮಹೀಂದ್ರಾ ಕಂಪನಿಯು ಟಿಯುವಿ300 ಮತ್ತು ಟಿಯುವಿ300 ಫೇಸ್‌ಲಿಫ್ಟ್ ಪ್ಲಸ್ ಎಸ್‍ಯುವಿಗಳನ್ನು ಕೂಡ ಬಿಡುಗಡೆಗೊಳಿಸಲಿದೆ. ಈ ಮಾದರಿಗಳನ್ನು ಈಗಾಗಲೇ ಹಲವಾರು ಬಾರಿ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಮಹೀಂದ್ರಾ ತನ್ನ ಟಿಯುವಿ300 ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರರಿಸುವಲ್ಲಿ ನಿರತವಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗಳು

ಮಹೀಂದ್ರಾ ಕಂಪನಿಯು ಹೊಸ ಟಿಯುವಿ300 ಮತ್ತು ಟಿಯುವಿ300 ಪ್ಲಸ್ ಮಾದರಿಗಳ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಿಲ್ಲ. ಇನ್ನು ಹೊಸ ಎರಡು ಎಸ್‍ಯುವಿಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗಳು

ಇನ್ನು ಟಿಯುವಿ300 ಮುಂಭಾಗ ಫಾಸಿಕವನ್ನು ನವೀಕರಿಸಿದೆ ಎಂದು ಸ್ಪೈ ಚಿತ್ರಗಳಲ್ಲಿ ತಿಳಿದುಬಂದಿದೆ. ಆದರೆ ಒಟ್ಟಾರೆ ಪ್ರೊಫೈಲ್ ಒಂದೇ ಆಗಿರುತ್ತದೆ. ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಕಾಂಪ್ಯಾಕ್ಟ್ ಎಸ್‍ಯುವಿಯ ಹೊರಭಾಗದಲ್ಲಿ ಸಣ್ಣ ಮಟ್ಟದ ಕಾಸ್ಮೆಟಿಕ್ ನವೀಕರಣಗಳನ್ನು ನಡೆಸಿ ಬಿಡುಗಡೆಗೊಳಿಸಬಹುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗಳು

ಹೊಸ ಟಿಯುವಿ300 ಮತ್ತು ಟಿಯುವಿ300 ಪ್ಲಸ್ ಎಸ್‍ಯುವಿಗಳ ಮುಂಭಾಗ ಹೊಸ ಗ್ರಿಲ್ ಸ್ಲಿಮ್ಮರ್ ಸ್ಲ್ಯಾಟ್‌ಗಳು, ನವೀಕರಿಸಿದ ಬಂಪರ್ ವಿನ್ಯಾಸ, ಸ್ಪೋರ್ಟಿಯರ್ ಏರ್ ಡ್ಯಾಮ್, ಹೊಸ ಹೆಡ್‌ಲ್ಯಾಂಪ್‌ಗಳು ಮತ್ತು ಹಿಂಭಾಗ ಟೈಲ್ ಲ್ಯಾಂಪ್‌ಗಳು ಹೊಂದಿರಲಿವೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗಳು

ಹೊಸ ಟಿಯುವಿ300 ಎಸ್‍ಯುವಿಗಳ ಇಂಟಿರಿಯರ್ ನಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಇನ್ಪೋಟೇನೆಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಇದರೊಂದಿಗೆ ಈ ಎಸ್‍ಯುವಿಗಳು ನೂತನ ಪೀಚರ್ ಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗಳು

ಮಹೀಂದ್ರಾ ಟಿಯುವಿ300 ಕ್ಯಾಂಪಕ್ಟ್ ಎಸ್‍ಯುವಿಯಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿರಲಿದೆ. ಈ ಎಂಜಿನ್ 3,750 ಆರ್‌ಪಿಎಂನಲ್ಲಿ 100 ಬಿಹೆಚ್‌ಪಿ ಪವರ್ ಮತ್ತು 1,600 ಆರ್‌ಪಿಎಂನಲ್ಲಿ 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗಳು

ಇನ್ನು ಟಿಯುವಿ 300 ಪ್ಲಸ್ ಎಸ್‍ಯುವಿಯು ಕೂಡ ಹಿಂದಿನ ಮಾದರಿಯಂತೆ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಎಂಜಿನ್ 138 ಬಿಹೆಚ್‌ಪಿ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್ ಎಸ್‍ಯುವಿಗಳು

ಮಹೀಂದ್ರಾ ಕಂಪನಿಯು ಟಿಯುವಿ300 ಎಸ್‍ಯುವಿಯನ್ನು 2015ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇನ್ನು ಹಲವಾರು ಹೊಸತನದಿಂದ ಟಿಯುವಿ300 ಮತ್ತು ಟಿಯುವಿ300 ಪ್ಲಸ್ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Mahindra TUV300 and TUV300 Plus Facelift Launching Very Soon. Read In Kananda.
Story first published: Monday, November 23, 2020, 16:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X