ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿ

ಜನಪ್ರಿಯ ವಾಹನ ಉತ್ಪಾದನಾ ಕಂಪನಿಯಾದ ಮಹೀಂದ್ರಾ ತನ್ನ ಸರಣಿಯಲ್ಲಿರುವ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ, ಮಹೀಂದ್ರಾ ಕಂಪನಿಯು ಈಗಾಗಲೇ ಹಲವು ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿ

ಮಹೀಂದ್ರಾ ತನ್ನ ಟಿಯುವಿ300 ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರರಿಸುವಲ್ಲಿ ನಿರತವಾಗಿದೆ. ಮಹೀಂದ್ರಾ ಕಂಪನಿಯು ತನ್ನ ಹೊಸ ಟಿಯುವಿ300 ಎಸ್‍ಯುವಿಯನ್ನು ಭಾರತೀಯ ರಸ್ತೆಗಳಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದೆ. ಈ ಮಹೀಂದ್ರಾ ಟಿಯುವಿ300 ಕಾಂಪ್ಯಾಕ್ಟ್ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಶೀಘ್ರದಲ್ಲೇ ಹೊಸ ಮಹೀಂದ್ರಾ ಟಿಯುವಿ 300 ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ಟೆವೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿ

ಮಹೀಂದ್ರಾ ಟಿಯುವಿ300 ಅನ್ನು 2015ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಈ ಕಾಂಪ್ಯಾಕ್ಟ್ ಎಸ್‍ಯುವಿಯನ್ನು 2019ರಲ್ಲಿ ನವೀಕರಿಸಿತು. ಈ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಕಲವು ಕಾಸ್ಮೆಟಿಕ್ ಬದಲಾವಣೆಗಳ ನವೀಕರಣಗಳನ್ನು ಮಾಡಿದ್ದರು. ಜೊತೆಗೆ ಕೆಲವು ಹೊಸ ಫೀಚರ್ ಗಳನ್ನು ಅಳವಡಿಸಿದ್ದರು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿ

ಇನ್ನು ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಕಾಂಪ್ಯಾಕ್ಟ್ ಎಸ್‍ಯುವಿಯ ಹೊರಭಾಗದಲ್ಲಿ ಸಣ್ಣ ಮಟ್ಟದ ಕಾಸ್ಮೆಟಿಕ್ ನವೀಕರಣಗಳನ್ನು ನಡೆಸಿ ಬಿಡುಗಡೆಗೊಳಿಸಬಹುದು. ಹೊಸ ಟಿಯುವಿ300 ಎಸ್‍ಯುವಿಯ ಮುಂಭಾಗ ಹೊಸ ಗ್ರಿಲ್ ಸ್ಲಿಮ್ಮರ್ ಸ್ಲ್ಯಾಟ್‌ಗಳು, ನವೀಕರಿಸಿದ ಬಂಪರ್ ವಿನ್ಯಾಸ, ಸ್ಪೋರ್ಟಿಯರ್ ಏರ್ ಡ್ಯಾಮ್, ಹೊಸ ಹೆಡ್‌ಲ್ಯಾಂಪ್‌ಗಳು ಮತ್ತು ಹಿಂಭಾಗ ಟೈಲ್ ಲ್ಯಾಂಪ್‌ಗಳು ಹೊಂದಿರಲಿವೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿ

ಹೊಸ ಟಿಯುವಿ300 ಎಸ್‍ಯುವಿಗಳ ಇಂಟಿರಿಯರ್ ನಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಇನ್ಪೋಟೇನೆಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಇದರೊಂದಿಗೆ ಈ ಎಸ್‍ಯುವಿಗಳು ನೂತನ ಪೀಚರ್ ಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿ

ಮಹೀಂದ್ರಾ ಟಿಯುವಿ300 ಕ್ಯಾಂಪಕ್ಟ್ ಎಸ್‍ಯುವಿಯಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 3,750 ಆರ್‌ಪಿಎಂನಲ್ಲಿ 100 ಬಿಹೆಚ್‌ಪಿ ಪವರ್ ಮತ್ತು 1,600 ಆರ್‌ಪಿಎಂನಲ್ಲಿ 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿ

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಮಹೀಂದ್ರಾ ಟಿಯುವಿ300 ಕ್ಯಾಂಪಕ್ಟ್ ಎಸ್‍ಯುವಿ ಬಾಕ್ಸೀ ವಿನ್ಯಾಸವನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿ

ಇನ್ನು ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಎಕ್ಸ್‌ಯುವಿ 500 ಮತ್ತು ಸ್ಕಾರ್ಪಿಯೋ ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಲಾಗಿದೆ. ಹೊಸ ತಲೆಮಾರಿನ ಎಕ್ಸ್‌ಯುವಿ 500 ಮತ್ತು ಸ್ಕಾರ್ಪಿಯೋ ಎಸ್‍ಯುವಿಗಳ ಬಿಡುಗಡೆಯನ್ನು ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಲಾಗಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿ

ಮಹೀಂದ್ರಾ ಕಂಪನಿಯು ಟಿಯುವಿ300 ಎಸ್‍ಯುವಿಯನ್ನು 2015ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಎಸ್‍ಯುವಿಯ ಬಾಕ್ಸೀ ವಿನ್ಯಾಸವು ಜನಸಾಮಾನ್ಯರನ್ನು ಸೆಳೆಯುವಲ್ಲಿ ಸಣ್ಣ ಮಟ್ಟದ ವೈಫಲ್ಯವನ್ನು ಕಂಡಿದೆ. ಇನ್ನು ಈ ಬಾರಿ ಹಲವಾರು ಹೊಸತನದಿಂದ ಈ ಕ್ಯಾಂಪಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Mahindra TUV300 BS6 Spotted Testing Again Ahead Of Launch. Read In Kannada.
Story first published: Tuesday, October 13, 2020, 12:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X