ಕರೋನಾ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚು ಡಿಮ್ಯಾಂಡ್

ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಜೀವನಶೈಲಿಯಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಆಟೋ ಉದ್ಯಮವು ಕೂಡಾ ಹಲವಾರು ಬದಲಾವಣೆಯೊಂದಿಗೆ ಉದ್ಯಮ ವ್ಯವಹಾರಗಳನ್ನು ಮುನ್ನಡೆಸುವುದು ಅನಿವಾರ್ಯವಾಗಿ ಪರಿಣಮಿಸಿದೆ.

ಕರೋನಾ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚು ಡಿಮ್ಯಾಂಡ್

ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಕರೋನಾ ವೈರಸ್ ಅನ್ನು ಮಟ್ಟ ಹಾಕುವುದಕ್ಕಾಗಿ ಹಂತ ಹಂತವಾಗಿ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗಾರಿಕಾ ವಲಯಕ್ಕೆ ಇದೀಗ ಷರತ್ತುಬದ್ದ ವಿನಾಯ್ತಿಗಳನ್ನು ಘೋಷಿಸಿದ್ದು, ಆಟೋ ಕಂಪನಿಗಳು ಕೂಡಾ ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿವೆ.

ಕರೋನಾ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚು ಡಿಮ್ಯಾಂಡ್

ವಾಹನ ಉತ್ಪಾದನಾ ಘಟಕಗಳಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗ ಮರುಚಾಲನೆ ನೀಡಿರುವ ಆಟೋ ಕಂಪನಿಗಳ ಇದಕ್ಕಾಗಿಯೇ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸೋಂಕು ಹರಡದಂತೆ ಗರಿಷ್ಠ ಎಚ್ಚರಿಕೆ ವಹಿಸುತ್ತಿವೆ.

ಕರೋನಾ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚು ಡಿಮ್ಯಾಂಡ್

ಉತ್ಪಾದನಾ ಘಟಕಗಳಲ್ಲಿ ಶೇ.50ಕ್ಕಿಂತ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆಗೆ ಗುಣಮಟ್ಟದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿ ಬಳಕೆ ಮಾಡುತ್ತಿವೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಕರೋನಾ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚು ಡಿಮ್ಯಾಂಡ್

ಹಾಗೆಯೇ ಅಧಿಕೃತ ವಾಹನಗಳ ಮಾರಾಟ ಮಳಿಗೆಗಳಲ್ಲೂ ಹೆಚ್ಚಿನ ಮಟ್ಟದ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದ್ದು, ನಿಯಮಿತವಾಗಿ ಟೆಸ್ಟಿಂಗ್ ವಾಹನಗಳ ಸ್ವಚ್ಚತೆ, ಸಿಬ್ಬಂದಿಯ ಆರೋಗ್ಯ ತಪಾಸಣೆ, ಸಿಬ್ಬಂದಿ ನಡುವೆ ಸಾಮಾಜಿಕ ಅಂತರ, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್ ಶೀಲ್ಡ್ ಬಳಕೆಯನ್ನು ಕಡ್ಡಾಯಗೊಳಿಸಿದೆ.

ಕರೋನಾ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚು ಡಿಮ್ಯಾಂಡ್

ಇನ್ನು ವಾಹನ ಮಾರಾಟ ಪ್ರಕ್ರಿಯೆಯನ್ನು ಈ ಹಿಂದೆ ನೇರವಾಗಿ ಶೋರೂಂಗಳಲ್ಲೇ ಪತ್ರವ್ಯವಹಾರ ಕೈಗೊಳ್ಳುತ್ತಿದ್ದ ಆಟೋ ಕಂಪನಿಗಳು ಇದೀಗ ಹೊಸ ಮಾರ್ಗ ಕಂಡುಕೊಂಡಿದ್ದು, ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಮುಗಿಸಿ ಗ್ರಾಹಕರ ಮನೆ ಬಾಗಿಲಿಗೆಯೇ ವಾಹನಗಳನ್ನು ವಿತರಣೆ ಮಾಡುತ್ತಿವೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಕರೋನಾ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚು ಡಿಮ್ಯಾಂಡ್

ಈ ವೇಳೆಯೂ ಗ್ರಾಹಕರಿಗೆ ಗರಿಷ್ಠ ಸುರಕ್ಷತೆಯೊಂದಿಗೆ ವಾಹನಗಳನ್ನು ವಿತರಣೆ ಮಾಡಲಿರುವ ಆಟೋ ಕಂಪನಿಗಳು ವಿತರಣೆಗೂ ಮುನ್ನ ನಂಜು ನಿರೋಧಕ ರಸಾಯನಿಕಗಳಿಂದ ಸ್ವಚ್ಛಗೊಳಿಸಿದ ನಂತರವೇ ವಿತರಣೆ ಮಾಡುವುದನ್ನು ಕಡ್ಡಾಯಗೊಳಿಸಿದೆ.

ಕರೋನಾ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚು ಡಿಮ್ಯಾಂಡ್

ಇದರಿಂದ ಗ್ರಾಹಕರು ಆಟೋ ಕಂಪನಿಗಳ ಹೊಸ ಕ್ರಮ ಮಕ್ತವಾಗಿ ಸ್ವಾಗತಿಸುತ್ತಿದ್ದು, ಶೇ.70ಕ್ಕಿಂತಲೂ ಹೆಚ್ಚು ಗ್ರಾಹಕರು ಇದೀಗ ಆನ್‌ಲೈನ್ ಮೂಲಕವೇ ವಾಹನ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿಯೇ ಹೊಸ ಪ್ಲ್ಯಾಟ್‌ಫಾರ್ಮ್ ತೆರಿದಿರುವ ಆಟೋ ಕಂಪನಿಗಳು ವಾಹನ ಖರೀದಿಯನ್ನು ಮತ್ತಷ್ಟು ಸರಳಗೊಳಿಸಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಕರೋನಾ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚು ಡಿಮ್ಯಾಂಡ್

ಈ ಹಿಂದೆ ವಾಹನ ಖರೀದಿಗೂ ಮಾರಾಟ ಮಳಿಗೆಗಳಿಗೆ ಖದ್ದು ಭೇಟಿ ವಾಹನ ಖರೀದಿಗೆ ಆದ್ಯತೆ ನೀಡುತ್ತಿದ್ದ ಗ್ರಾಹಕರೇ ಇದೀಗ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ ಅತಿ ಸರಳ ಮತ್ತು ಸುರಕ್ಷಾ ದೃಷ್ಠಿಯಿಂದ ಉತ್ತಮ ಕ್ರಮ ಎನ್ನುವ ಅಭಿಪ್ರಾಯವು ಆಟೋ ಡೀಲರ್ಸ್‌ಗಳ ಅಧ್ಯಯನದಲ್ಲಿ ಈ ಮಾಹಿತಿಯು ಬಹಿರಂಗವಾಗಿದೆ.

Most Read Articles

Kannada
English summary
New Survey 70 percent car buyer will not visit dealership after lockdown details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X