ಹೊಸ ಜನಪ್ರಿಯ ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಸರಣಿಯಲ್ಲಿರುವ ಆಯ್ದ ಜನಪ್ರಿಯ ಮಾದರಿಗಳಿಗೆ ಭರ್ಜರಿ ರಿಯಾಯಿತಿ ಮತ್ತು ವಿಶೇಷ ಆಫರ್ ಗಳನ್ನು ಘೋಷಿಸಿದೆ. ಟಾಟಾ ಕಂಪನಿಯು ಆಯ್ದ ಮಾದರಿಗಳಿಗೆ ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್ ಗಳನ್ನು ನೀಡಿದೆ.

ಹೊಸ ಜನಪ್ರಿಯ ಟಾಟಾ ಕಾರುಗಳಿಗೆ ಭರ್ಜರಿ ರಿಯಾಯಿತಿ

ಇದರ ಜೊತೆಗೆ ಟಾಟಾ ಮೋಟಾರ್ಸ್ ಕರೋನಾ ವಾರಿಯರ್ಸ್‌ಗಳಾಗಾಗಿ ಆಯ್ದ ಮಾದರಿಗಳಿಗೆ ವಿಶೇಷ ರಿಯಾಯಿತಿಗಳನ್ನು ಸಹ ನೀಡಿದೆ. ಖರೀದಿದಾರರು ಬ್ರ್ಯಾಂಡ್‌ನ ಡಿಜಿಟಲ್ ಆನ್‌ಲೈನ್ ಮಾರಾಟದ ಪ್ಲಾಟ್‌ಫಾರ್ಮ್ ಅನ್ನು ಬಳಿಸಿ ಈ ವಿಶೇಷ ಆಫರ್ ಗಳನ್ನು ಪಡೆಯಬಹುದು. ಈ ಭರ್ಜರಿ ಆಫರ್ ಗಳು ಜೂನ್ 30ರವರೆಗೆ ಲಭ್ಯವಿರುತ್ತದೆ. ಈ ತಿಂಗಳ ವಿಶೇಷ ರಿಯಾಯಿತಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಹೊಸ ಜನಪ್ರಿಯ ಟಾಟಾ ಕಾರುಗಳಿಗೆ ಭರ್ಜರಿ ರಿಯಾಯಿತಿ

ಟಾಟಾ ಟಿಯಾಗೋ

ಟಾಟಾ ಟಿಯಾಗೋ ಬ್ರ್ಯಾಂಡ್‌ನ ಸರಣಿಯಲ್ಲಿ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಈ ಹೊಸ ಟಾಟಾ ಟಿಯಾಗೋ ಕಾರಿಗೆ ಒಟ್ಟು ರೂ.30,000 ಗಳವರೆಗೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗಿದೆ. ಇನ್ನು ನಿಮ್ಮ ಹಳೆಯ ಕಾರನ್ನು ಡೀಲರ್ ಮಾರಾಟ ಮಾಡುವಾಗ ರೂ.15,000 ನಗದು ರಿಯಾಯಿತಿಯನ್ನು ಘೋಷಿಸಲಾಗಿದೆ.

MOST READ: ಕರೋನಾ ವಾರಿಯರ್ಸ್‌ ಕಾರುಗಳಿಗೆ ಸ್ಪೆಷಲ್ ಸರ್ವೀಸ್ ತೆರೆದ ಟಾಟಾ ಮೋಟಾರ್ಸ್

ಹೊಸ ಜನಪ್ರಿಯ ಟಾಟಾ ಕಾರುಗಳಿಗೆ ಭರ್ಜರಿ ರಿಯಾಯಿತಿ

ಇದರೊಂದಿಗೆ ರೂ.10,000ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದೆ. ಇನ್ನು ಕರೋನಾ ವಾರಿಯರ್ಸ್‌ಗಳಿಗೆ ರೂ.5,000 ಗಳವರೆಗೆ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ.

ಹೊಸ ಜನಪ್ರಿಯ ಟಾಟಾ ಕಾರುಗಳಿಗೆ ಭರ್ಜರಿ ರಿಯಾಯಿತಿ

ಟಾಟಾ ಟಿಗೋರ್

ಟಾಟಾ ಟಿಗೋರ್ ಕಾರಿಗೆ ಒಟ್ಟು ರೂ.45,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ರೂ.20,000 ನಗದು ರಿಯಾಯಿತಿ ಮತ್ತು ರೂ.20,000 ಗಳ ಎಕ್ಸ್‌ಚೆಂಜ್ ಬೋನಸ್ ಅನ್ನು ಸೇರಿದೆ. ಇನ್ನು ರೂ.5,000 ಗಳವರೆಗೆ ವಿಶೇಷ ರಿಯಾಯಿತಿಯನ್ನು ಕರೋನಾ ವಾರಿಯರ್ಸ್‌ಗಳಿಗೆ ನೀಡಲಾಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಜನಪ್ರಿಯ ಟಾಟಾ ಕಾರುಗಳಿಗೆ ಭರ್ಜರಿ ರಿಯಾಯಿತಿ

ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಬ್ರಾಂಡ್‌ನ ಪೋರ್ಟ್ಫೋಲಿಯೊದಲ್ಲಿ ಅತ್ಯಂತ ಯಶಸ್ವಿ ಎಸ್‍ಯುವಿ ಮಾದರಿಗಳಲ್ಲಿ ಒಂದಾಗಿದೆ. ಈ ಎಸ್‍ಯುವಿಗೆ ನಗದು ರಿಯಾಯಿತಿ ಮತ್ತು ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಲಾಗಿಲ್ಲ. ಆದರೆ ನಮ್ಮ ಹೆಮ್ಮೆಯ ಕರೋನಾ ವಾರಿಯರ್ಸ್‌ಗಳಿಗೆ ರೂ.3,000 ಗಳವರೆಗೆ ನಗದು ರಿಯಾಯಿತಿಯನ್ನು ಘೋಷಿಸಿದೆ.

ಹೊಸ ಜನಪ್ರಿಯ ಟಾಟಾ ಕಾರುಗಳಿಗೆ ಭರ್ಜರಿ ರಿಯಾಯಿತಿ

ಟಾಟಾ ಹ್ಯಾರಿಯರ್

ಟಾಟಾ ಮೋಟಾರ್ಸ್ ಕಂಪನಿಯು ಜನಪ್ರಿಯ ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಈ ತಿಂಗಳು ಒಟ್ಟು ರೂ.35,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ಯಾವುದೇ ನಗದು ರಿಯಾಯಿತಿಯನ್ನು ಹೊಂದಿಲ್ಲ.ಆದರೆ ನಿಮ್ಮ ಹಳೆಯ ವಾಹನವನ್ನು ಡೀಲರ್ ಗೆ ನೀಡಿ ಎಕ್ಸ್‌ಚೆಂಜ್ ಮಾಡಿಕೊಂಡರೆ ನಿಮಗೆ ರೂ.30,000 ಬೋನಸ್ ಸಿಗುತ್ತದೆ. ಅರ್ಹತೆಗೆ ಅನುಗುಣವಾಗಿ ರೂ.5,000 ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಹೊಸ ಜನಪ್ರಿಯ ಟಾಟಾ ಕಾರುಗಳಿಗೆ ಭರ್ಜರಿ ರಿಯಾಯಿತಿ

ಟಾಟಾ ಆಲ್‌ಟ್ರೊಜ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಆಯ್ದಾ ಜನಪ್ರಿಯ ಮಾದರಿಗಳಿಗೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದೆ, ಆದರೆ ಜನಪ್ರಿಯ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಗೆ ಯಾವುದೇ ರಿಯಾಯಿತಿಯನ್ನು ಘೋಷಣೆ ಮಾಡಿಲ್ಲ. ಆದರೆ ಕೆಲವು ಡೀಲರ್ ಗಳ ಬಳಿ ಸಣ್ಣ ಮಟ್ಟದ ರಿಯಾಯಿತಿಗಳು ಲಭ್ಯವಿರಬಹುದು.

ಹೊಸ ಜನಪ್ರಿಯ ಟಾಟಾ ಕಾರುಗಳಿಗೆ ಭರ್ಜರಿ ರಿಯಾಯಿತಿ

ಟಾಟಾ ಮೋಟಾರ್ಸ್ ಕಂಪನಿಯು ಮಾರಾಟವನ್ನು ಹೆಚ್ಚಿಸಲು ಆಯ್ದ ಜನಪ್ರಿಯ ಮಾದರಿಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಭರ್ಜರಿ ರಿಯಾಯಿತಿಯನ್ನು ನೀಡಿರುವುದರಿಂದ ಕಾರುಗಳ ಮಾರಾಟವನ್ನು ಹೆಚ್ಚಿಸಲು ಸಹಾಯವಾಗಬಹುದು.

Most Read Articles

Kannada
English summary
Tata Cars Offers Discounts, Exchange Bonuses & Other Benefits In June 2020. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X