Just In
Don't Miss!
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಟಿಗೋರ್ ಟರ್ಬೋ-ಪೆಟ್ರೋಲ್ ವೆರಿಯೆಂಟ್
ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರಲ್ಲಿ ಪೂರ್ಣ ಪ್ರಮಾಣದ ಎಸ್‍ಯುವಿಗಳು ಮತ್ತು ಮೈಕ್ರೋ ಎಸ್‌ಯುವಿಗಳನ್ನು ಒಳಗೊಂಡಿವೆ. ಟಾಟಾ ಹೊಸ ಕಾರುಗಳನ್ನು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಟಾಟಾ ಮೋಟಾರ್ಸ್ ಕಂಪನಿಯು ಇದರ ನಡುವೆ ತನ್ನ ಟಿಗೋರ್ ಮಾದರಿಯನ್ನು ಟರ್ಬೋ ಪೆಟ್ರೋಲ್ ವೆರಿಯೆಂಟ್ ಆಗಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಟಾಟಾ ಟೊಗೋರ್ ಟರ್ಬೋ ಪೆಟ್ರೋಲ್ ವೆರಿಯೆಂಟ್ ಇತ್ತೀಚೆಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡಿಸಿದೆ. ಈ ಹೊಸ ಟಾಟಾ ಟೊಗೋರ್ ಟರ್ಬೋ ಪೆಟ್ರೋಲ್ ವೆರಿಯೆಂಟ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ರಶ್ಲೇನ್ ಬಹಿರಂಗಪಡಿಸಿದೆ.

2021 ಟೊಗೋರ್ ಕಾಂಪ್ಯಾಕ್ಟ್-ಸೆಡಾನ್ ಸ್ಟ್ಯಾಂಡರ್ಡ್ ಮಾಡೆಲ್ ರೂಪಾಂತರಗಳನ್ನು ಹೊರತುಪಡಿಸಿ ಹಲವಾರು ಬದಲಾವಣೆಗಳನ್ನು ಒಳಗೊಂಡಿರಬಹುದು. ಫಾಸ್ಟ್‌ಬ್ಯಾಕ್ ವಿನ್ಯಾಸಗೊಳಿಸಿದ ಕಾರಿನ ನೋಟವನ್ನು ಹೆಚ್ಚಿಸಲು ಆಕರ್ಷಕ ಬಣ್ಣದಿಂದ ಕೂಡಿರಬಹುದು.
MOST READ: ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಟಾಟಾ ಮೋಟಾರ್ಸ್ ಟಿಗೋರ್ ಮಾದರಿಯ ಟರ್ಬೊ-ಪೆಟ್ರೋಲ್ ವೆರಿಯೆಂಟ್ ಅನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಕಂಪನಿಯು ಟಿಗೋರ್ ಜೆಟಿಪಿ ಎಂಬ ಕಾಂಪ್ಯಾಕ್ಟ್-ಸೆಡಾನ್ ಕೂಡ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿತ್ತು.

ಅದು ಬಿಎಸ್ 4 ಪ್ರೇರಿತ 1.2-ಲೀಟರ್ ಎಂಜಿನ್ 14 ಬಿಹೆಚ್ಪಿ ಪವರ್ ಮತ್ತು 150 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತಿತ್ತು. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿತ್ತು. ಆದರೆ ಟಿಗೋರ್ ಜೆಟಿಪಿ ಅಥವಾ ಟರ್ಬೋ ವೆರಿಯೆಂಟ್ ಅನ್ನು ಮಾರಾಟದಲ್ಲಿ ಕುಸಿತವಾಗಿರುವುದರಿಂದ ಭಾರತದಲ್ಲಿ ಸ್ಥಗಿತಗೊಳಿಸಿದರು.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಆದರೆ ಮುಂಬರುವ ಟಿಗೋರ್ ವೆರಿಯೆಂಟ್ 1.2-ಲೀಟರ್ ಎಂಜಿನ್ ಅನ್ನು ಹೊಂದುವ ಸಾಧ್ಯತೆಯಿಲ್ಲ, ಏಕೆಂದರೆ ಟಾಟಾ ಮೋಟಾರ್ಸ್ ಮತ್ತೆ ಜೆಟಿಪಿ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ, ಹೊಸ ಸಣ್ಣ-ಸಾಮರ್ಥ್ಯದ ಯುನಿಟ್ ಅನ್ನು ಅಳವಡಿಸಬಹುದು.

ಇನ್ನು 1.0-ಲೀಟರ್, ಮೂರು-ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಪರ್ಫಾಮೆನ್ಸ್ ಮತ್ತು ಮೈಲೇಜ್ ನಡುವೆ ಇದು ಉತ್ತಮ ಸಮತೋಲನವನ್ನು ನೀಡುತ್ತದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಟಾಟಾ ಮೋಟಾರ್ಸ್ ತನ್ನ 1.0-ಲೀಟರ್ ಟರ್ಬೊ-ಪೆಟ್ರೋಲ್ ಯುನಿಟ್ ಅನ್ನು ಇದರಲ್ಲಿ ಅಳವಡಿಸಬಹುದು.
MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಬಿಎಸ್ 6 ನವೀಕರಣದ ನಂತರ ಸ್ಟ್ಯಾಂಡರ್ಡ್ ಟಿಗೋರ್ ಕಾರಿನಲ್ಲಿ ಒಂದೇ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಲೀಟರ್, ಮೂರು-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 85 ಬಿಹೆಚ್ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಎಎಂಟಿ ಅನ್ನು ಜೋಡಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ, ಟರ್ಬೊ-ಪೆಟ್ರೋಲ್ ಎಂಜಿನ್ ಭಾರತೀಯ ಮಾರುಕಟ್ಟೆಯಲ್ಲಿ ಕಾರು ಖರೀದಿದಾರರಿಗೆ ಜನಪ್ರಿಯ ಆಯ್ಕೆಯಾಗಿದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ತನ್ನ ಟಿಗೋರ್ ಮಾದರಿಯನ್ನು ಟರ್ಬೋ ಪೆಟ್ರೋಲ್ ವೆರಿಯೆಂಟ್ ನಲ್ಲಿ ಬಿಡುಗಡೆಗೊಳಿಸಲು ಟಾಟಾ ಮೋಟಾರ್ಸ್ ಮುಂದಾಗಿದೆ.