Just In
Don't Miss!
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- News
ಬಳ್ಳಾರಿ ಸಿಇಒ ಮಾದರಿ ಕೆಲಸ; ವಾಪಸ್ ಆಗಬೇಕಿದ್ದ ಅನುದಾನ ಬಳಕೆ
- Movies
ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಭಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ರ ಟೊಯೊಟಾ ಸಿ-ಎಚ್‌ಆರ್ ಜಿಆರ್ ಸ್ಪೋರ್ಟ್ ಬಿಡುಗಡೆ
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಸಿ-ಹೆಚ್ಆರ್ ಜಿಆರ್ ಸ್ಪೋರ್ಟ್ ಕ್ರಾಸ್ಒವರ್ ಅನ್ನು ಬಿಡುಗಡೆಗೊಳಿಸಿದೆ. ಇದು ಟೊಯೊಟಾ ಸಿ-ಹೆಚ್ಆರ್ ಮಾದರಿಯ ಜಿಆರ್ ಸ್ಪೋರ್ಟ್ ಎಡಿಷನ್ ಆಗಿದೆ.

ಟೊಯೊಟಾ ಕಂಪನಿಯು ಸಿ-ಎಚ್‌ಆರ್ ಸ್ಟ್ಯಾಂಡರ್ಡ್ ಮಾದರಿಯ ಭಾರತದಲ್ಲಿ ಈ ಗಾಗಲೇ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಆದರೆ ಟೊಯೊಟಾ ಕಂಪನಿಯು ಸಿ-ಎಚ್‌ಆರ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಸ್ಟ್ಯಾಂಡರ್ಡ್ ಸಿ-ಎಚ್‌ಆರ್‌ಗೆ ಹೋಲಿಸಿದರೆ ಜಿಆರ್ ಸ್ಪೋರ್ಟ್ ಹೆಚ್ಚಿನ ಪ್ರೀಮಿಯಂ ಆಗಿದೆ. ಇದರಿಂದ ಸಿ-ಎಚ್‌ಆರ್ ಜಿಆರ್ ಸ್ಪೋರ್ಟ್ ಎಡಿಷನ್ ಬೆಲೆಯು ದುಬಾರಿಯಾಗಿದೆ.

ಸಾಮಾನ್ಯ ಮಾದರಿಗೆ ಹೋಲಿಸಿದರೆ, 2021ರ ಟೊಯೊಟಾ ಸಿ-ಎಚ್‌ಆರ್ ಜಿಆರ್ ಸ್ಪೋರ್ಟ್ ಕಾರಿನ ಒಳಗೆ ಮತ್ತು ಹೊರಗೆ ಹಲವಾರು ಕಾಸ್ಮೆಟಿಕ್ ಮತ್ತು ಯಾಂತ್ರಿಕ ಒಳಗೆ ಮತ್ತು ಹೊರಗೆ ಹಲವಾರು ಅಪ್ದೇಟ್ ಗಳನ್ನು ಪಡೆದುಕೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಹೊಸ ಟೊಯೊಟಾ ಸಿ-ಎಚ್‌ಆರ್ ಜಿಆರ್ ಸ್ಪೋರ್ಟ್ ಮಾದರಿ ಕಂಪನಿಯ ಗಾಜೋ ರೇಸಿಂಗ್ ಸರಣಿಯ ಕಾರುಗಳಿಂದ ಸ್ಫೂರ್ತಿ ಪಡೆದುಕೊಂಡಿದೆ. ಹೊಸ ಟೊಯೊಟಾ ಸಿ-ಎಚ್‌ಆರ್ ಜಿಆರ್ ಸ್ಪೋರ್ಟ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಈ ಹೊಸ ಟೊಯೊಟಾ ಸಿ-ಎಚ್‌ಆರ್ ಜಿಆರ್ ಸ್ಪೋರ್ಟ್ ವಿನ್ಯಾಸದ ಬಗ್ಗೆ ಹೇಳುವುದಾದರೆ. ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಫಾಗ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಇನ್ನು ಸ್ಪೋರ್ಟಿಯರ್ ಲೋವರ್ ಗ್ರಿಲ್ ವಿಭಾಗ, ಏರೋ ಲಿಪ್ ಹೊಂದಿರುವ ಹೊಸ ಫ್ರಂಟ್ ಬಂಪರ್ ಮತ್ತು ಪ್ರಮುಖ ಅಡ್ಡಲಾಗಿರುವ ಬಾರ್ ಅನ್ನು ಹೊಂದಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಇನ್ನು ಈ ಸಿ-ಎಚ್‌ಆರ್ ಜಿಆರ್ ಸ್ಪೋರ್ಟ್ ಕಾರಿನಲ್ಲಿ 225/45 ಟೈರ್‌ಗಳಲ್ಲಿ 19 ಇಂಚಿನ ಅಲಾಯ್ ವೀಲ್‌ಗಳ ಒಂದು ಸೆಟ್ ಹೊಂದಿದೆ. ಇನ್ನು ಈ ಕಾರಿನಲ್ಲಿ ಎಲ್‌ಇಡಿ ಲೈಟಿಂಗ್, ಜಿಆರ್ ಲೋಗೊ ಹೊಂದಿರುವ ಬಿಳಿ ಬ್ರೇಕ್ ಕ್ಯಾಲಿಪರ್‌ಗಳು, ಮುಂಭಾಗದ ಗ್ರಿಲ್‌ನಲ್ಲಿ ಜಿಆರ್ ಲೋಗೊ, ಟೈಲ್‌ಗೇಟ್ ಮತ್ತು ಪಿಯಾನೋ ಬ್ಲ್ಯಾಕ್ ಫಿನಿಶಿಂಗ್ ಹೊಂದಿರುವ ಡೋರ್ ಅನ್ನು ಒಳಗೊಂಡಿದೆ.

ಹೊಸ ಟೊಯೊಟಾ ಸಿ-ಎಚ್‌ಆರ್ ಜಿಆರ್ ಸ್ಪೋರ್ಟ್ ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಲೆದರ್ ಸೀಟುಗಳು, ಪಿಯಾನೋ ಬ್ಲ್ಯಾಕ್ ಅಸ್ಸೆಂಟ್ ಗಳು, ಜಿಆರ್ ಪುಶ್ ಬಟನ್, ಸ್ಪೋರ್ಟಿ ಫ್ರಂಟ್ ಸೀಟುಗಳು ಮತ್ತು ಸಿಲ್ವರ್ ಟ್ರಿಮ್ ಅನ್ನು ಹೊಂದಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಇನ್ನು ಇದರೊಂದಿಗೆ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ರೇನ್ ಸೆನ್ಸಿಂಗ್ ವೈಪರ್ಸ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಕೀ ಲೆಸ್ ಎಂಟ್ರಿ,4.2-ಇಂಚಿನ ಎಂಐಡಿ, ಆರು ಸ್ಪೀಕರ್ ಆಡಿಯೋ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

ಹೊಸ ಟೊಯೊಟಾ ಸಿ-ಎಚ್‌ಆರ್ ಜಿಆರ್ ಸ್ಪೋರ್ಟ್ ಕಾರಿನಲ್ಲಿ ಸುರಕ್ಷತೆಗಾಗಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್ ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ 1.8-ಲೀಟರ್ ಹೈಬ್ರಿಡ್ ಪೆಟ್ರೋಲ್ ಯುನಿಟ್ ಅನ್ನು ಅಳವಡಿಸಿದ್ದಾರೆ. ಇದು 128 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹೊಸ ಟೊಯೊಟಾ ಸಿ-ಎಚ್‌ಆರ್ ಜಿಆರ್ ಸ್ಪೋರ್ಟ್ ಐದು ಬಣ್ಣಗಳಲ್ಲಿ ಲಭ್ಯವಿರುತ್ತದೆ.