ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಟೊಯೊಟಾ ಸಿ-ಹೆಚ್‌ಆರ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ಮತ್ತು ಕ್ರಾಸ್‌ಒವರ್‌ಗಳು ಬಹಳ ಜನಪ್ರಿಯವಾಗಿವೆ, ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಎಸ್‍ಯುವಿ ವಿಭಾಗದ ವಾಹನಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಟೊಯೊಟಾ ಸಿ-ಹೆಚ್‌ಆರ್ ಕಾರು

ಇತ್ತೀಚೆಗೆ ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಅರ್ಬನ್ ಕ್ರೂಸರ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಇನ್ನು ಟೊಯೊಟಾ ಫಾರ್ಚೂನರ್ ಮತ್ತು ಅರ್ಬನ್ ಕ್ರೂಸರ್ ನಡುವಿನ ದೊಡ್ಡ ಅಂತರವನ್ನು ತುಂಬಲು ಟೊಯೊಟಾ ಶೀಘ್ರದಲ್ಲೇ ಮತ್ತೊಂದು ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಿ-ಹೆಚ್‌ಆರ್ ಮಿಡ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಟೊಯೊಟಾ ಸಿ-ಹೆಚ್‌ಆರ್ ಕಾರು

ಟೊಯೊಟಾ ಸಿ-ಹೆಚ್‌ಆರ್ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಿದೆ. ಹೊಸ ಟೊಯೊಟಾ ಸಿ-ಹೆಚ್‌ಆರ್ ಎಸ್‍ಯುವಿ ಮತ್ತೊಮ್ಮೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಈ ಎಸ್‍ಯುವಿಯ ಸ್ಪೈ ಚಿತ್ರಗಳು ಬಹಿರಂಗವಾಗಿವೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಟೊಯೊಟಾ ಸಿ-ಹೆಚ್‌ಆರ್ ಕಾರು

ಟೊಯೊಟಾ ಸಿ-ಹೆಚ್‌ಆರ್ ಮಿಡ್ ಎಸ್‍ಯುವಿಯ ಬಾಡಿಯನ್ನು ಕವರ್ ಮಾಡಿ ಸ್ಪಾಟ್ ಟೆಸ್ಟ್ ನಡೆಸಿದೆ. ಆದರೆ ಕಲವು ವಿನ್ಯಾಸ ಅಂಶಗಳನ್ನು ಬಹಿರಂಗವಾಗಿದೆ. ಈ ಟೊಯೊಟಾ ಸಿ-ಹೆಚ್‌ಆರ್ ಮಿಡ್ ಎಸ್‍ಯುವಿ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಟೊಯೊಟಾ ಸಿ-ಹೆಚ್‌ಆರ್ ಕಾರು

ಇನ್ನು ಈ ಎಸ್‍ಯುವಿಯಲ್ಲಿ ಹೆಡ್‌ಲ್ಯಾಂಪ್‌ಗಳು ಅತ್ಯಂತ ತೀಕ್ಷ್ಣ ಮತ್ತು ನಯವಾಗಿ ಕಾಣುತ್ತವೆ. ವಾಹನವು ಕೂಪ್ ತರಹದ ಹಿಂಭಾಗದ ವಿಭಾಗವನ್ನು ಹೊಂದಿದ್ದು, ಇನ್ನು ರೂಫ್ ಮೌಂಟಡ್ ಸ್ಪಾಯ್ಲರ್ ಅನ್ನು ಕೂಡ ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಟೊಯೊಟಾ ಸಿ-ಹೆಚ್‌ಆರ್ ಕಾರು

ಸಿ-ಹೆಚ್‌ಆರ್ ಮಿಡ್ ಎಸ್‍ಯುವಿ ಟೈಲ್‌ಲೈಟ್‌ಗಳು ತೀಕ್ಷ್ಣವಾದವು ಮತ್ತು ಪ್ರಸ್ತುತ ತಲೆಮಾರಿನ ಹೋಂಡಾ ಸಿವಿಕ್ ಮಾದರಿಗೆ ಹೋಲುತ್ತದೆ. ಎಕ್ಸಿಟಿರಿಯರ್ ಸ್ಟೈಲಿಂಗ್ ವಿಷಯದಲ್ಲಿ ಸಿ-ಎಚ್ಆರ್ ಖಂಡಿತವಾಗಿಯೂ ಹೆಡ್-ಟರ್ನರ್ ಆಗಿದೆ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಟೊಯೊಟಾ ಸಿ-ಹೆಚ್‌ಆರ್ ಕಾರು

ಇದನ್ನು ಟಿಎನ್‌ಜಿಎ (ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಅಂತರರಾಷ್ಟ್ರೀಯ-ಸ್ಪೆಕ್ ಸಿ-ಹೆಚ್‌ಆರ್ ಮಾದರಿಯು 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಟೊಯೊಟಾ ಸಿ-ಹೆಚ್‌ಆರ್ ಕಾರು

ಈ ಎಂಜಿನ್ 144 ಬಿಹೆಚ್‍ಪಿ ಪವರ್ ಮತ್ತು ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಂಜಿನ್ ಅನ್ನು ಇಸಿವಿಟಿಗೆ ಜೋಡಿಸಲಾಗಿದೆ. ಇಂಡಿಯಾ-ಸ್ಪೆಕ್ ಹೆಚ್‌ಆರ್ ಎಸ್‍ಯುವಿಗೆ ಸಣ್ಣ ಎಂಜಿನ್ ಅನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ,

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಟೊಯೊಟಾ ಸಿ-ಹೆಚ್‌ಆರ್ ಕಾರು

ಇನ್ನು ಈ ಎಸ್‍ಯುವಿಯಲ್ಲಿ ಬಹುಶಃ ಹೈಬ್ರಿಡ್ ಅಥವಾ ಪ್ಲಗ್-ಇನ್ ಹೈಬ್ರಿಡ್ ಆಯ್ಕೆಯನ್ನು ಕೂಡ ನೀಡಬಹುದು. ಇನ್ನು ಈ ಎಸ್‍ಯುವಿಯಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಜೊತೆ ಸಾಕಷ್ಟು ಪ್ರೀಮಿಯಂ ಫೀಚರ್ ಗಳನ್ನು ಅಳವದಿಸಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಹುನಿರೀಕ್ಷಿತ ಟೊಯೊಟಾ ಸಿ-ಹೆಚ್‌ಆರ್ ಕಾರು

ಸಿ-ಹೆಚ್‌ಆರ್ ಎಸ್‍ಯುವಿಯಲ್ಲಿ ಲೇನ್ ಡಿಪಾರ್ಚರ್ ಅಲರ್ಟ್, ರೋಡ್ ಸೈನ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಇತರ ಫೀಚರ್ ಗಳನ್ನು ಹೊಂದಿರಬಹುದು. ಈ ಸಿ-ಹೆಚ್‌ಆರ್ ಮಿಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಜೀಪ್ ಕಂಪಾಸ್, ಫೋಕ್ಸ್ ವ್ಯಾಗನ್ ಟಿ-ರಾಕ್ ಮತ್ತು ಸ್ಕೋಡಾ ಕರೋಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota C-HR Spied In India Once Again. Read In Kannada.
Story first published: Monday, October 19, 2020, 20:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X