ಭಾರತದಲ್ಲಿ ಯಾರಿಸ್ ಮಾದರಿಯ ಲಿಮಿಟೆಡ್ ಎಡಿಷನ್ ಬಿಡುಗಡೆಗೊಳಿಸಲಿದೆ ಟೊಯೊಟಾ
ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ಇತ್ತೀಚೆಗೆ ಫಾರ್ಚೂನರ್ ಎಸ್‌ಯುವಿಯ ಟಿಆರ್‌ಡಿ ಆವೃತ್ತಿಯನ್ನು ಪರಿಚಯಿಸಿತು. ಇದೀಗ ಟೊಯೊಟಾ ಕಂಪನಿಯು ಹಬ್ಬದ ಸೀಸನ್‌ನಲ್ಲಿ ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ಸಜ್ಜಾಗುತ್ತಿದೆ.

ಇದರಿಂದ ಟೊಯೊಟಾ ಕಂಪನಿಯು ಅನೇಕ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಇನ್ನು ಟೊಯೊಟಾ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಯಾರಿಸ್ ಲಿಮಿಟೆಡ್ ಎಡಿಷನ್ ಬ್ಲ್ಯಾಕ್ ಮಾದರಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ. ಸ್ಟ್ಯಾಂಡರ್ಡ್ ಸಿ-ಸೆಗ್ಮೆಂಟ್ ಸೆಡಾನ್‍ಗೆ ಹೋಲಿಸಿದರೆ ಯಾರಿಸ್ ಲಿಮಿಟೆಡ್ ಎಡಿಷನ್ ಬ್ಲ್ಯಾಕ್ ಹೊರಭಾಗದಲ್ಲಿ ನವೀಕರಣಗಳನ್ನು ಹೊಂದಿರುತ್ತದೆ. ಇದು ಸ್ವಲ್ಪ ಪ್ರೀಮಿಯಂ ಆಗಿರುವುದರಿಂದ ಸಾಮಾನ್ಯ ಮಾದರಿಗಿಂತ ಬೆಲೆಯು ತುಸು ದುಬಾರಿಯಾಗಿರಬಹುದು.

ಯಾರಿಸ್ ಲಿಮಿಟೆಡ್ ಎಡಿಷನ್ ಬ್ಲ್ಯಾಕ್ ಹೆಸರೇ ಸೂಚಿಸುವಂತೆ, ಬ್ಲ್ಯಾಕ್ ಗ್ರಿಲ್, ಮುಂಭಾಗದಲ್ಲಿ ಮತ್ತು ಹಿಂಭಾಗದ ಬಂಪರ್, ಹುಡ್, ಫಾಗ್ ಲ್ಯಾಂಪ್ ಬೆಜೆಲ್ಗಳು, ಒಆರ್‌ವಿಎಂಗಳು ಮತ್ತು ಇತರ ಅಂಶಗಳು ಬ್ಲ್ಯಾಕ್ ಬಣ್ಣದಿಂದ ಕೂಡಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಇನ್ನು ಹೊಸ ಯಾರಿಸ್ ಲಿಮಿಟೆಡ್ ಎಡಿಷನ್ ಬ್ಲ್ಯಾಕ್ ಮಾದರಿಯಲಿ ಸ್ಪೋರ್ಟಿ ಲುಕ್ ನೀಡುವಂತಹ ಹೊಸದಾಗಿ ವಿನ್ಯಾಸಗೊಳಿಸಿದ 15 ಇಂಚಿನ ಅಲಾಯ್ ವ್ಹೀಲ್ ಜೊತೆಗೆ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಅಲಂಕರಿಸಲು ಡೋರ್ ಎಡ್ಜ್ ಲೈಟಿಂಗ್ ಅನ್ನು ಹೊಂದಿದೆ.

ಇನ್ನು ಹೊಸ ಯಾರಿಸ್ ಲಿಮಿಟೆಡ್ ಎಡಿಷನ್ ಬ್ಲ್ಯಾಕ್ ಮಾದರಿಯಲ್ಲಿ ಅದೇ 1.5-ಲೀಟರ್ ಡ್ಯುಯಲ್ ವಿವಿಟಿ-ಐ ನಾಲ್ಕು ಸಿಲಿಂಡರ್ ಇನ್ ಲೈನ್ ಡಿಒಹೆಚ್ಸಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 106 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಯಾರಿಸ್ ಎಂಟಿ ಆವೃತ್ತಿಯು ಪ್ರತಿ ಲೀಟರ್‌ಗೆ 17.18 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಸಿವಿಟಿ ಆವೃತ್ತಿಯು ಲೀಟರ್‌ಗೆ 18.10 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹೊಸ ಯಾರಿಸ್ ಲಿಮಿಟೆಡ್ ಎಢಿಷನ್ ಅನ್ನು ಎರಡು ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಮಾರಾಟ ಮಾಡಬಹುದು.

ಯಾರಿಸ್ ಲಿಮಿಟೆಡ್ ಎಡಿಷನ್ ಬ್ಲ್ಯಾಕ್ ಮಾದರಿಯಲ್ಲಿ ರೂಫ್ ಮೌಂಟಡ್ ಏರ್ ವೆಂಟ್ಸ್, ಹೊಂದಾಣಿಕೆ ಮಾಡಬಹುದಾದ ಪವರ್ ಡ್ರೈವರ್ ಸೀಟ್ ಮತ್ತು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಅನ್ನು ಕೂಡ ಹೊಂದಿರಲಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಯಾರಿಸ್ ಮಾದರಿಯಲ್ಲಿ ಸುರಕ್ಷಯೆಗಾಗಿ 7 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಾಗೆಯೇ ಇನ್ಫ್ರಾರೆಡ್ ಕಟ್ ಆಫ್, ಎಚ್‌ಎಸ್‌ಇಎ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅನ್ನು ಹೊಂದಿರಲಿದೆ.

ಯಾರಿಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಮಾರುತಿ ಸುಜುಕಿ ಸಿಯಾಜ್, ಫೋಕ್ಸ್ ವ್ಯಾಗನ್ ಮತ್ತು ಸ್ಕೋಡಾ ರ‍್ಯಾಪಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಈ ಹೊಸ ಯಾರಿಸ್ ಲಿಮಿಟೆಡ್ ಎಡಿಷನ್ ಬ್ಲ್ಯಾಕ್ ಮಾದರಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.


Click it and Unblock the Notifications