ಟಯರ್ ನಿರ್ವಹಣೆಗೆ ಹೊಸ ಸಿಸ್ಟಂ ಅಭಿವೃದ್ಧಿಪಡಿಸಿದ ಮೈಕ್ರೋಸಾಫ್ಟ್

ಕಾರುಗಳಲ್ಲಿ ಚಾಲಕ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಭಾರತ ಸರ್ಕಾರವು ಬಹಳ ಹಿಂದೆಯೇ ಹಲವು ಹೊಸ ನಿಯಮಗಳನ್ನು ಜಾರಿಗೊಳಿಸಿತ್ತು. ಸದ್ಯಕ್ಕೆ ಎಲ್ಲಾ ಕಾರು ತಯಾರಕ ಕಂಪನಿಗಳು ಈ ನಿಯಮಗಳ ಆಧಾರದ ಮೇಲೆಯೇ ತಮ್ಮ ಕಾರುಗಳನ್ನು ಉತ್ಪಾದಿಸುತ್ತಿವೆ.

ಟಯರ್ ನಿರ್ವಹಣೆಗೆ ಹೊಸ ಸಿಸ್ಟಂ ಅಭಿವೃದ್ಧಿಪಡಿಸಿದ ಮೈಕ್ರೋಸಾಫ್ಟ್

ಇದರ ಜೊತೆಗೆ ಭಾರತೀಯ ಗ್ರಾಹಕರು ಸಹ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕಾರು ತಯಾರಕ ಕಂಪನಿಗಳು ಚಾಲಕ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸುತ್ತಿವೆ. ಖ್ಯಾತ ಟಯರ್ ಉತ್ಪಾದಕ ಕಂಪನಿಯಾದ ಬ್ರಿಡ್ಜ್‌ಸ್ಟೋನ್ ಹಾಗೂ ಜನಪ್ರಿಯ ಸಾಫ್ಟ್‌ವೇರ್ ಕಂಪನಿ ಮೈಕ್ರೋಸಾಫ್ಟ್ ಈ ನಿಟ್ಟಿನಲ್ಲಿ ಕೈಜೋಡಿಸಿವೆ.

ಟಯರ್ ನಿರ್ವಹಣೆಗೆ ಹೊಸ ಸಿಸ್ಟಂ ಅಭಿವೃದ್ಧಿಪಡಿಸಿದ ಮೈಕ್ರೋಸಾಫ್ಟ್

ಶಾಕ್ ನಿಂದ ಅಥವಾ ಬೇರೆ ಯಾವುದೇ ರೀತಿಯಲ್ಲಿ ಟಯರ್‌ಗಳಿಗೆ ಹಾನಿಯಾಗುವುದನ್ನು ಪತ್ತೆ ಹಚ್ಚುವ ಸಿಸ್ಟಂಗಳನ್ನು ಬ್ರಿಡ್ಜ್‌ಸ್ಟೋನ್ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಟಯರ್ ಡ್ಯಾಮೇಜ್ ಮಾನಿಟರಿಂಗ್ ಸಿಸ್ಟಂ (ಟಿಡಿಎಂಎಸ್) ಅಡಿಯಲ್ಲಿ ಟಯರ್‌ಗಳ ಮೇಲೆ ಸೆನ್ಸಾರ್ ಗಳನ್ನು ಇರಿಸಲಾಗುತ್ತದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಟಯರ್ ನಿರ್ವಹಣೆಗೆ ಹೊಸ ಸಿಸ್ಟಂ ಅಭಿವೃದ್ಧಿಪಡಿಸಿದ ಮೈಕ್ರೋಸಾಫ್ಟ್

ಟಯರ್‌ಗಳಲ್ಲಿ ಅಳವಡಿಸಲಾಗುವ ಈ ಸೆನ್ಸಾರ್ ಗಳು ರಸ್ತೆ ಗುಂಡಿಯೂ ಸೇರಿದಂತೆ ಟಯರ್‌ಗಳಿಗೆ ಆಗುವ ಹಾನಿಯ ಬಗ್ಗೆ ಮಾಹಿತಿ ನೀಡುತ್ತವೆ. ಮೈಕ್ರೋಸಾಫ್ಟ್‌ನ ಕನೆಕ್ಟೆಡ್ ವೆಹಿಕಲ್ ಪ್ಲಾಟ್‌ಫಾರ್ಮ್ (ಎಂಸಿವಿಪಿ) ಕ್ಲೌಡ್ ಫ್ರೇಮ್‌ವರ್ಕ್ ಹಾಗೂ ಆಲ್ಗಾರಿದಮ್ ಗಳ ಡೇಟಾದಿಂದ ಟಯರ್ ಗಳ ಸರ್ಫೇಸ್ ನಲ್ಲಿರುವ ದೋಷಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿದೆ.

ಟಯರ್ ನಿರ್ವಹಣೆಗೆ ಹೊಸ ಸಿಸ್ಟಂ ಅಭಿವೃದ್ಧಿಪಡಿಸಿದ ಮೈಕ್ರೋಸಾಫ್ಟ್

ಬ್ರಿಡ್ಜ್‌ಸ್ಟೋನ್ ಹಾಗೂ ಮೈಕ್ರೋಸಾಫ್ಟ್‌ನ ಈ ಟಯರ್ ಡ್ಯಾಮೇಜ್ ಮಾನಿಟರಿಂಗ್ ಸಿಸ್ಟಂನಿಂದ ರಸ್ತೆ ನಿರ್ವಹಣಾ ಸಂಸ್ಥೆಗಳಿಗೆ ಹೆಚ್ಚು ಪ್ರಯೋಜನವಾಗಲಿದೆ. ರಸ್ತೆಗಳನ್ನು ಸರಿಪಡಿಸಲು ಹಾಗೂ ರಸ್ತೆಗಳಲ್ಲಿ ಚಾಲಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಏಜೆನ್ಸಿಗಳು ಈ ಡೇಟಾವನ್ನು ಬಳಸಿಕೊಳ್ಳಬಹುದು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

30%ನಷ್ಟು ರಸ್ತೆ ಅಪಘಾತಗಳು ಟಯರ್ ಹಾನಿಯಿಂದ ಸಂಭವಿಸುತ್ತವೆ ಎಂದು ಬ್ರಿಡ್ಜ್‌ಸ್ಟೋನ್ ಹೇಳಿದೆ. ಕಾರು ತಯಾರಕ ಕಂಪನಿಗಳು ಸದ್ಯಕ್ಕೆ ಡ್ಯಾಮೇಜ್ ಮಾನಿಟರಿಂಗ್ ಸಿಸ್ಟಂಗಳನ್ನು ಬಳಸುತ್ತಿವೆ.

ಟಯರ್ ನಿರ್ವಹಣೆಗೆ ಹೊಸ ಸಿಸ್ಟಂ ಅಭಿವೃದ್ಧಿಪಡಿಸಿದ ಮೈಕ್ರೋಸಾಫ್ಟ್

ಈ ಸಿಸ್ಟಂ ಟಯರ್ ಗಳಲ್ಲಿ ಉಂಟಾಗುವ ವ್ಯತ್ಯಾಸವನ್ನು ಪತ್ತೆ ಹಚ್ಚುತ್ತದೆ. ನಂತರ ಕಾರನ್ನು ನಿಧಾನವಾಗಿ ಚಾಲನೆ ಮಾಡುವಂತೆ ಚಾಲಕನಿಗೆ ಸೂಚಿಸುತ್ತದೆ. ಕಂಪನಿಗಳ ಬಳಕೆಗಾಗಿ ಡ್ಯಾಮೇಜ್ ಮಾನಿಟರಿಂಗ್ ಸಿಸ್ಟಂ ಲಭ್ಯವಿದೆ ಎಂಬುದನ್ನು ಗಮನಿಸಬೇಕು.

Most Read Articles

Kannada
English summary
New Tyre Damage Monitoring System by Bridgestone Microsoft. Read in Kannada.
Story first published: Wednesday, July 1, 2020, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X