ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಹೊಸ ವೆನ್ಯೂ ಸ್ಪೋರ್ಟ್

ಹ್ಯುಂಡೈ ಕಂಪನಿಯು ತನ್ನ ವೆನ್ಯೂ ಕಾರನ್ನು ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಹ್ಯುಂಡೈ ವೆನ್ಯೂ ಕಾರನ್ನು ಎಸ್‌ಎಕ್ಸ್ ಹಾಗೂ ಎಸ್‌ಎಕ್ಸ್ (ಒ) ಮಾದರಿಗಳಲ್ಲಿ ಇಂಟೆಲಿಜೆಂಟ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ (ಐಎಂಟಿ) ಮಾರಾಟ ಮಾಡಲಾಗುವುದು.

ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಹೊಸ ವೆನ್ಯೂ ಸ್ಪೋರ್ಟ್

ಎಸ್‌ಎಕ್ಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.99 ಲಕ್ಷಗಳಾದರೆ, ಎಸ್‌ಎಕ್ಸ್ (ಒ) ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.11.08 ಲಕ್ಷಗಳಾಗಿದೆ. ಹೊಸ ಹ್ಯುಂಡೈ ವೆನ್ಯೂ ಐಎಂಟಿ ಕಾರಿನಲ್ಲಿ 1.0-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 118 ಬಿಹೆಚ್‌ಪಿ ಪವರ್ ಹಾಗೂ 172 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ ಕಂಪನಿಯು ಹ್ಯುಂಡೈ ವೆನ್ಯೂದ ಸ್ಪೋರ್ಟ್ ಮಾದರಿಯನ್ನು ಸಹ ಬಿಡುಗಡೆಗೊಳಿಸಿದೆ.

ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಹೊಸ ವೆನ್ಯೂ ಸ್ಪೋರ್ಟ್

ಹ್ಯುಂಡೈ ವೆನ್ಯೂ ಸ್ಪೋರ್ಟ್ ಕಾರನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು. ಪೆಟ್ರೋಲ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10.20 ಲಕ್ಷಗಳಾದರೆ, ಡೀಸೆಲ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.11.52 ಲಕ್ಷಗಳಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಹೊಸ ವೆನ್ಯೂ ಸ್ಪೋರ್ಟ್

ವೆನ್ಯೂ ಸ್ಪೋರ್ಟ್ ಕಾರನ್ನು ಎಸ್ಎಕ್ಸ್, ಎಸ್ಎಕ್ಸ್ (ಒ) ಹಾಗೂ ಎಸ್ಎಕ್ಸ್ ಪ್ಲಸ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಪೆಟ್ರೋಲ್ ಮಾದರಿಯಲ್ಲಿ 1.0 ಲೀಟರಿನ ಟರ್ಬೊ ಎಂಜಿನ್ ಅಳವಡಿಸಲಾಗಿದೆ.

ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಹೊಸ ವೆನ್ಯೂ ಸ್ಪೋರ್ಟ್

ಟಾಪ್ ಎಂಡ್ ಮಾದರಿಯಾದ ಎಸ್‌ಎಕ್ಸ್ ಪ್ಲಸ್ ಕಾರಿನಲ್ಲಿ ಹೊಸ ಪ್ಯಾಡಲ್ ಶಿಫ್ಟರ್‌ನೊಂದಿಗೆ 7 ಸ್ಪೀಡಿನ ಡಿಸಿಟಿ ಗೇರ್‌ಬಾಕ್ಸ್ ನೀಡಲಾಗಿದೆ. ಹೊಸ ಎಸ್‌ಎಂಟಿ ಗೇರ್‌ಬಾಕ್ಸ್ ಅನ್ನು ಎಸ್‌ಎಕ್ಸ್, ಎಸ್‌ಎಕ್ಸ್ (ಒ) ಮಾದರಿಗಳಲ್ಲಿ ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಹೊಸ ವೆನ್ಯೂ ಸ್ಪೋರ್ಟ್

ಡೀಸೆಲ್ ಎಂಜಿನ್ ಅನ್ನು 6 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಎಸ್ಎಕ್ಸ್ ಹಾಗೂ ಎಸ್ಎಕ್ಸ್ (ಒ) ಮಾದರಿಗಳಲ್ಲಿ ಅಳವಡಿಸಲಾಗಿದೆ. 1.5-ಲೀಟರಿನ ಈ ಡೀಸೆಲ್ ಎಂಜಿನ್, 98.4 ಬಿಹೆಚ್‌ಪಿ ಪವರ್ ಹಾಗೂ 240 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಹೊಸ ವೆನ್ಯೂ ಸ್ಪೋರ್ಟ್

ಹೊಸ ಹ್ಯುಂಡೈ ವೆನ್ಯೂದ ಸ್ಪೋರ್ಟ್ ಟ್ರಿಮ್ ಕಾರು ಗ್ರಿಲ್, ವ್ಹೀಲ್ ಆರ್ಕ್, ರೂಫ್ ರೇಲ್, ಸ್ಪೋರ್ಟ್ ಬ್ಯಾಡ್ಜ್‌, ರೆಡ್ ಬ್ರೇಕ್ ಕ್ಯಾಲಿಪರ್‌, ಹೊಸ ಗ್ರೇ ಬಂಪರ್ ಗಾರ್ನಿಷ್ ಗಳನ್ನು ಹೊಂದಿದೆ. ಇದರ ಜೊತೆಗೆ ಹ್ಯುಂಡೈ ಕಂಪನಿಯು ಹೊಸ ಡ್ಯುಯಲ್ ಟೋನ್ ಟೈಟಾನ್ ಗ್ರೇ, ಫ್ಯಾಂಟಮ್ ಬ್ಲ್ಯಾಕ್ ರೂಫ್ ಗಳನ್ನು ನೀಡಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಹೊಸ ವೆನ್ಯೂ ಸ್ಪೋರ್ಟ್

ಇನ್ನು ಕ್ಯಾಬಿನ್ ನಲ್ಲಿ ಹೊಸ ಫ್ಲಾಟ್ ಬಾಟಮ್ ಸ್ಟೀಯರಿಂಗ್ ವ್ಹೀಲ್, ರೆಡ್ ಸ್ಟಿಚಿಂಗ್, ಹೊಸ ಮೆಟಲ್ ಫೂಟ್ ಪೆಡಲ್, ಡಾರ್ಕ್ ಗ್ರೇ ಅಪ್ ಹೊಲೆಸ್ಟರಿ, ಕ್ನಾಬ್ ಮೇಲೆ ರೆಡ್ ಅಸೆಂಟ್ ಡೋರ್ ಟ್ರಿಮ್ ಮೇಲೆ ರೆಡ್ ಅಸೆಂಟ್ ಗಳಿದ್ದು ಇತರ ಮಾದರಿಗಳಿಗಿಂತ ಭಿನ್ನವಾಗಿ ಹಾಗೂ ಸ್ಪೋರ್ಟಿಯಾಗಿಸಿದೆ. ಐಎಂಟಿ ಒಂದು ಮ್ಯಾನುವಲ್ ಗೇರ್‌ಬಾಕ್ಸ್ ಆಗಿದ್ದು, ಡ್ರೈವರ್‌ ಕ್ಲಚ್ ಬದಲಿಸುವ ಅಗತ್ಯವಿಲ್ಲದ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ.

ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಹೊಸ ವೆನ್ಯೂ ಸ್ಪೋರ್ಟ್

ಈ ಟೆಕ್ನಾಲಜಿಯು ಗೇರ್ ಲಿವರ್‌ನೊಂದಿಗೆ ಇಂಟೆನ್ಸಿಟಿ ಸೆನ್ಸಾರ್ ಬಳಸುತ್ತದೆಂದು ಕಂಪನಿ ಹೇಳಿದೆ. ಈ ಸೆನ್ಸಾರ್ ಡ್ರೈವರ್ ಗೇರ್‌ ಬದಲಿಸುವಾಗ ಟ್ರಾನ್ಸ್ ಮಿಷನ್ ಕಂಟ್ರೋಲ್ ಯುನಿಟ್ ಗೆ ಸೂಚನೆ ನೀಡುತ್ತದೆ. ಇದರಿಂದಾಗಿ ಕ್ಲಚ್ ಅನ್ನು ಮ್ಯಾನುವಲ್ ಆಗಿ ನಿರ್ವಹಿಸುವ ಅಗತ್ಯವಿಲ್ಲ. ಇದರಿಂದಾಗಿ ನಗರದ ಟ್ರಾಫಿಕ್ ಜಾಮ್ ಸಮಯದಲ್ಲಿ ವಾಹನ ಚಾಲನೆ ಮಾಡುವಾಗ ಮೈಲೇಜ್ ಹಾಗೂ ಪರ್ಫಾಮೆನ್ಸ್ ಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ಹ್ಯುಂಡೈ ಹೇಳಿದೆ.

Most Read Articles

Kannada
English summary
New venue sport launched with iMT gearbox. Read in Kannada.
Story first published: Wednesday, July 22, 2020, 16:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X